Karna Serial: ವಿಘ್ನಗಳನ್ನ ದಾಟಿ ಕೊನೆಗೂ ಬಂದ 'ಕರ್ಣ', ಕಿರಣ್‌ ರಾಜ್‌ ಫ್ಯಾನ್ಸ್‌ ಖುಷ್‌

ಕನ್ನಡತಿ ಸೀರಿಯಲ್‌ ಮೂಲಕ ಎಲ್ಲರ ಮನೆಮಾತಾಗಿದ್ದ ಕಿರಣ್‌ ರಾಜ್‌ ಇದೀಗ ಸುಮಾರು ಎರಡು ವರ್ಷಗಳ ನಂತರ ಮತ್ತೆ ಕಿರುತೆರೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಜೀ ವಾಹಿನಿಯಲ್ಲಿ ಕರ್ಣ ಸಿನಿಮಾ ಮೂಲಕ ಕಿರಣ್‌ ರಾಜ್‌ ಇಷ್ಟೊತ್ತಿಗಾಗಲೇ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಬೇಕಿತ್ತು. ಆದರೆ ಆರಂಭಕ್ಕೂ ಮುನ್ನವೇ ವಿವಾದದ ಗೂಡಾಗಿದ್ದ ಕರ್ಣ ಸೀರಿಯಲ್‌ ಇದೀಗ ಮನೆ ಮನಗಳನ್ನು ತಲುಪಲು ರೆಡಿಯಾಗಿದೆ. ಎಲ್ಲ ವಿಘ್ನಗಳನ್ನು ದಾಟಿಕೊಂಡು ಜುಲೈ 3ರ ಗುರುವಾರದಿಂದಲೇ ಕರ್ಣ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಡುತ್ತಿದೆ. ಇದರಿಂದ ನಟ ಕಿರಣ್‌ ರಾಜ್‌ ಅಭಿಮಾನಿಗಳು ಹಾಗೂ ಕಿರುತೆರೆ ಪ್ರೇಕ್ಷಕರ ಸಂತಸ ದುಪ್ಪಟ್ಟಾಗಿದೆ.

ಎಲ್ಲಾ ಸಂಕಷ್ಟಗಳನ್ನು ದಾಟಿ ಬರುತ್ತಿದ್ದಾನೆ ಕರ್ಣ ಎಂದು ಜೀ ವಾಹಿನಿ ಪೋಸ್ಟರ್‌ ಹಂಚಿಕೊಂಡಿದೆ. ಈ ಮೊದಲು ಸೀರಿಯಲ್‌ ರಿಲೀಸ್‌ ಡೇಟ್‌ ಕೂಡ ಘೋಷಣೆಯಾಗಿತ್ತು. ಎಲ್ಲರೂ ಕಾತರದಿಂದ ಕರ್ಣನನ್ನು ಕಾಣಲು ಕಾಯುತ್ತಿದ್ದರು. ಆದರೆ ಈ ಸೀರಿಯಲ್‌ ಕಲಾವಿದರಿಗೆ ಕಾನೂನು ಸಂಕಷ್ಟ ಎದುರಾಗಿದ್ದರಿಂದ ಧಾರಾವಾಹಿ ತೆರೆ ಕಾಣುವುದು ತಡವಾಗಿದೆ. ಈ ಸೀರಿಯಲ್‌ನಲ್ಲಿ ನಟಿ ಭವ್ಯಗೌಡ ಹಾಗೂ ನವ್ಯಾ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ ವಾಹಿನಿ ಪ್ರೋಮೋ ಕೂಡ ಹಂಚಿಕೊಂಡಿತ್ತು.

actor-kiran-raj-serial-karna-to-premiere-from-july-3

ಆದರೆ ವರದಿಗಳ ಪ್ರಕಾರ ಬೇರೆ ವಾಹಿನಿ ಜೊತೆ ಮಾಡಿಕೊಂಡಿದ್ದ ಈ ಸೀರಿಯಲ್‌ ನಟಿಯ ಒಪ್ಪಂದವು ಅಡ್ಡಿಯಾಗಿತ್ತು. ಅದು ನಟಿ ಭವ್ಯಗೌಡ ಎಂದೂ ಹೇಳಲಾಗಿತ್ತು. ಇದಕ್ಕೆ ಭವ್ಯಗೌಡ ಕೂಡ ಕಾನೂನು ಮೂಲಕವೇ ಉತ್ತರ ನೀಡುತ್ತೇನೆ ಎಂದು ತಿಳಿಸಿರುವುದಾಗಿ ತಿಳಿದು ಬಂದಿದೆ. ಈಗ ಕಾನೂನು ಸಮಸ್ಯೆಗಳು ಬಗೆಹರಿಸಿಕೊಂಡು ಕೊನೆಗೂ ಕರ್ಣನನ್ನು ಜೀ ವಾಹಿನಿ ಪ್ರೇಕ್ಷಕರ ಮುಂದೆ ಇಡುತ್ತಿದೆ.

ಒಟ್ಟಾರೆ ಎಲ್ಲ ಬೆಳವಣಿಗೆಗಳ ನಡುವೆ ಕರ್ಣ ಗುರುವಾರಿಂದ ಎಲ್ಲರ ಮನೆಗಳಿಗೆ ಬರುತ್ತಿದ್ದಾನೆ ಎಂಬುವುದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಕನ್ನಡತಿ ಸೀರಿಯಲ್‌ನಲ್ಲಿ ನಟನೆಯ ಮೂಲಕವೇ ಎಲ್ಲರ ಮನಗೆದ್ದಿದ್ದ ಕಿರಣ್‌, ವಿಭಿನ್ನ ಸ್ಟೈಲ್‌, ಲುಕ್‌ಗಳಿಂದ ಹುಡುಗಿಯರ ನೆಚ್ಚಿನ ನಟನಾಗಿ ಹೃದಯಕದ್ದಿದ್ದರು. ಕರ್ಣನಿಗೆ ಜೋಡಿಯಾಗಿ ನಮ್ರತಾ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಟಿ ಭವ್ಯಗೌಡ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಇಬ್ಬರಲ್ಲಿ ಒಬ್ಬರದ್ದು ನೆಗೆಟಿವ್‌ ಪಾತ್ರ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಹಾಗಾದರೆ ಕರ್ಣನಿಗೆ ಯಾರು ನಾಯಕಿ ಎಂಬ ಕುತೂಲಹಕ್ಕೆ ಗುರುವಾರವೇ ಉತ್ತರ ಸಿಗಲಿದೆ. ಸುಮಾರು ಎರಡು ವರ್ಷಗಳ ಕನಸುಗಳನ್ನು ತೆರೆ ಮೇಲೆ ತರಲು ಹೋರಾಡಿದ್ದೇವೆ. ಕರ್ಣ ಸೀರಿಯಲ್‌ ಆರಂಭಕ್ಕೆ ಕೆಲವು ತೊಡಕುಗಳು ಎದುರಾಗಿದ್ದು ಎಲ್ಲವನ್ನೂ ಬಗೆಹರಿಸಿಕೊಂಡು ಶೀಘ್ರದಲ್ಲಿಯೇ ನಿಮ್ಮ ಮುಂದೆ ಬರಲಿದ್ದೇವೆ. ನನ್ನ ಮೇಲೆ ಇದೆ ಪ್ರೀತಿ, ಪ್ರೋತ್ಸಾಹ ನೀಡಿ ಎಂದು ಕಿರಣ್‌ ರಾಜ್‌ ಇನ್‌ಸ್ಟಾಗ್ರಾಮ್‌ ಈ ಹಿಂದೆ ವಿಡಿಯೋದಲ್ಲಿ ಕೇಳಿಕೊಂಡಿದ್ದರು.

ನಮ್ರತಾಗೌಡ ಕೂಡ ವಿಡಿಯೊ ಹಂಚಿಕೊಂಡು ನಿಮ್ಮ ಮುಂದೆ ಬೇಗನೇ ಬರುತ್ತೇವೆ ಎಂದು ಹೇಳಿಕೊಂಡಿದ್ದರು. ಈ ಸೀರಿಯಲ್‌ನಲ್ಲಿ ನಮ್ರತಾ ಕೂಡ ವಿಭಿನ್ನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಸದಾ ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿರುವ ನಮ್ರತಾ, ಅಭಿಮಾನಿಗಳಿಗೆ ತಮ್ಮ ಲೈಫ್‌ಸ್ಟೈಲ್‌ ಬಗ್ಗೆ ಅಪ್‌ಡೇಟ್ಸ್‌ ನೀಡುತ್ತಿರುತ್ತಾರೆ. ಕರ್ಣ ಪ್ರೊಮೋದಲ್ಲಿ ಕಿರಣ್‌ರಾಜ್‌ ಮನೆಯವರಿಂದಲೇ ಅವಮಾನಕ್ಕೆ ಒಳಾಗಗುವ ಆತ ಸಮಾಜದಲ್ಲಿ ಹೇಗೆ ಗುರುತಿಸಿಕೊಂಡಿದ್ದಾನೆ? ವೃತ್ತಿಯಲ್ಲಿ ವೈದ್ಯನಾಗಿದ್ದರೂ ಮನೆಯವರು ಆತನನ್ನು ಕೀಳಾಗಿ ಕಾಣುವ ಮನಸ್ಸು ಇದ್ದರೂ ಹೊರಗಡೆ ಕುಟುಂಬದಿಂದಲೇ ನಾನು ಎಂಬ ಆತನ ಮಾತುಗಳು ವ್ಯಕ್ತವಾಗಿವೆ. ನಿಜಕ್ಕೂ ಕರ್ಣನ ಕಥೆ ಏನು ಎಂದು ಮುಂದಿನ ದಿನಗಳಲ್ಲಿ ಪ್ರೇಕ್ಷಕರಿಗೆ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+