Vijayalakshmi Darshan: ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಇನ್ಸ್ಟಾ ಫೋಟೋ ಭಾರೀ ವೈರಲ್‌

Vijayalakshmi Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ & ಗ್ಯಾಂಗ್‌ಗೆ ಕೋರ್ಟ್‌ ಇತ್ತೀಚೆಗಷ್ಟೇ ಜಾಮೀನು ಮಂಜೂರು ಮಾಡಿತ್ತು. ಈ ವೇಳೆ ಪತಿಗೆ ಜಾಮೀನು ಸಿಗುತ್ತಿದ್ದಂತೆ ವಿಜಯಲಕ್ಷ್ಮಿ ಅವರು ದೇವರಿಗೆ ಅರ್ಪಿಸುವ ರೀತಿಯಲ್ಲಿ ಕೈಯಲ್ಲಿ ಹೂ ಹಿಡಿದಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದರು. ಇದೀಗ ಮತ್ತೊಂದು ಫೋಟೋ ಶೇರ್ ಮಾಡಿಕೊಂಡಿದ್ದು, ಇದು ಸಖತ್‌ ವೈರಲ್‌ ಆಗುತ್ತಿದೆ.

ವಿಜಯಲಕ್ಷ್ಮಿ ಅವರು ಪತಿ ದರ್ಶನ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ ದೇವರಿಗೆ ಅರ್ಪಿಸುವ ರೀತಿಯಲ್ಲಿ ಕೈಯಲ್ಲಿ ಹೂ ಹಿಡಿದಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದರು. ಇದರ ಸಂಕೇತ ಇಷ್ಟು ದಿನ ಪಟ್ಟ ಶ್ರಮಕ್ಕೆ ಪ್ರತಿಫಲ ನೀನು ಕೊಟ್ಟಿದಿಯಾ ದೇವರೇ ಎನ್ನುವಂತಿದೆ. ಇನ್ನು ಇದೀಗ ಮತ್ತೆ ದರ್ಶನ್‌ ಜೈಲಿನಿಂದ ಹೊರಬಂದ ಬಳಿಕ ಇದೇ ಮೊದಲ ಬಾರಿ ಪತ್ನಿ ವಿಜಯಲಕ್ಷ್ಮಿ ಅವರು ನಗುಮುಖದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

Actor Darshan Wife Vijayalakshmi s Instagram Poster Goes Viral

ಕೆಂಪು ಬಣ್ಣದ ಸಲ್ವಾರ್ ಧರಿಸಿದ್ದ ವಿಜಯಲಕ್ಷ್ಮಿ ದರ್ಶನ್ ಅವರು ಗೋಲ್ಡ್‌ ಕಲರ್ ಪರ್ಸ್ ಹಿಡಿದುಕೊಂಡಿದ್ದರು. ಆಕರ್ಷಕವಾದ ರಿಂಗ್ಸ್ ಕೂಡ ಧರಿಸಿದ್ದರು. ಸಣ್ಣ ಬಿಂದಿ ಇಟ್ಟುಕೊಂಡಿದ್ದಾರೆ. ಅಲ್ಲದೆ, ಆಕರ್ಷಕವಾದ ಹೂಗಳನ್ನು ಇಟ್ಟು ಅಲಂಕಾರ ಮಾಡಲಾಗಿದ್ದ ಹಿನ್ನೆಲೆ ವಿಜಯಲಕ್ಷ್ಮಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ವಿಜಯಲಕ್ಷ್ಮಿ ಅವರು ಈ ಫೋಟೋವನ್ನು ಪೋಸ್ಟ್ ಮಾಡುವುದರ ಜೊತೆಗೆ ಸ್ಟೋರಿಯಲ್ಲೂ ಹಾಕಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ರಾಜ್ಯದಲ್ಲಿರುವ ಹಲವು ದೇವಾಲಯಗಳ ಮೊರೆ ಹೋಗಿ ವಿಶೇಷ ಪೂಜೆ, ವ್ರತಗಳನ್ನು ಮಾಡಿದ್ದರು. ಬಳಿಕ ಇದಕ್ಕೆ ಪ್ರತಿಫಲ ಎಂಬಂತೆ ನಟ ನದರ್ಶನ್‌ಗೆ ಜಾಮೀನು ದೊರೆಯಿತು. ಇದು ವಿಜಯಲಕ್ಷ್ಮಿ ಅವರ ಪಟ್ಟ ಶ್ರಮ ಅಂದರೆ ತಪ್ಪಾಗಲಾರದು.

ಇನ್ನು ನಟ ದರ್ಶನ್‌ ಬಿಡುಗಡೆಗೂ ಮುನ್ನು ಅಭಿಮಾನಿಗಳು ನಮ್ಮ ಜೊತೆಗಿದ್ದಾರೆ. ಅವರು ತಮ್ಮ ನೆಚ್ಚಿನ ನಟ ದರ್ಶನ್‌ ಅವರನ್ನು ಎತ್ತರದಲ್ಲಿಟ್ಟಿದ್ದಾರೆ ಎನ್ನುವ ಸಂದೇಶ ಸಾರುವ ಫೋಸ್ಟರ್‌ವೊಂದನ್ನು ಹಂಚಿಕೊಂಡಿದ್ದರು. "ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ ಸೆಲೆಬ್ರಿಟಿಗಳನ್ನು ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ," ಎಂದು ಬರೆದುಕೊಂಡಿದ್ದರು.

ಇದೊಂದು ಪರೀಕ್ಷೆಯ ಸಮಯ. ನನಗೆ, ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ.

ಇಂತಹ ಕಷ್ಟದ ಸಮದಲ್ಲಿ, ದರ್ಶನ್‌ ಅವರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ. ಸತ್ಯಮೇವ ಜಯತೆ ಎಂದು ಬರೆದುಕೊಂಡಿರುವ ಪೋಸ್ಟರ್‌ ಸಹ ಭಾರೀ ವೈರಲ್‌ ಆಗಿತ್ತು. ಕೊನೆಗೂ ಇದರಂತೆಯೇ ದರ್ಶನ್‌ ಬಿಡುಗಡೆಯಾಗಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರಿಗೆ ಜಾಮೀನು ಸಿಕ್ಕಿದ್ದು, ಜೈಲಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೆ ಇದೇ ವೇಳೆ ಅನುಕುಮಾರ್, ಜಗದೀಶ್, ನಾಗರಾಜು, ಲಕ್ಷ್ಮಣ್ ಮತ್ತು ಪ್ರದೋಷ್ ಅವರಿಗೂ ಜಾಮೀನು ದೊರೆದಿತ್ತು. ಇನ್ನು ಉಳಿದ ಆರೋಪಿಗಳಿಗೂ ಸಹ ಜಾಮೀನು ಮಂಜೂರಾಗಿದ್ದು, ಪ್ರಕರಣದ​ 17 ಆರೋಪಿಗಳಿಗೂ ಬಿಡುಗಡೆ ಭಾಗ್ಯ ದೊರಕಿದೆ ಎಂದು ತಿಳಿದುಬಂದಿತ್ತು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಜೈಲು ಸೇರುದ್ದ ಉಳಿದ ಐವರು ಆರೋಪಿಗಳಿಗೆ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ9 ಧನರಾಜ್ ಹಾಗೂ ಎ10 ವಿನಯ್‌ಗೆ ಜಾಮೀನು ಮಂಜೂರು ಆದೇಶ ಹೊರಡಿಸಿತ್ತು. ಇನ್ನು ಈ ಪ್ರಕರಣದಲ್ಲಿ ನಟ ದರ್ಶನ್​ ಹಾಗೂ ಪವಿತ್ರಾ ಗೌಡ ಸೇರಿ ಒಟ್ಟು 17 ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಬಳಿಕ 17 ಜನರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಇದೀಗ ಇವರೆಲ್ಲರಿಗೂ ಜಾಮೀನು ದೊರೆತಿದೆ.

ಇನ್ನು ಇದೀಗ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ವೈದ್ಯರ ಸಲಹೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನ ಪತ್ನಿ ವಿಜಯಲಕ್ಷ್ಮಿ ಅವರ ಅಪಾರ್ಟ್​ಮೆಂಟ್‌​ನಲ್ಲಿದ್ದ ನಟ ದರ್ಶನ್​ ಮೈಸೂರಿಗೆ ತೆರಳಲು ಕೋರ್ಟ್ ಅನುಮತಿ ಕೇಳಿದರು. ಅನುಮತಿ ಸಿಕ್ಕ ಬಳಿಕ ನಟ​ ಮೈಸೂರಿನ ಶ್ರೀರಂಗಪಟ್ಟಣದ ಬಳಿಯಿರುವ ತಮ್ಮ ಫಾರ್ಮ್ ಹೌಸ್‌ಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪವಿತ್ರಾ ಗೌಡಗೆ ಅಶ್ಲೀಲವಾಗಿ ಸಂದೇಶ ಕಳುಹಿದ್ದ ಎನ್ನುವ ಕಾರಣಕ್ಕೆ ದರ್ಶನ್ &​ ಗ್ಯಾಂಗ್​ ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದರು. ಅಂದೇ ರೇಣುಕಾಸ್ವಾಮಿಯನ್ನು ಕೂಡಿ ಹಾಕಿದ್ದ ಶೆಡ್‌​ಗೆ ಬಂದ ದರ್ಶನ್​ ಹಾಗೂ ಪವಿತ್ರಾ ಆತನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎನ್ನುವ ವಿಚಾರ ಚಾರ್ಜ್‌​ ಶೀಟ್‌​​ನಲ್ಲಿ ದಾಖಲಾಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+