Actor Darshan: ವಿನೀಶ್‌ ಬೇಡಿಕೆಗೆ ಅಸ್ತು ಎಂದ ದೈವ ಸ್ವರೂಪಿ ಬಸವಣ್ಣ: ನಟ ದರ್ಶನ್‌ಗೆ ಶುಭಸುದ್ದಿ

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದಾಗ ಅವರನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಜಯಲಕ್ಷ್ಮಿ ಅವರು ರಾಜ್ಯದಲ್ಲಿರುವ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ, ವ್ರತಗಳನ್ನು ಮಾಡಿದ್ದರು. ಜೊತೆಗೆ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟ ಹೊರಬರಲೆಂದು ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ಇದರ ಪ್ರತಿಫಲವೆಂಬಂತೆ ದರ್ಶನ್‌ಗೆ ಜಾಮೀನು ದೊರೆತು ಇದೀಗ ಹೊರಗಡೆ ಇದ್ದಾರೆ. ಆದರೂ ಅವರಿಗೆ ಈಗಲೂ ಸಂಕಷ್ಟಗಳು ಎದುರಾಗುತ್ತಲೇ ಇವೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿ ಕೋರ್ಟ್‌ ಆದೇಶ ಹೊರಡಿಸಿತ್ತು. ಬಿಡುಗಡೆ ಕೂಡ ಆಗಿದ್ದಾರೆ. ಇದೀಗ ಈ ಜಾಮೀನು ಮಂಜೂರು ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ್ದು, ನಟ ದರ್ಶನ್‌ ಅವರಿಗೆ ಮತ್ತೊಂದು ತಲೆನೋವು ಎದುರಾದಂತಾಗಿದೆ. ಮತ್ತೊಂದೆಡೆ ಕುಟುಂಬಸ್ಥರು ದರ್ಶನ್‌ ಎಲ್ಲಾ ಸಮಸ್ಯೆಗಳಿಂದ ಬೇಗ ಹೊರಗಡೆ ಬರಲಿ ಎಂದು ಮತ್ತೆ ದೇವಸ್ಥಾನಗಳ ಮೊರೆ ಹೋಗುತ್ತಿದ್ದಾರೆ.

Actor Darshan s Son Vineesh Request Granted by Chamundeshwari Temple bull

ಇದೀಗ ಕುಟುಂಬಸ್ಥರೆಲ್ಲಾ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ತಾಯಿ ಮೀನಾ ತೂಗುದೀಪ ಅವರು ಸಹ ಮಗ ದರ್ಶನ್‌ ಒಳಿತಿಗಾಗಿ ಚಾಮುಂಡೇಶ್ವರಿ ತಾಯಿಯಲ್ಲಿ ಬೇಡಿಕೊಂಡಿದ್ದಾರೆ. ಮತ್ತೊಂದೆಡೆ ದೈವ ಸ್ವರೂಪಿ ಬಸವಣ್ಣನ ಮುಂದೆ ಕುಳಿತು ವಿನೀಶ್‌ ಅಪ್ಪನಿಗೆ ಒಳಿತಾಗಲೆಂದು ಕೈಯೊಡ್ಡಿ ಬೇಡಿಕೊಂಡಾಗ, ಆ ಬಸವಣ್ಣ ವಿನೀಶ್‌ ಕೈ ಮೇಲೆ ಬಲಗಾಲನ್ನಿಟ್ಟಿ ಅಸ್ತು ಎಂದು ಸೂಚಿಸಿದೆ. ಇದರರ್ಥ ನಟ ದರ್ಶನ್‌ಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ ಎಂದರ್ಥ.

ನಟ ದರ್ಶನ್‌ಗೆ ಸಂಕಷ್ಟಗಳ ಸರಮಾಲೆ: ಮತ್ತೊಂದೆಡೆ ಪೊಲೀಸರು ದರ್ಶನ್ ಬಳಿ ಗನ್ ವಶಪಡಿಸಿಕೊಂಡ ಕೂಡಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಅವರು ಗನ್ ಬೇಕೇ ಬೇಕು ಅಂತಾ ಹಠ ಹಿಡಿದಿದ್ದರು. ಆದರೆ ನಂತರ ದರ್ಶನ್ ಗನ್ ಪೊಲೀಸರಿಗೆ ಒಪ್ಪಿಸಲೇಬೇಕಾಯಿತು.

ಆದರೆ, ದರ್ಶನ್ ಮತ್ತೆ ಅರ್ಜಿ ಸಲ್ಲಿಸಿ ಒಂದು ತಿಂಗಳಾಗಿದೆ. ಅರ್ಜಿ ವಿಚಾರಣೆಗೆ ಪಟ್ಟಿ ಮಾಡಿಸದ ದರ್ಶನ್‌ ಪರ ವಕೀಲರು ಸುಮ್ಮನಾಗಿಬಿಟ್ಟಿದ್ದಾರೆ. ಇದನ್ನು ನೋಡಿದರೆ ಗನ್ ಪಡೆಯೋಕೆ ದರ್ಶನ್ ಮರೆತಿರುವಂತೆ ಕಾಣಿಸುತ್ತಿದೆ.

ದರ್ಶನ್‌ಗೆ ನೊಟೀಸ್ ನೀಡಿ, ಅವರ ಬಳಿಯಿದ್ದ ಜರ್ಮನ್ ಮೇಡ್ ಗನ್ ವಶಕ್ಕೆ ಪಡೆಯಲಾಗಿತ್ತು. ನಂತರ ಗನ್ ಬೇಕೆಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ ದರ್ಶನ್ ಅವರು ಸೆಲೆಬ್ರಿಟಿ ಆಗಿರುವುದರಿಂದ ಸೇಫ್ಟಿಗೆ ಗನ್ ಬೇಕು ಎಂದು ಕೇಳಿದ್ದರು.

ಆದರೆ, ಅರ್ಜಿ‌ ಹಾಕಿ‌ ಇದೀಗ ಸುಮ್ಮನಾಗಿರುವ ನಟ ದರ್ಶನ್ ಅವರು ಈಗಿರುವ ಸಂಕಷ್ಟಗಳ ನಡುವೆ ಗನ್ ಮರೆತು ಬಿಟ್ಟಿದ್ದಾರೆ ಎಂದು ಕಾಣುತ್ತಿದೆ. ಜಾಮೀನು ಪಡೆದು ದರ್ಶನ್ ಹೊರಗೆ ಬಂದರೂ ಸಹ ಅವರಿಗೆ ಸರಮಾಲೆಯೇ ಎದುರಾಗಿವೆ.

ಪೊಲೀಸರು ನಟ ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳ ಜಾಮೀನು ರದ್ದುಕೋರಿ ಸುಪ್ರೀಂಗೆ ಅರ್ಜಿ‌ ಸಲ್ಲಿಸಿದ್ದಾರೆ. ಆದ್ದರಿಂದ ಇದು ಏನಾಗುತ್ತೋ ಏನೋ ಅನ್ನೋ ಭಯ ದರ್ಶನ್‌ಗೆ ಕಾಡುತ್ತಿದೆ. ಮಾರ್ಚ್ ಮಧ್ಯದಲ್ಲಿ ಈ ಅರ್ಜಿ ವಿಚಾರಣೆಗೆ ಬರೋ ಸಾಧ್ಯತೆಯಿದ್ದು, ದರ್ಶನ್ ಪರ ಕಪಿಲ್ ಸಿಬಲ್ ವಾದ ಮಂಡನೆ ಮಾಡಲಿದ್ದಾರೆ.

ದರ್ಶನ್‌ಗೆ ಇನ್ನೂ ಕೂಡ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆಯಂತೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ಗೆ ಆಪರೇಶನ್ ಮಾಡಬೇಕಾ ಅಥವಾ ಬೇಡವಾ ಎನ್ನುವ ಚರ್ಚೆಗಳು ಇದೀಗ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ ಆನಾರೋಗ್ಯ ಜೊತೆಗ ಈಗ ಮಾಫಿ ಸಾಕ್ಷಿ ಭೀತಿಯೂ ದರ್ಶನ್ ಅವರನ್ನು ಕಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳು ಬಂದಿದ್ದೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಗ್ಲಾಕೊಂಡಿದ್ದರಿಂದ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎನ್ನುವ ಕಾರಣಕ್ಕೆ ದರ್ಶನ್‌ & ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆಗೈದಿತ್ತು ಎಂದು ಪೊಲೀಸ್‌ ದಾಖಲೆಗಳಲ್ಲಿ ಉಲ್ಲೇಖವಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+