Puneeth Rajkumar: ನಟ ಪುನೀತ್ ರಾಜ್‌ಕುಮಾರ್ ಪುತ್ಥಳಿ ದಿಢೀರ್ ತೆರವು
ಕನ್ನಡ ಚಿತ್ರರಂಗದ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಹಲವು ವೃತ್ತಗಳಲ್ಲಿ, ರಸ್ತೆಗಳಲ್ಲಿ ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಅಪ್ಪು ಪುತ್ಥಳಿಗಳನ್ನು ಇಡಲಾಗಿದೆ. ಆದರೆ, ಪುನೀತ್ ಅವರ ಪುತ್ಥಳಿಯನ್ನು ದಿಢೀರ್ ತೆರವು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಗುರುವಾರ ರಾತ್ರಿ ಈ ಗ್ರಾಮದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಪ್ರತಿಷ್ಠಾಪಿಸಲಾಗಿತ್ತು. ಆದರೆ, ಶುಕ್ರವಾರ ಬೆಳಿಗ್ಗೆಯೇ ಪೊಲೀಸರು ಅಪ್ಪು ಪುತ್ಥಳಿಯನ್ನು ತೆರವು ಮಾಡಿದ್ದಾರೆ ಎಂಬ ಆರೋಪಿಸಿದ್ದಾರೆ.

ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪುತ್ಥಳಿ ತೆರವು ಮಾಡಿದ್ದನ್ನು ಖಂಡಿಸಿ ಇದರಿಂದ ಗ್ರಾಮದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.
ಇಷ್ಟಕ್ಕೂ ಆಗಿದ್ದೇನು?: ಇಲ್ಲಿನ ಕನ್ನಡ ರಕ್ಷಣಾ ವೇದಿಕೆ ಅಪ್ಪು ಸೇನೆ ಸಂಘಟನೆಯವರು ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಪ್ರತಿಷ್ಠಾಪಿಸಲು ಮುಂದಾಗಿದ್ದರು. ಇದಕ್ಕಾಗಿ ಗ್ರಾಮ ಪಂಚಾಯಿತಿಯವರಿಗೆ ಮನವಿ ಕೂಡ ಮಾಡಿದ್ದರು. ಆದರೆ, ಪಂಚಾಯಿತಿಯವರು ಅನುಮತಿ ನೀಡಿರಲಿಲ್ಲ. ಬಳಿಕ ಸಂಘಟನೆಯವರು ಗುರುವಾರ ರಾತ್ರಿಯೇ ಇಲ್ಲಿ ಅದ್ಧೂರಿಯಾಗಿ ಪುತ್ಥಳಿ ಪ್ರತಿಷ್ಠಾಪಿಸಿದ್ದರು ಎಂದು ತಿಳಿದುಬಂದಿದೆ.

ನಿನ್ನೆ ಬೆಳಿಗ್ಗೆ ಪುತ್ಥಳಿಗೆ ಪೂಜೆ ಮಾಡಲು ಹೋದಾಗ ಪೊಲೀಸರು ಬಂದು ತಡೆದಿದ್ದರು. ಅಲ್ಲದೆ ಪುತ್ಥಳಿಯನ್ನು ತೆರವು ಮಾಡಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ್ದರಿಂದ ಪೊಲೀಸರು ಪುತ್ಥಳಿಯನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದು. ಬಳಿ ಸ್ವಲ್ಪ ಸಮಯದ ನಂತರ ಅದನ್ನು ಹೊನ್ನವಳ್ಳಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದ್ದರು.
ಈ ವಿಚಾರವಾಗಿ ಪಂಚಾಯಿತಿ ಅಧಿಕಾರಿಗಳು ಮತ್ತು ಸಂಘಟನೆಯ ಪದಾಧಿಕಾರಿಗಳ ನಡುವೆ ವಾಗ್ದಾದ ಕೂಡ ನಡೆಯಿತು. ಪೊಲೀಸ್ ಠಾಣೆಯ ಪಕ್ಕದಲ್ಲೇ ಈ ಪುತ್ಥಳಿ ಪ್ರತಿಷ್ಠಾಪನೆಗೆ ಅನುಮತಿ ನೀಡಿರಲಿಲ್ಲ. ಅಲ್ಲದೆ, ಇಲ್ಲಿ ರಾಜ್ಯ ಹೆದ್ದಾರಿ ಕೂಡ ಇದ್ದು, ಪುತ್ಥಳಿ ನಿರ್ಮಿಸುವುದು ಸರಿಯಲ್ಲ. ಈಗಲೂ ಅಷ್ಟೇ, ಮುಂದೆಯೂ ಅಷ್ಟೇ ಇಲ್ಲಿ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪೊಲೀಸರು ಖಡಕ್ ಆಗಿ ಹೇಳಿದ್ದಾರೆ.
ಅಲ್ಲದೆ ಈ ಜಾಗದಲ್ಲಿ ನಾಳೆ ಹೊನ್ನವಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಲ್ಪತರು ನಾಡಿನ ಕನ್ನಡ ಹಬ್ಬ ಆಚರಣೆಗು ಕೂಡ ಸಂಘಟನೆಯವರು ಅನುಮತಿ ಕೇಳಿದ್ದರು. ಅದಕ್ಕೂ ಅನುಮತಿ ಕೊಡಲ್ಲ ಎಂದು ಪಂಚಾಯಿತಿ ಪಿಡಿಒ ಖಡಕ್ ಆಗಿ ಹೇಳಿರುವುದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪುತ್ಥಳಿ ಪ್ರತಿಷ್ಠಾಪಿಸುವ ವಿಚಾರವಾಗಿ ಪಂಚಾಯಿತಿ ಅಧಿಕಾರಿಗಳು ಹಾಗು ಅಪ್ಪು ಅಭಿಮಾನಿಗಳ ನಡುವೆ ಗಲಾಟೆಯು ಹೊನ್ನವಳ್ಳಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ವಿಚಾರದಲ್ಲಿ ಪೊಲೀಸರು ಕೂಡ ಮಧ್ಯಪ್ರವೇಶಿಸಿದ್ದು, ಭದ್ರತೆಗಾಗಿ ಆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications