Actor Darshan: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ; ಜಡ್ಜ್ ಪ್ರಶ್ನೆಗೆ ಸಿ.ವಿ.ನಾಗೇಶ್ ಉತ್ತರ ಏನು?
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂದೂಡಿದೆ. ಇಂದು (ನವೆಂಬರ್ 27) ಅರ್ಜಿ ವಿಚಾರಣೆ ನಡೆದಿದ್ದು, ನವೆಂಬರ್ 29ಕ್ಕೆ ಮುಂದೂಡಿಕೆ ಮಾಡಿದೆ. ಹಾಗಾದರೆ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಅವರು ಏನೆಲ್ಲ ವಾದ ಮಂಡಿಸಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜಾಮೀನು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಸುಮಾರು ಎರಡು ಗಂಟೆಗಳ ಕಾಲ ವಾದ ಮಂಡನೆ ಮಾಡಿದರು.

ಬೆನ್ನು ನೋವು ಹಿನ್ನೆಲೆ ನಟ ದರ್ಶನ್‌ಗೆ ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಇದೀಗ ನಟ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು, ಈ ನಡುವೆಯೇ ಜಾಮೀನಿಗೆ ಅರ್ಜಿ ಸಲ್ಲಕೆ ಮಾಡಲಾಗಿದೆ. ಇಂದು (ನವೆಂಬರ್ 28) ವಕೀಲ ಸಿ.ವಿ.ನಾಗೇಶ್ ಅವರು ಹೈಕೋರ್ಟ್‌ಲ್ಲಿ ದರ್ಶನ್ ಪರ ವಾದ ಮಂಡನೆ ಮಾಡಿದ್ದಾರೆ. ಈ ವೇಳೆ ತನಿಖೆಯಲ್ಲಿನ ಕೆಲವು ಲೋಪಗಳ ಬಗ್ಗೆ ಸಿ.ವಿ.ನಾಗೇಶ್ ಅವರು ಪ್ರಸ್ತಾಪ ಮಾಡಿದ್ದಾರೆ.
ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಜಾಮೀನಿಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಇಂದು (ನವೆಂಬರ್ 28) ನಡೆದಿದೆ. ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ವಾದ ಮಾಡಿದ್ದಾರೆ. ಆದರೆ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಬಾಕಿಯಿರುವ ಹಿನ್ನೆಲೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ.
ಸಿ.ವಿ. ನಾಗೇಶ್ ವಾದ ಏನು?: ಪೊಲೀಸರು ತುಂಬಾ ತಡವಾಗಿ ಸಾಕ್ಷಿಗಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಗಳಲ್ಲಿ ಗೊಂದಲಗಳಿವೆ. ಮರ್ಮಾಂಗಕ್ಕೆ ಹೊಡೆದ ಬಗ್ಗೆ ಮತ್ತೊಂದು ಹೇಳಿಕೆಯಲ್ಲಿ ಉಲ್ಲೇಖವಿಲ್ಲ. 161 ಹೇಳಿಕೆಗೂ, 164 ಹೇಳಿಕೆಗೂ ವ್ಯತ್ಯಾಸಗಳಿವೆ. 161 ಹೇಳಿಕೆ ಪಡೆದಾಗ ಪ್ರಕರಣದ ಡೈರಿಯಲ್ಲಿ ನಮೂದಿಸಬೇಕು. ಅದರ ಪ್ರತಿಯನ್ನು ಮ್ಯಾಜಿಸ್ಟ್ರೇಟ್‌ಗೆ ನೀಡಬೇಕು. ಈ ಪ್ರಕ್ರಿಯೆಗಳನ್ನು ತನಿಖಾಧಿಕಾರಿಗಳು ಪಾಲಿಸಿಲ್ಲ. ಮೊದಲ ರಿಮ್ಯಾಡ್ ಅರ್ಜಿಗಳಲ್ಲಿ ಸಾಕ್ಷಿಗಳ ಹೇಳಿಕೆ ಉಲ್ಲೇಖವಿಲ್ಲ.
ಜೂನ್ 22ರ ರಿಮ್ಯಾಂಡ್ ಅರ್ಜಿಯಲ್ಲಿ ಮಾತ್ರ ಉಲ್ಲೇಖವಿದೆ. ಪ್ರಕರಣದಲ್ಲಿ ಪ್ರತ್ಯಕ್ಷ, ಪರೋಕ್ಷ ಸಾಕ್ಷಿದಾರರ ಹೆಸರುಗಳನ್ನು ನಮೂದಿಸಿಲ್ಲ ಎಂದು ಸಿ.ವಿ.ನಾಗೇಶ್ ವಾದ ಮಂಡಿಸಿದ್ದಾರೆ.
ಬಳ್ಳಾರಿ ಜೈಲಿನಲ್ಲಿದ್ದಾಗ ದರ್ಶನ್‌ಗೆ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಹೇಳಲಾಗಿತ್ತು. ಈ ಹಿನ್ನೆಲೆ ದರ್ಶನ್‌ಗೆ ಮಧ್ಯಂತ ಜಾಮೀನು ನೀಡಲಾಗಿತ್ತು. ಆದರೆ ಜಾಮೀನು ಪಡೆದ ತಿಂಗಳು ಕಳೆಯುತ್ತಾ ಬಂದರೂ ಸಹ ಅವರಿಗೆ ಶಸ್ತ್ರ ಚಿಕಿತ್ಸೆ ಆಗಿಲ್ಲ. ಈ ಬಗ್ಗೆ ಹೈಕೋರ್ಟ್‌ಗೆ ಸಿ.ವಿ. ನಾಗೇಶ್ ಮಾಹಿತಿ ನೀಡಿದ್ದು, ಎಂಆರ್‌ಐ ಸ್ಕ್ಯಾನ್ ಆಗಿದೆ. ಬಿ.ಪಿ. ವ್ಯತ್ಯಾಸವಾಗುತ್ತಿದೆ. ಅದು ಸರಿ ಹೋಗದೇ ಯಾವುದೇ ಟ್ರೀಟ್‌ಮೆಂಟ್ ಕೊಡಲಾಗುವುದಿಲ್ಲ. ಸರ್ಜರಿ ಬಗ್ಗೆ ವೈದ್ಯರು ತೀರ್ಮಾನಿಸುತ್ತಾರೆ ಎಂದು ಹೇಳಿದರು.
ನಟ ದರ್ಶನ್ ಪರ ವಕೀಲರಾದ ಸಿ.ವಿ.ನಾಗೇಶ್ ಅವರು ರೇಣುಕಾಸ್ವಾಮಿ ಪ್ರಕರಣದ ಹೈ-ವಿಟ್ನೆಸ್‌ಗಳ ಸ್ವಇಚ್ಚಾ ಹೇಳಿಕೆಗಳನ್ನು ಓದಿದರು. ಇಬ್ಬರು ಸಾಕ್ಷಿಗಳ ಹೇಳಿಕೆ ನೋಡಿದರೆ, ಅವರು ಘಟನಾ ಸ್ಥಳದಲ್ಲೇ ಇರಲಿಲ್ಲ ಎನ್ನುವ ಅನುಮಾನ ಮೂಡಿದೆ ಎಂದು ಹೇಳಿದ್ದಾರೆ.
ಕೆಲ ಸಾಕ್ಷಿಗಳ ಹೇಳಿಕೆಗಳು ಸರಿಯಾಗಿ ಹೊಂದಾಣಿಕೆ ಆಗುತ್ತಿಲ್ಲ. ಕಾರು ಬಂತು-ಹೋಯ್ತು ಎನ್ನುವ ರೀತಿ ಇದೆ. ಯಾವಾಗ, ಯಾರು ಬಂದರು? ಯಾರು ಇದ್ದರೂ ಎಂದು ಹೇಳಿಲ್ಲ. ಸಾಕ್ಷಿಯಾಗಿರುವ ಮಲ್ಲಿಕಾರ್ಜುನ ಅವರು ಮಂಗಳವಾರ ಕೆಲಸಕ್ಕೆ ಬಂದಾಗ ರೇಣುಕಾಸ್ವಾಮಿ ಕೊಲೆ ಆಗಿರುವ ಬಗ್ಗೆ ಗೊತ್ತಾಗಿದೆ ಎಂದು ಹೇಳುತ್ತಾರೆ. ಯಾರು ಕೊಲೆ ಮಾಡಿದರು ಎನ್ನುವುದು ಮಾಧ್ಯಮಗಳ ಮೂಲಕ ಗೊತ್ತಾಯಿತು ಎಂದು ಹೇಳಿದ್ದಾರೆ. ಆದ್ದರಿಂದ ಸಾಕ್ಷಿಗಳು ಸರಿಯಾಗಿಲ್ಲ ಎಂದು ವಾದ ಮಂಡನೆ ಮಾಡಿದ್ದಾರೆ.
ಅಲ್ಲದೆ, ಪ್ರತ್ಯಕ್ಷದರ್ಶಿ ಮಧುಸೂದನ್ ಹೇಳಿಕೆ ಆಧರಿಸಿ ಸಿ.ವಿ.ನಾಗೇಶ್ ವಾದ ಮಂಡಿಸಿದರು. ಜೂನ್ 15ರಂದು ಹೇಳಿಕೆ ದಾಖಲಿಸಲಾಗಿದ್ದು, ಕೆಲ ಕಾರು ಬರುತ್ತವೆ. ಅದರಲ್ಲಿ ದರ್ಶನ್ ಸರ್ ಇರುತ್ತಾರೆ. ಅಲ್ಲಿಗೆ ಹೋಗಬೇಡಿ ಎಂದಿದ್ದೆ. ನಂತರ ಸಂಜೆ ಮನೆಗೆ ಹೋಗಿದ್ದೆ ಎಂದು ಮಧುಸೂದನ್ ಹೇಳಿಕೆ ನೀಡಿದ್ದಾರೆ. ಆದರೆ ಆತ ದಿನಾಂಕ 10ರಂದು ಕೊಲೆ ಬಗ್ಗೆ ಮೊಬೈಲ್‌ನಲ್ಲಿ ನೋಡಿ ತಿಳಿದುಕೊಂಡೆ ಎಂದು ಹೇಳಿದ್ದಾರೆ ಅಂತಾ ನಾಗೇಶ್ ವಾದ ಮಂಡನೆ ವೇಳೆ ಹೇಳಿದ್ದಾರೆ.












Click it and Unblock the Notifications