ʼಕರಿಯʼ Re-release; ಫ್ಯಾನ್ಸ್‌ಗೆ ವಿಶೇಷ ಮನವಿ ಮಾಡಿದ ಪ್ರೇಮ್
ಒಂದೆಡೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಮತ್ತೊಂದೆಡೆ ದರ್ಶನ್ ಅವರಿಗೆ ದೊಡ್ಡ ಹಿಟ್ ತಂದುಕೊಟ್ಟಿದ್ದ ʼಕರಿಯʼ ಸಿನಿಮಾ ರೀರಿಲೀಸ್‌ಗೆ ರೆಡಿಯಾಗಿದೆ. ಇದೇ ಆಗಸ್ಟ್ 30ರಂದು ರಾಜ್ಯಾದ್ಯಂತ ವಿವಿಧ ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ ಎಂದು ನಿರ್ದೇಶಕ ಪ್ರೇಮ್ ಮಾಹಿತಿ ಹಂಚಿಕೊಂಡಿದ್ದಾರೆ.
ದರ್ಶನ್ ಅಭಿನಯಿಸಿದ್ದ ಈ ಕರಿಯಾ ಸಿನಿಮಾಗೆ ಸಪರೇಟ್ ಫ್ಯಾನ್ ಬೇಸ್ ಇದೆ ಎಂದೇ ಇಂಡಸ್ಟ್ರಿಯಲ್ಲಿ ಹೇಳಲಾಗುತ್ತದೆ. ಈ ಸಿನಿಮಾ ಸತತ ಒಂದು ವರ್ಷಗಳ ಕಾಲ ಭರ್ಜರಿ ಪ್ರದರ್ಶನ ಕಂಡು ಸಖತ್ ಹಿಟ್ ಕೂಡ ಆಗಿತ್ತು. ಈ ಸಿನಿಮಾದ ಹಾಡುಗಳಂತೂ ಇಂದಿಗೂ ಅನೇಕರ ಫೇವರೇಟ್. 'ಕರಿಯ' ಚಿತ್ರದಲ್ಲಿ ದರ್ಶನ್ ನಟಿಸಿ ಮೋಡಿ ಮಾಡಿದ್ದರು. ನಾಯಕಿಯಾಗಿ ಅಭಿನಯಶ್ರೀ ಮಿಂಚಿದ್ದರು. ಈ ಚಿತ್ರದ ಕೆಂಚಾಲೋ ಮಂಚಾಲೋ ಸಾಂಗ್ ಇಂದಿಗೂ ಕ್ರೇಜ್ ಹುಟ್ಟಿಸಿರುವ ಹಾಡು. ಇದೀಗ ಈ ಸಿನಿಮಾ ಮತ್ತೊಮ್ಮೆ ಪರದೆ ಮೇಲೆ ಬರಲು ಸಜ್ಜಾಗಿದೆ. ಆದರೆ ದರ್ಶನ್ ಅಭಿಮಾನಿಗಳಿಗೆ ಈ ವಿಚಾರ ನುಂಗಲಾರದ ತುಪ್ಪವಾಗಿದೆ.

ಇದೇ ಸಂದರ್ಭದಲ್ಲಿ ಈ ಸಿನಿಮಾ ನಿರ್ದೇಶಿಸಿದ್ದ ಪ್ರೇಮ್ ದರ್ಶನ್ ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.ʼ ಭಾರತೀಯ ಚಿತ್ರರಂಗದಲ್ಲಿ ಕರಿಯಾ ಸಿನಿಮಾ ಒಂದು ಮೈಲಿಗಲ್ಲು. ಇದೆಲ್ಲ ನಿಮ್ಮಿಂದ. ಸೆಲೆಬ್ರಿಟಿಗಳು ಶಾಂತಿ ತಾಳ್ಮೆ ಹಾಗು ಪ್ರೀತಿ ಇಂದ ಕರಿಯನನ್ನು ಹರಸಿ ಹಾರೈಸಿ ಎಂದು ಪ್ರೇಮ್ ಮನವಿ ಮಾಡಿದ್ದಾರೆ.
ʼಅಭಿಮಾನಿಗಳು ಯಾವುದೇ ಅತಿರೇಕಗಳನ್ನು ಮಾಡಬೇಡಿ. ನಿಮ್ಮ ಆನ್‌ಲೈನ್ ಬರವಣಿಗೆಗಳು ಬೇರೆಯವರಿಗೆ ನೋವು ತರದಿರಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನಬಂದಂತೆ ವರ್ತಿಸುತ್ತಿರುವ ಕೆಲ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿದ್ದಾರೆ. ನಟ ದರ್ಶನ್ ತೂಗುದೀಪ ಅವರು ಕಾನೂನು ಮುಕ್ತರಾಗಿ ಆದಷ್ಟು ಬೇಗ ಹೊರಗೆ ಬಂದು ನಿಮ್ಮ ನಮ್ಮ ಜೊತೆ ಬೆರೆಯಲಿ ಬೆಳಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ, ಎಲ್ಲರಿಗೂ ಒಳ್ಳೆಯದಾಗಲಿ...ನಿಮ್ಮ ಪ್ರೀತಿಯ ಪ್ರೇಮ್ ಎಂದು ವಿಶೇಷವಾಗಿ ತಮ್ಮ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಇದೊಂದು Milestone, #kariya ಇದು ನಿಮ್ಮಿಂದ. celebraties 🙏 ಶಾಂತಿ ತಾಳ್ಮೆ ಹಾಗು ಪ್ರೀತಿ ಇಂದ ಕರಿಯನನ್ನು ಹರಸಿ ಹಾರೈಸಿ ,ಯಾವುದೇ ಅತಿರೇಕಗಳನ್ನು ಮಾಡದೇ ಹಾಗು ನಿಮ್ಮ online ಬರವಣಿಗೆಗಳು ಬೇರೆಯವರಿಗೆ ನೋವುತರದಿರಲಿ 🙏, #darshanthoogudeepa ಕಾನೂನು ಮುಕ್ತರಾಗಿ ಆದಷ್ಟು ಬೇಗ ಹೊರಗೆ ಬಂದು ನಿಮ್ಮ… pic.twitter.com/qK1UGfG41Z
— PREM❣️S (@directorprems) August 25, 2024
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ತನಿಖೆ ಅಂತಿಮ ಹಂತ ತಲುಪಿದೆ. ಶೀಘ್ರದಲ್ಲೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದು, ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಎಲ್ಲ ವರದಿಗಳು ಕಾಮಾಕ್ಷಿಪಾಳ್ಯ ಪೊಲೀಸರ ಕೈಸೇರಿವೆ ಎನ್ನಲಾಗುತ್ತಿದೆ.
ಇದೇ ಕೇಸ್‌ನಲ್ಲಿ ನಟ ಚಿಕ್ಕಣ್ಣ ಅವರಿಗೂ ಸಂಕಷ್ಟ ಎದುರಾಗಿದ್ದು, ಕೇಸ್ ಸಂಬಂಧ ಇತ್ತೀಚೆಗಷ್ಟೇ ದರ್ಶನ್ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನುವ ಕಾರಣಕ್ಕೆ ನಟ ಚಿಕ್ಕಣ್ಣನನ್ನು ಕೂಡ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆಯನ್ನ ದಾಖಲಿಸಿಕೊಂಡಿದ್ದರು. ಆದರೆ ಇದೀಗ ಜೈಲಿಗೆ ಭೇಟಿ ನೀಡಿದ್ದಕ್ಕೆ ಮತ್ತೆ ಚಿಕ್ಕಣ್ಣಗೆ ಸಂಕಷ್ಟವೊಂದು ಎದುರಾಗಿದೆ. ಈ ಸಂಬಂಧ ಚಿಕ್ಕಣ್ಣನಿಗೆ ಮತ್ತೊಮ್ಮೆ ಪೊಲೀಸರು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications