Prakash Raj: ಪಾಕಿಸ್ತಾನ ಮೂವಿ ಬ್ಯಾನ್ ಚರ್ಚೆ: ಅದೇನು "ಬ್ಲೂ ಫಿಲ್ಮಾ" ಎಂದ ನಟ ಪ್ರಕಾಶ್ ರಾಜ್ ಕೆಂಡ!
ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಹೊಸದಾಗಿ ಉಗ್ರರ ಮೇಲೆ ಯಾವ ಮಾದರಿಯ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯುತ್ತಿವೆ. ಈ ರೀತಿ ಇರುವಾಗಲೇ ನಟ ಪ್ರಕಾಶ್ ರಾಜ್ ಅವರು ಪಾಕ್ ಹಾಗೂ ಪಾಕ್ ನಟರ ಪರವಾಗಿ ಹೇಳಿರುವ ಮಾತು ವಿವಾದಕ್ಕೆ ಕಾರಣವಾಗಿದೆ. ದೇಶದಲ್ಲಿ ನಡೆಯುವ ವಿವಿಧ ವಿಷಯಗಳ ಬಗ್ಗೆ ಪ್ರಕಾಶ್ ರಾಜ್ ಅವರು ರಿಯಾಕ್ಟ್ ಮಾಡಿರುವುದು ಕೆಲವೊಮ್ಮೆ ಭಾರೀ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದೆ. ಆದರೆ ಇದೀಗ ದೇಶದಲ್ಲೇ ಪ್ರತೀಕಾರದ ಕೂಗು ಎದ್ದಿರುವಾಗ ಅದೇನು ನೀಲಿಚಿತ್ರನಾ ಅಂತ ಪ್ರಕಾಶ್ ರಾಜ್ ಕೇಳಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟಕ್ಕೂ ಪಾಕ್ ಪರವಾಗಿ ಪ್ರಕಾಶ್ ರಾಜ್ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ದೇಶದಲ್ಲಿ ಇದೀಗ ಭಾರತ Vs ಪಾಕ್ ನಡುವೆ ಯುದ್ಧವಾಗಲಿದೆ ಎನ್ನುವ ಭೀತಿ ಎದುರಾಗಿರುವಾಗಲೇ ಗಡಿ ಭಾಗದಲ್ಲಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ದಿನೇ ದಿನ ಗಡಿ ಭಾಗದಲ್ಲಿ ಪಾಕಿಸ್ತಾನವು ಪ್ರಚೋದಾತ್ಮಕ ದಾಳಿ ಮಾಡುತ್ತಿದೆ. ಪಾಕಿಸ್ತಾನವು ಗಡಿ ಭಾಗದಲ್ಲಿ ನಿಯಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ಮಾಡುತ್ತಿದೆ. ಪಾಕಿಸ್ತಾನದ ಈ ಗುಂಡಿನ ದಾಳಿಗೆ ಭಾರತವು ಸಹ ಸರಿಯಾಗಿಯೇ ತಿರುಗೇಟು ನೀಡುತ್ತಿದೆ. ಮಾತ್ರವಲ್ಲ ದೇಶದಲ್ಲಿ ಪಾಕ್ ಹಾಗೂ ಪಹಲ್ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹವು ಜೋರಾಗಿದೆ. ಈ ರೀತಿ ಇರುವಾಗಲೇ ದೇಶದಲ್ಲಿ ಕೆಲವರು ನೀಡುತ್ತಿರುವ ಹೇಳಿಕೆಯು ಭಾರೀ ಚರ್ಚೆಗೆ ಹಾಗೂ ಆಕ್ರೋಶಕ್ಕೆ ಗುರಿಯಾಗಿದೆ.

ನಟ ಪ್ರಕಾಶ್ ರಾಜ್ ಅವರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಆಗಿರುವ ದಾಳಿಯ ಬಗ್ಗೆ ಆಕ್ರೋಶ ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿಯ ಬೆನ್ನಲ್ಲೇ ಪಾಕ್ ವಿರುದ್ಧ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕೆಲವೊಂದು ಕ್ರಮಗಳಿಂದ ಪಾಕ್‌ಗೆ ಭಾರೀ ಶಾಕ್ ಎದುರಾಗಿದೆ. ಭಾರತವು ನೀಡಿರುವ ಶಾಕ್‌ನಿಂದ ಪಾಕ್ ಈಗಾಗಲೇ ಕಂಗಾಲಾಗಿದೆ. ಅದರಲ್ಲಿ ಪಾಕಿಸ್ತಾನದ ಯೂಟ್ಯೂಬ್ ಚಾನೆಲ್‌ಗಳ ನಿಷೇಧ, ಹಾಡುಗಳ ಪ್ರಸಾರ ತಡೆ ಹಾಗೂ ಪಾಕಿಸ್ತಾನದ ಸಿನಿಮಾಗಳ ಪ್ರಸಾರವನ್ನು ಭಾರತದಲ್ಲಿ ತಡೆಯುವುದು ಸಹ ಸೇರಿದೆ. ಈಗ ಪಾಕ್ ಸಿನಿಮಾ ನಿಷೇಧ ಮಾಡಿರುವುದಕ್ಕೆ ಪ್ರಕಾಶ್ ರಾಜ್ ಅವರು ವ್ಯಂಗ್ಯವಾಡಿದ್ದು ಭಾರೀ ವಿರೋಧ ವ್ಯಕ್ತವಾಗಿದೆ.
ಪಾಕಿಸ್ತಾನದ ನಟ ಫವಾದ್ ಖಾನ್ ನಟಿಸಿರುವ ಅಬೀರ್ ಗುಲಾಲ್ ಎನ್ನುವ ಸಿನಿಮಾವನ್ನು ಭಾರತದಲ್ಲಿ ಭಾರತ ಸರ್ಕಾರವು ಬ್ಯಾನ್ ಮಾಡಿದೆ. ಈ ಮೂವಿ ನಿಷೇಧ ಮಾಡಿರುವುದಕ್ಕೆ ಇದೇನು ನೀಲಿಚಿತ್ರನಾ / ಬ್ಲೂಮೂವಿನಾ ಅಂತ ಪ್ರಕಾಶ್ ರಾಜ್ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ಯಾವುದೇ ಸಿನಿಮಾವನ್ನು ನಿಷೇಧ ಮಾಡುವುದನ್ನು ನಾನು ತೀವ್ರವಾಗಿ ವಿರೋಧ ಮಾಡುತ್ತೇನೆ. ಸಿನಿಮಾವನ್ನು ನಿಷೇಧ ಮಾಡುವ ಬಗ್ಗೆ ಜನರೇ ನಿರ್ಧಾರ ಮಾಡಲಿ. ಅದೇನು ಬ್ಲೂಫಿಲ್ಮಾ ಇಲ್ಲವೇ ಮಕ್ಕಳ ಮೇಲಿನ ದೌರ್ಜನ್ಯದ ಸಿನಿಮಾವೇ ಅಲ್ಲ ಎಂದಾದ ಮೇಲೆ ನೀವು ಯಾವುದೇ ಚಿತ್ರವನ್ನು ನಿಷೇಧ ಮಾಡಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
ಈ ಸಿನಿಮಾ ಮೇ 9ಕ್ಕೆ ರಿಲೀಸ್ ಆಗಬೇಕಿತ್ತು. ಈ ಸಿನಿಮಾದ ನಟಿಯಾಗಿ ಬಾಲಿವುಡ್‌ನ ಫವಾದ್ ಖಾನ್ ನಟಿಸಿದ್ದರು. ಆದರೆ, ಈ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಕೇಂದ್ರ ಸರ್ಕಾರವು ಅನುಮತಿ ನೀಡಿಲ್ಲ.












Click it and Unblock the Notifications