ಮೀಡಿಯಾ ದರ್ಶನ್ ... ಸಮಾನವಂತೆ: ದುರುಳ ದರ್ಶನ್ ದುರಹಂಕಾರ ಹೇಗಿತ್ತು ಗೊತ್ತಾ?
ದರ್ಶನ್ ವಿರುದ್ದ ಹಲವು ಆರೋಪಗಳು ಕೇಳಿಬರುತ್ತಿವೆ. ಈ ಪೈಕಿ ದರ್ಶನ್ ಅವರು ಮಾಧ್ಯಮ ಅಂದ್ರೆ ಪೇಪರ್ & ಟಿವಿ ಸೇರಿದಂತೆ ಸುದ್ದಿ ಪ್ರಕಟಿಸುವ ಪ್ರತಿಯೊಂದು ಸಂಸ್ಥೆಗಳನ್ನೂ ಕೆಟ್ಟದಾಗಿ ಬೈದು ಸೇಡು ತೀರಿಸಕೊಳ್ಳುತ್ತಿದ್ದರು. ಅದರಲ್ಲೂ ದರ್ಶನ್ ಅವರೇ ಹೇಳುತ್ತಿದ್ದಂತೆ ಮಾಧ್ಯಮಗಳು ಅವರ ... ಸಮಾನವಂತೆ.. ಥೂ.. ಇಷ್ಟು ಕೆಟ್ಟದಾಗಿ ಈ ಮನುಷ್ಯ ಮಾತನಾಡುತ್ತಿದ್ದನಾ? ಪೂರ್ತಿ ಮಾಹಿತಿಗೆ ಮುಂದೆ ಓದಿ.
ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಪಡೆದ ನಟ ದರ್ಶನ್ 2011 ರಲ್ಲಿ ತನ್ನ ಹೆಂಡತಿ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸಿದ್ದರು. ದರ್ಶನ್ ಅವರು ತಮ್ಮ ಹೆಂಡತಿಯಾದ ವಿಜಯಲಕ್ಷ್ಮೀ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆ ಅರೆಸ್ಟ್ ಕೂಡ ಆಗಿ, ಪರಪ್ಪನ ಅಗ್ರಹಾರ ಜೈಲಿಗೂ ಹೋಗಿದ್ದರು. ಆ ನಂತರ ಮತ್ತೊಮ್ಮೆ ಹೆಂಡತಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು.

ಇದೆಲ್ಲವೂ ಮುಗಿದ ನಂತರ ಮೈಸೂರಿನ ಹೋಟೆಲ್ ಒಂದರಲ್ಲಿ ಭಾರಿ ದೊಡ್ಡ ಗಲಾಟೆ ಮಾಡಿ, ಸಪ್ಲೈಯರ್ ಮೇಲೂ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ನಂತರ ಮಾಧ್ಯಮಗಳು ಸುದ್ದಿ ಕೂಡ ಮಾಡಿದ್ದವು. ಆಗ ಮಾಧ್ಯಮಗಳನ್ನ ಕೆಟ್ಟದಾಗಿ ಬೈದಿದ್ದ ಇದೇ ದರ್ಶನ್, ಜಗತ್ತಿನ ತನ್ನ ಎದುರು ತನ್ನ ಗೋಮುಖ ವ್ಯಾಘ್ರದ ಮುಖ ತೋರಿಸಿದ್ದ.
ಮಾಧ್ಯಮಗಳ ಬಗ್ಗೆ ಕೆಟ್ಟ ಪದ!
ದರ್ಶನ್ ಈಗ ಕೊಲೆ ಆರೋಪಿ, ಹೀಗೆ ಕೊಲೆ ಆರೋಪಿ ದರ್ಶನ್ ಕೆಲವು ವರ್ಷಗಳ ಹಿಂದಷ್ಟೇ ಮಾಧ್ಯಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಕೆಟ್ಟ ಕೆಟ್ಟ ಪದಗಳನ್ನ ಬಳಸಿ ಮಾಧ್ಯಮ ಸಿಬ್ಬಂದಿ & ಮಾಧ್ಯಮಗಳ ಬಗ್ಗೆ ಬೈದಿದ್ದ ದರ್ಶನ್. ಈಗ ನೋಡಿದರೆ ಕೊಲೆ ಆರೋಪದಲ್ಲೇ ಜೈಲು ಸೇರಿದ್ದಾನೆ. ಅಲ್ಲದೆ ಪೊಲೀಸರು ಸರಿಯಾಗಿ ಈ ಆಸಾಮಿಯನ್ನ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರಿಂದ ಖಡಕ್ ತನಿಖೆ!
ದರ್ಶನ್ ಜೊತೆಗೆ ಸೇರಿದ ಅಭಿಮಾನಿಗಳು ಸಂಕಷ್ಟ ಎದುರಿಸುವಂತಾಗಿದೆ, ಹೀಗಾಗಿ ಜನ ಕೂಡ ಸೋಷಿಯಲ್ ಮೀಡಿಯಾದಲ್ಲಿ ಡಿ-ಬಾಸ್ ಎಂಬ ಪದಕ್ಕೆ ತಮ್ಮದೇ ವ್ಯಾಖ್ಯಾನ ನಿಡ್ತಿದ್ದು. ಭಾರಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಹಾಗೇ ಇಷ್ಟು ದಿನ ಕಾಲ, ದರ್ಶನ್ ಅಭಿಮಾನಿಗಳು ಅಂತಾನೇ ಹೇಳಿಕೊಳ್ತಿದ್ದ ಹಲವರು, ದರ್ಶನ್ ವಿರುದ್ಧ ತಿರುಗಿಬಿದ್ದಿದ್ದಾರೆ. ಹಾಗೇ ದರ್ಶನ್ ನಾಯ್ಡು ವಿರುದ್ಧ ಈಗ ಕೇಳಿಬಂದಿರುವ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಯಲಿ ಅಂತಿದ್ದಾರೆ. ಇದರ ಜೊತೆಗೆ ಪೊಲೀಸರು ಕೂಡ ದರ್ಶನ್ ನಾಯ್ಡು ವಿರುದ್ಧದ ಕೊಲೆ ಆರೋಪ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications