ದರ್ಶನ್ ಅಟ್ಟಹಾಸ? ಅಭಿಮಾನಿಗಳ ಬಾಳು ಹಾಳು ಮಾಡುತ್ತಿರುವ ಡ.. ಬಾಸ್?

ದರ್ಶನ್ ತೂಗುದೀಪ ಮಾಡುತ್ತಿರುವ ಕೆಲಸಗಳು ಅವರ ಅಭಿಮಾನಿಗಳಿಗೆ ಕಂಟಕ ತರುತ್ತಿದೆ ಎಂಬ ಆರೋಪ ಕೇಳುತ್ತಿದೆ. ಕೊಲೆ ಆರೋಪದಲ್ಲಿ ನಟ ದರ್ಶನ್ ನಾಯ್ಡು ಇದೀಗ ಜೈಲು ಸೇರಿದ್ದು, ಜೊತೆಗೆ ತಮ್ಮ ಅಭಿಮಾನಿ ಬಳಗವನ್ನೂ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಈ ಸಮಯದಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಕೇಸ್ ಬಗ್ಗೆ ಕನ್ನಡಿಗರು ಏನು ಹೇಳುತ್ತಿದ್ದಾರೆ ಗೊತ್ತಾ? ಈ ಕುರಿತಾಗಿ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ದರ್ಶನ್ ನಾಯ್ಡು ಕನ್ನಡ ಸಿನಿಮಾ ರಂಗದಲ್ಲಿ ಸದ್ದು ಮಾಡಿದ್ದರೂ, ಅಭಿಮಾನಿಗಳಿಗೆ ಹೊಡಿ & ಬಡಿ ಸಿನಿಮಾಗಳನ್ನೇ ನೀಡಿದ್ದರು. ಇದರಿಂದ ಅಭಿಮಾನಿಗಳ ಮನಸ್ಸಿನಲ್ಲಿ ಕೂಡ ಕ್ರೂರತೆಯ ತುಂಬಿದ ಆರೋಪ ಇತ್ತು. ಹೀಗಿದ್ದಾಗ ಸ್ವತಃ ದರ್ಶನ್ ತಾನೇ ಈಗ ಕೊಲೆ ಆರೋಪಿ ಆಗಿದ್ದಾನೆ. ಮತ್ತೊಂದು ಕಡೆ ಇದೇ ಕೊಲೆ ಆರೋಪಿ ದರ್ಶನ್‌ನ ನಂಬಿಕೊಂಡು ಬಂದ ಅಭಿಮಾನಿಗಳನ್ನು ಜೈಲಿಗೆ ತಳ್ಳಲಾಗಿದೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದ್ದು, ದರ್ಶನ್ ವಿರುದ್ಧ ಕ್ಷಣಕ್ಷಣಕ್ಕೂ ಆರೋಪಗಳು ಹೆಚ್ಚಾಗುತ್ತಿವೆ!

Actor Darshan Thoogudeepa Incident Is Making Big News In Karnataka For This Reason

ದರ್ಶನ್ ಹಿಂದೆ ಹೋದರೆ ಬಾಳು ಗೋಳು?

ಅಂದಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎಸ್ಕೇಪ್ ಆಗಿದ್ದ, ಚಿತ್ರದುರ್ಗದ ಅನುಕುಮಾರ್​ ಅಲಿಯಾಸ್​ ಅನು ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೀಗೆ ತನ್ನ ಮಗ ಕೊಲೆ ಆರೋಪಿಯಾಗಿ ಪೊಲೀಸರ ಬಲೆಗೆ ಬಿದ್ದ ನಂತರ, ಆರೋಪಿ ಅನುಕುಮಾರ್ ಅಲಿಯಾಸ್ ಅನು ತಂದೆ ಚಂದ್ರಣ್ಣ ಅವರಿಗೆ ಹೃದಯಾಘಾತ ಆಗಿದೆ ಎಂದು ಆರೋಪ ಮಾಡಲಾಗಿದೆ.

ಹೃದಯಾಘಾತದ ಕಾರಣಕ್ಕೆ, ಇದೀಗ ಅನುಕುಮಾರ್ ಅಲಿಯಾಸ್ ಅನು ಅವರ ತಂದೆ ಚಂದ್ರಣ್ಣ ಮೃತಪಟ್ಟಿದ್ದಾರೆ. ಹೀಗಿದ್ದಾಗಲೇ, ಕೊಲೆ ಆರೋಪಿಗೆ ತನ್ನ ತಂದೆಯ ಮುಖ ಕೊನೆಯ ಬಾರಿಗೆ ನೋಡುವ ಭಾಗ್ಯ ಕೂಡ ಸಿಗಲ್ಲ ಎನ್ನಲಾಗಿತ್ತು. ದರ್ಶನ್ ಸಹವಾಸ ಮಾಡಿದ್ದಕ್ಕೆ ಅನುಕುಮಾರ್ ನರಳುವಂತಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಕೊನೆಗೂ ಪೊಲೀಸರು ಅನುಕುಮಾರ್ ತಂದೆಯ ಅಂತ್ಯಕ್ರಿಯೆಗೆ ಆತನನ್ನ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಹೀಗೆ ಆರೋಪಿ ಅನುಕುಮಾರ್ ದರ್ಶನ್ ಸಹವಾಸ ಮಾಡಿದ್ದಕ್ಕೆ ತಂದೆಯನ್ನೇ ಕಳೆದುಕೊಂಡ ಎಂಬ ಆರೋಪ ಕೇಳಿಬಂದಿದೆ.

ಪೊಲೀಸರಿಂದ ಖಡಕ್ ತನಿಖೆ!

ಹೀಗೆ ದರ್ಶನ್ ಜೊತೆಗೆ ಸೇರಿದ ಅಭಿಮಾನಿಗಳು ಸಂಕಷ್ಟ ಎದುರಿಸುವಂತಾಗಿದೆ, ಹೀಗಾಗಿ ಜನ ಕೂಡ ಸೋಷಿಯಲ್ ಮೀಡಿಯಾದಲ್ಲಿ ಡಿ-ಬಾಸ್ ಎಂಬ ಪದಕ್ಕೆ ತಮ್ಮದೇ ವ್ಯಾಖ್ಯಾನ ನಿಡ್ತಿದ್ದು. ಭಾರಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಹಾಗೇ ಇಷ್ಟುದಿನ ದರ್ಶನ್ ಅಭಿಮಾನಿಗಳು ಅಂತಾನೇ ಹೇಳಿಕೊಳ್ತಿದ್ದ ಹಲವರು, ದರ್ಶನ್ ವಿರುದ್ಧ ತಿರುಗಿಬಿದ್ದಿದ್ದಾರೆ. ಹಾಗೇ ದರ್ಶನ್ ನಾಯ್ಡು ವಿರುದ್ಧ ಈಗ ಕೇಳಿಬಂದಿರುವ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಯಲಿ ಅಂತಿದ್ದಾರೆ. ಇದರ ಜೊತೆಗೆ ಪೊಲೀಸರು ಕೂಡ ದರ್ಶನ್ ನಾಯ್ಡು ವಿರುದ್ಧದ ಕೊಲೆ ಆರೋಪ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+