ಬೆನ್ನು ನೋವಿನಿಂದ ಒದ್ದಾಡಿದ ನಟ ದರ್ಶನ್ : ಇಲ್ಲಿದೆ ವೈರಲ್ ವಿಡಿಯೋ, 'ದಿ ಡೆವಿಲ್' ಶೂಟಿಂಗ್‌ನಲ್ಲಿ ಏನಾಯ್ತು ?!
ಕನ್ನಡದ ನಟ ಹಾಗೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್ ತೂಗುದೀಪ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟ ದರ್ಶನ್ ಅವರು ಕೆಲವು ತಿಂಗಳುಗಳಿಂದ ವಿಪರೀತವಾದ ಬೆನ್ನು ನೋವು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದೀಗ ಅವರು ಡೆವಿಲ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ಒದ್ದಾಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಹೌದು ನಟ ದರ್ಶನ್ ಅವರು ಜೈಲಿನಿಂದ ಜಾಮೀನು ಪಡೆದು ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎರಡನೇ ಬಾರಿ ಜೈಲಿಗೆ ಹೋಗುವ ಮುಂಚೆ ದಿ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ದರ್ಶನ್ ಅವರು ಬ್ಯುಸಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಸಿನಿಮಾ ಶೂಟಿಂಗ್ ವೇಳೆ ಬೆನ್ನು ನೋವಿನಿಂದ ಪರದಾಡಿದ್ದರು ಎನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟ ದರ್ಶನ್ ಅವರು ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಬೆನ್ನು ನೋವು ಸಮಸ್ಯೆ ಎದುರಿಸಿದ್ದಾರೆ ಎನ್ನುವ ವಿಡಿಯೋ ಇದಾಗಿದೆ.

ಶೂಟಿಂಗ್ ಸೆಟ್‌ನಲ್ಲಿನ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು. ಇದೀಗ ಈ ವಿಡಿಯೋ ಸಂಚಲನ ಸೃಷ್ಟಿ ಮಾಡಿದೆ. ನಟ ದರ್ಶನ್ ಅವರು ಬೆನ್ನು ನೋವು ತಾಳಲಾರದೆ ನೆಲ ಹಿಡಿದು ಕೂತುಕೊಂಡಿದ್ದಾರೆ. ಇದಕ್ಕೂ ಮೊದಲು ಕೆಲವು ದರ್ಶನ್ ಅವರಿಗೆ ಯಾವುದೇ ಬೆನ್ನು ನೋವು ಸಮಸ್ಯೆ ಇಲ್ಲ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಅವರು ವಿದೇಶಕ್ಕೆಲ್ಲ ಹೋಗುತ್ತಾರೆ, ವಿಚಾರಣೆ ಸಂದರ್ಭದಲ್ಲಿ ಬೆನ್ನು ನೋವು ಎನ್ನುತ್ತಾರೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಇದೀಗ ಶೂಟಿಂಗ್ ಸಂದರ್ಭದಲ್ಲಿ ಅವರು ಶೂಟಿಂಗ್ ಮಾಡಲು ಸಾಧ್ಯವಾಗದೆ ನೋವು ತಿನ್ನುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ನಟ ದರ್ಶನ್ ಅವರು ಬೆನ್ನುನೋವಿನ ಕಾರಣ ಕೊಟ್ಟು ಬೇಲ್ ತೆಗೆದುಕೊಂಡಿರುವುದು ಸುಳ್ಳಲ್ಲ ಎನ್ನಲಾಗುತ್ತಿದೆ.
ಜೈಲಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನಟ ದರ್ಶನ್ ಅವರು, ದಿ ಡೆವಿಲ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಈ ಸಿನಿಮಾದ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಅವರು ತುಂಬಾ ಬೆನ್ನು ನೋವು ಸಮಸ್ಯೆ ಅನುಭವಿಸಿದ್ದಾರೆ. ಶೂಟಿಂಗ್ ಸೆಟ್‌ನಲ್ಲೇ ಮಲಗಿ ಸುಧಾರಿಸಿಕೊಂಡಿದ್ದಾರೆ. ದರ್ಶನ್ಗೆ ಬೆನ್ನಿನ ಎಲ್1-ಎಲ್5 ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು ಎಂದು ಹೇಳಲಾಗಿತ್ತು.
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ರವರು ಬೆನ್ನು ನೋವಿನಲ್ಲೂ ಡೆವಿಲ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು..
— D Company(R)Official (@Dcompany171) September 15, 2025
ದರ್ಶನ್ ಸರ್ ರವರ ಬೆನ್ನು ನೋವಿನ ಸತ್ಯ 🙏@dasadarshan @vijayaananth2 @dinakar219 pic.twitter.com/iekzGNjGL8
ಕಳೆದ 9 ವರ್ಷದಿಂದ ಬೆನ್ನು ನೋವಿನಿಂದ ನಟ ದರ್ಶನ್ ಬಳಲುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಈ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಅವರು ಚಿಕಿತ್ಸೆ ಸಹ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.












Click it and Unblock the Notifications