Darshan Thoogudeepa: ಭಾರೀ ವೈರಲ್ ಆಗುತ್ತಿದೆ ನಟ ದರ್ಶನ್ SSLC ಅಂಕಪಟ್ಟಿ, ಸಂಪೂರ್ಣ ವಿದ್ಯಾಭ್ಯಾಸದ ವಿವರ ಇಲ್ಲಿದೆ
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದೆ. ಈಗಾಗಲೇ ಪ್ರಕರಣದ ಚಾರ್ಜ್ ಶೀಟ್ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಇದರ ನಡುವೆಯೇ ದರ್ಶನ್‌ನ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ. ಹಾಗಾದ್ರೆ ವಿದ್ಯಾಭ್ಯಾದ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಹೊರತರಲು ಪತ್ನಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಮೊದಲ ಬಾರಿ ತಾಯಿ ಜೈಲಿಗೆ ಭೇಟಿ ನೀಡಿದ್ದು, ಈ ವೇಳೆ ತುಂಬಾ ವರ್ಷಗಳ ಬಳಿಕ ತಾಯಿ ಕಂಡು ದರ್ಶನ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನಾದರೂ ಅವರಿಗೆ ಕುಟುಂಬ ಹಾಗೂ ತಾಯಿ ಬೆಲೆ ಏನೆಂದು ತಿಳಿದುಕೊಂಡು ಸರಿ ದಾರಿಯಲ್ಲಿ ನಡೆಯುತ್ತಾರೆಯಾ ಎಂದು ಕಾದುನೋಡಬೇಕಿದೆ.

ಈಗಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಕುಳಿತು ರೆಸಾರ್ಟ್ ರೀತಿಯಲ್ಲೇ ಪಾರ್ಟಿ ಮಾಡುವ ಮೂಲಕ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ಹರಟೆ ಹೊಡೆಯುತ್ತಿರುವ ಫೋಟೋ ಹಾಗೂ ವಿಐಪಿ ಸೆಲ್‌ನಿಂದಲೇ ದರ್ಶನ್ ರೌಡಿಶೀಟರ್‌ಗಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ವಿಡಿಯೋ ಭಾರೀ ವೈರಲ್ ಆಗಿದ್ದವು. ಇದಕ್ಕೆ ವ್ಯಾಪಕ ಆಕ್ರೋಶಗಳು ಕೂಡ ಭುಗಿಲೆದ್ದಿದ್ದವು.
ಬಳಿಕ ಎಚ್ಚೆತ್ತ ಸರ್ಕಾರ ಅಲ್ಲಿನ 9 ಜೈಲಾಧಿಕಾರಿಗಳನ್ನು ಮಾನತು ಮಾಡಿತ್ತು. ಅಲ್ಲದೆ ಕೋರ್ಟ್ ಆದೇಶದ ಮೇರೆಗೆ ಪೊಲೀಸರು ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದರು. ಅಲ್ಲದೆ ಇನ್ನುಳಿದ ಆರೋಪಿಗಳನ್ನು ಕೂಡ ಬೇರೆಡೆಗೆ ಶಿಫ್ಟ್ ಮಾಡಿದ್ದರಿಂದ ದಾಸ ಒಬ್ಬೊಂಟಿಯಾಗುವಂತೆ ಆಯಿತು.
ಅದೇನೆ ಇರಲಿ ನಟ ದರ್ಶನ್ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ಯಾವ್ಯಾವ ವಿವಷಯಗಳಲ್ಲಿ ಎಷ್ಟು ಅಂಕಗಳನ್ನು ಪಡೆದಿದ್ದಾರೆ, ವಿದ್ಯಾಭ್ಯಾಸ ನಿಲ್ಲಿಸಲು ಕಾರಣ ಏನು ಎನ್ನುವುದನ್ನು ಸ್ವತಃ ದರ್ಶನ್ ಅವರೇ ಈ ಹಿಂದೆ ಹೇಳಿಕೊಂಡಿದ್ದಾರೆ ಅಂತಾ ಮೂಗಳಿಂದ ತಿಳಿದುಬಂದಿದೆ.
ಕ್ರಾಂತಿ ಸಿನಿಮಾದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸುವ ಸಂದೇಶ ಇತ್ತು. ಇದೇ ಸಿನಿಮಾನ ಪ್ರಚಾರದ ವೇಳೆ ಮಾಧ್ಯಮವೊಂದರ ಬಳಿ ನಟ ದರ್ಶನ್ ತಮ್ಮ ವಿದ್ಯಾಭ್ಯಾಸದ ಬಗ್ಗೆ ವಿವರಿಸಿದ್ದರು. ನಾನು ಮೈಸೂರಿನಲ್ಲಿ ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದೇನೆ. ಬಳಿಕ ವೈಶಾಲಿಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದೆ. ಎಸ್‌ಎಸ್‌ಎಲ್‌ಸಿವರೆಗೂ ಮೈಸೂರಿನಲ್ಲೇ ಓದಿದ್ದು. ಅದೇ ಕೊನೇ ಎಂದಿದ್ದರು.
ನಾನು ತುಂಬಾ ಆವರೇಜ್ ಸ್ಟುಡೆಂಟ್. ಯಾವುದಾರೂ ಒಂದು ಕಾರಣಕ್ಕೆ ತರಗತಿಯಿಂದ ಹೊರಗಡೆ ನಿಲ್ಲುತ್ತಿದ್ದ ವಿದ್ಯಾರ್ಥಿ ನಾನೇ ಆಗಿರುತ್ತಿದೆ. ಎಲ್ಲಾ ವಿಷಯದಲ್ಲೂ ನಾನು ತುಂಬಾ ವೀಕ್ ಇದ್ದದೆ. ತರಗತಿ ಹೊರಗಡೆ ನಿಲ್ಲುತ್ತಿದ್ದ ವಿದ್ಯಾರ್ಥಿನೇ ನಾನು ಎಂದು ಹೇಳಿದ್ದರು.
ಇನ್ನು 10ನೇ ತರಗತಿಯಲ್ಲಿ ನನ್ನ ಅಂಕಗಳು 210. ಆಗಿನ ಕಾಲದಲ್ಲಿನ 35 ಹಿಂದಿನ 80 ಅಂಕಗಳಿಗೆ ಸಮ. ಬಳಿಕ ನಮ್ಮ ಮನೆಯವರು ನನ್ನನ್ನು ಮೆಕಾನಿಕಲ್ ಡಿಪ್ಲಾಮಾಗೆ ಸೇರಿಸಿದರು. ಜೆಎಸ್‌ಎಸ್ ಪಾಲಿಟಿಕ್ಸ್‌ನಲ್ಲಿ ಸೇರಿಸಿದರು. 6 ತಿಂಗಳು ಹೋಗಿ ಬಳಿಕ ಅಲ್ಲಿಗೆ ವಿದ್ಯಾಭ್ಯಾಸ ನಿಲ್ಲಿಸಿದೆ. ನನ್ನ ವಿದ್ಯಾಭ್ಯಾಸ 10ನೇ ತರಗತಿಯೇ ಕೊನೆ ಆಯ್ತು ಎಂದು ಹೇಳಿದ್ದರು. ಇದೀಗ ದರ್ಶನ್ ವಿದ್ಯಾಭ್ಯಾಸದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.












Click it and Unblock the Notifications