Actor Darshan Video Call: ಪರಪ್ಪನ ಅಗ್ರಹಾರ ಜೈಲಿನ ವಿಐಪಿ ಸೆಲ್‌ನಿಂದಲೇ ನಟ ದರ್ಶನ್‌ ವಿಡಿಯೋ ಕಾಲ್‌

Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದರೂ ಕಂತ್ರಿ ಬುದ್ದಿ ಬಿಡದ ನಟ ದರ್ಶನ್‌ನ ಅಸಲಿ ಸತ್ಯಗಳು ಒಂದೊಂದೇ ಬಯಲಾಗುತ್ತಲೇ ಇವೆ. ಇದೀಗ ಪರಪ್ಪನ ಅಗ್ರಹಾರ ಜೈಲಿನ ವಿಐಪಿ ಸೆಲ್‌ನಿಂದಲೇ ನಟ ದರ್ಶನ್‌ ವಿಡಿಯೋ ಕಾಲ್‌ ಮಾಡಿರುವ ಬಗ್ಗೆ ಸ್ಫೋಟಕ ಮಾಹಿತಿಯೊಂದು ಬಟಾ ಬಯಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಈಗಾಗಲೇ ಮುಕ್ತಾಯದ ಹಂತಲ್ಲಿದ್ದು, ಪೊಲಿಸರು ಚಾರ್ಜ್‌ ಶೀಟ್‌ ಸಲ್ಲಿಕೆಗೆ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆಯೇ ದರ್ಶನ್‌ನ ಮತ್ತಷ್ಟು ಕರಾಳ ಮುಖಗಳು ತೆರೆದುಕೊಳ್ಳುತ್ತಿವೆ. ಮತ್ತೊಂದೆಡೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟ್‌, ಡ್ರಗ್ಸ್‌, ಮೊಬೈಲ್‌ ಫೋನ್‌ಗಳು ಸಫ್ಲೈ ಆಗುತ್ತಿವೆ ಎಂಬ ನಿದರ್ಶನಕ್ಕೆ ದರ್ಶನ್‌ ಕೈಯಲ್ಲಿನ ಸಿಗರೇಟ್‌ ಅಷ್ಟೇ ಅಲ್ಲದೆ, ವಿಡಿಯೋ ಕಾಲ್‌ ಮಾಡಿರುವುದೇ ಸಾಕ್ಷಿಯಾಗಿದೆ.

Actor Darshan video call from Parappana Agrahara Jail s VIP cell

ನಟ ದರ್ಶನ್‌ ಜೈಲಿನಲ್ಲಿ ರೌಡಿ ಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ಕುಳಿತ್ತಿದ್ದಷ್ಟೇ ಅಲ್ಲದೆ, ಒಂದು ಕೈಯಲ್ಲಿ ಸಿಗರೇಟ್‌, ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದುಕೊಂಡಿರುವ ಫೋಟೋ ಭಾರೀ ವೈರಲ್‌ ಆಗುತ್ತಿದೆ. ಇದೀಗ ಈ ಫೋಟೋ ಬಗ್ಗೆನೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದರಲ್ಲೂ ಹಿರಿಯ ನಿವೃತ್ತ ಪೊಲೀಸ್‌ ಅಧಿಕಾರಿಗಳೇ ಜೈಲಾಧಿಕಾರಿಗಳಿಗೆ ಕ್ಯಾಕರಿಸಿ ಉಗಿಯುತ್ತಿದ್ದಾರೆ.

ಅಪರಪ್ಪನ ಅಗ್ರಹಾರದಂತಹ ಸೆಂಟ್ರಲ್‌ ಜೈಲಿನಲ್ಲಿ ಆರೋಪಿಗಳಿಗೆ ಇಷ್ಟೊಂದು ರಾಜ್ಯಾತಿಥ್ಯ ಇರುತ್ತದೆಯಾ? ಅಥವಾ ಇದಕ್ಕೆ ಅಧಿಕಾರಿಗಳೇ ಸಾಥ್‌ ನೀಡುತ್ತಿದ್ದಾರೆಯಾ ಎನ್ನುವ ಶಂಕೆಗಳು ಕೂಡ ವ್ಯಕ್ತ ಆಗುತ್ತಿದ್ದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ಅಷ್ಟೇ ಸಾಲದೆಂಬಂತೆ ಇದೀಗ ನಟ ದರ್ಶನ್‌ ಆಪ್ತನಿಗೆ ವಿಐಪಿ ಸೆಲ್‌ನಿಂದಲೇ ವಿಡಿಯೋ ಕಾಲ್‌ ಮಾಡಿದ್ದಾರೆ ಎಂದು ವಿಡಿಯೋವನ್ನು ಸಾಕ್ಷಿಯಾಗಿಟ್ಟುಕೊಂಡು ಸುವರ್ಣ ನ್ಯೂಸ್‌ ವರದು ಮಾಡಿದೆ. ನಿಯಮದ ಪ್ರಕರಾ, ಜೈಲಿನಲ್ಲಿ ಮೊಬೈಲ್, ಫೋನ್ ಯಾವುದನ್ನೂ ಬಳಸಲು ಅವಕಾಶ ಇರುವುದಿಲ್ಲ. ಆದರಲೂ ಜೈಲಿನಿಂದಲೇ ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮೂಲಕ ಆಪ್ತರೊಂದಿಗೆ ಮಾತನಾಡಿದ್ದಾನೆ ಎನ್ನಲಾಗ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಜೊತೆಗೆ ಇನ್‌ಸ್ಟಾಗ್ರಾಂ ವಿಡಿಯೋ ಕಾಲ್ ಮೂಲಕ ಮಾತನಾಡಿದ ಆತನ ಆಪ್ತ ಅದರ ತುಣುಕನ್ನು ಮೊಬೈಲ್‌ನ ಸ್ಟೇಟಸ್‌ಗೆ ಹಾಕಿಕೊಂಡಿದ್ದಾನೆ. ನಂತರ ಅದನ್ನು ಎಚ್ಚೆತ್ತುಕೊಂಡು ಡಿಲೀಟ್ ಮಾಡಿದ್ದಾನೆ. ಆದರೆ, ಅಷ್ಟರೊಳಗೆ ಆ ವಿಡಿಯೋ ಸಂಗ್ರಹ ಮಾಡಿಕೊಳ್ಳಲಾಗಿದೆ ಎಂದು ವರದಿ ಮಾಡಿದೆ.

ಇನ್ನು ವಿಐಪಿ ಸೆಲ್‌ನಲ್ಲಿರುವ ನಟ ದರ್ಶನ್‌ಗೆ ಐಷಾರಾಮಿ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂಬುದಕ್ಕೆ ಇಂದಿನ ಫೋಟೋ ಮತ್ತು ವಿಡಿಯೋಗಳೇ ಸಾಕ್ಷಿಯಾಗಿವೆ. ಅಲ್ಲದೆ ಈ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ಚರ್ಚೆಗಳು ಆಗುತ್ತಿವೆ. ಅಷ್ಟಕ್ಕೂ ನಟ ದರ್ಶನ್‌ಗೆ ಫೋನ್ ತಂದುಕೊಟ್ಟಿದ್ದು ಸಹ ಕೈದಿ, ಫೋನ್‌ನಲ್ಲಿ ದರ್ಶನ್‌ ಮಾತನಾಡಿದ್ದು ಮತ್ತೊಬ್ಬ ರೌಡಿ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಜೈಲಿನ ನಿಯಮವನ್ನು ಗಾಳಿಗೆ ತೂರಿದಂತಾಗಿದೆ. ಅಲ್ಲದೆ, ಜೈಲಿನ ಒಳಗಡೆ ಮೊಬೈಲ್‌ ಬಂದಿದ್ದಾದ್ರೂ ಹೇಗೆ ಎನ್ನುವ ಪ್ರಶ್ನೆಗಳು ಕೂಡ ಎದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+