Pavithra Gowda: ಪ್ರೇಮಿಗಳ ದಿನಕ್ಕೆ ದೊಡ್ಡ ಪ್ಲ್ಯಾನ್ ಮಾಡಿದ ಪವಿತ್ರಾ ಗೌಡ
ಫೆಬ್ರವರಿ 14ರ ಪ್ರೇಮಿಗಳ ದಿನಕ್ಕೆ ಕ್ಷಣಗಣನೆ ಶುರುವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಅವರೊಂದಿಗೆ ಜೈಲು ಸೇರಿ ಹೊರಬಂದಿರುವ ನಟಿ ಪವಿತ್ರಾ ಗೌಡ ಅವರು ಪ್ರೇಮಿಗಳ ದಿನಕ್ಕೆ ದೊಡ್ಡ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ದರ್ಶನ್ ಅವರ ಗೆಳತಿಯೂ ಆಗಿರುವ ಪವಿತ್ರಾಗೌಡ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಬಳಿಕ ದರ್ಶನ್ ಅವರನ್ನು ಪವಿತ್ರಾಗೌಡ ಭೇಟಿಯಾಗಿಲ್ಲ. ಆದರೆ ಪ್ರೇಮಿಗಳ ದಿನಕ್ಕೆ ಪವಿತ್ರಾಗೌಡ ಅವರು ದೊಡ್ಡ ಸರ್‌ಪ್ರೈಸ್ ಕೊಡಲು ಮುಂದಾಗಿದ್ದಾರೆ. ಅದೇನು ಅಂತಾ ಮುಂದೆ ತಿಳಿಯಿರಿ..
ಪವಿತ್ರಾ ಗೌಡ ಅವರು ಮೊದಲು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಅವರು ಬಿಸಿನೆಸ್ ಕೂಡ ಮಾಡುತ್ತಿದ್ದರು. ಈ ಹಿಂದೆಯೇ ಅವರು "ರೆಡ್ ಕಾರ್ಪೆಟ್" ಎನ್ನುವ ಸ್ಟುಡಿಯೋ ಅನ್ನು ತೆರೆದಿದ್ದರು. ಆದರೆ, ಇದು ಸರಿಯಾಗಿ ನಿರ್ವಹಣೆ ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಮುಚ್ಚಲಾಗಿತ್ತು. ಅಲ್ಲದೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದರಿಂದ ಸುಮಾರು ಆರು ತಿಂಗಳ ಕಾಲ ಅವರು ಜೈಲುವಾಸ ಅನುಭವಿಸಿದ್ದರು. ಹಾಗಾಗಿ ಇವರ ವ್ಯವಹಾರಗಳು ಕೂಡ ನೆಲಕಚ್ಚಿತ್ತು. ಈಗ ಜೈಲಿನಿಂದ ಹೊರಬಂದಿರುವ ಕಾರಣ ತಮ್ಮ ಬಿಸಿನೆಸ್ ಮೇಲೆ ಮತ್ತೆ ಗಮನ ಹರಿಸಿದ್ದಾರೆ.

ಅವರ "ರೆಡ್ ಕಾರ್ಪೆಟ್" ಸ್ಟುಡಿಯೋವನ್ನ ಮತ್ತೆ ರೀಲಾಂಚ್ ಮಾಡಲು ಪವಿತ್ರಾ ಗೌಡ ಮುಂದಾಗಿದ್ದಾರೆ. ಇದನ್ನು ವಿಶೇಷವಾದ ಪ್ರೇಮಿಗಳ ದಿನದಂದೇ ರೀಲಾಂಚ್ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಬಗ್ಗೆ ಭರ್ಜರಿ ಪ್ರಚಾರ ಕೂಡ ನಡೆಯುತ್ತಿದೆ. ಪ್ರೇಮಿಗಳ ದಿನಕ್ಕೆ ಕೆಂಪು ಬಣ್ಣ ಪ್ರಧಾನವಾಗಿರುವುದರಿಂದ ಈ ಕೆಂಪು ಥೀಮ್‌ನಲ್ಲೇ ರೀಲಾಂಚ್ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ.
ಈ ಮೊದಲು ದರ್ಶನ್ ಅವರ ಹುಟ್ಟುಹಬ್ಬವಾದ ಫೆಬ್ರವರಿ 16ರಂದು ರೆಡ್‌ಕಾರ್ಪೆಟ್ ರೀಲಾಂಚ್ ಮಾಡಲು ಪವಿತ್ರಾಗೌಡ ಮುಂದಾಗಿದ್ದರು ಎಂದು ಹೇಳಲಾಗಿತ್ತು. ಈ ಕಾರ್ಯಕ್ರಮಕ್ಕೆ ನಟ ದರ್ಶನ್ ಕೂಡ ಬರ್ತಾರೆ ಎಂದು ಹೇಳಲಾಗಿತ್ತು. ಆದರೆ ಇದಕ್ಕೂ ಎರಡು ದಿನ ಮುಂಚಿತವಾಗಿಯೇ ಲಾಂಚ್ ಕಾರ್ಯಕ್ರಮವನ್ನು ನಿಗದಿ ಮಾಡಿದ್ದಾರಂತೆ. ಈ ಕಾರ್ಯಕ್ರಮಕ್ಕೆ ನಟ ದರ್ಶನ್ ಕೂಡ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ದರ್ಶನ್ ಅವರೊಂದಿಗೆ ಪವಿತ್ರಾ ಗೌಡ ಅವರು ತುಂಬಾ ಆತ್ಮೀಯವಾಗಿದ್ದರು. ಅಲ್ಲದೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಹಾಕಿದ ಕಾರಣಕ್ಕೆ ಆತನನ್ನು ಅಪಹರಿಸಿ, ಕೊಲೆ ಮಾಡಲಾಗಿತ್ತು ಎನ್ನುವ ಆರೋಪ ಇವರ ಮೇಲಿದೆ. ಈ ಕೇಸ್‌ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳಿದ್ದಾರೆ. ಸದ್ಯ ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ.

ಪವಿತ್ರಾ ಗೌಡ ಅವರು ಆಪ್ತವಾಗಿದ್ದ ಕಾರಣಕ್ಕೆ ನಟ ದರ್ಶನ್ ಅವರು ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ಗಳ ಬಗ್ಗೆ ಸೀರಿಯಸ್ ಆಗಿದ್ದರು. ಕೊನೆಗೆ ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಅಪಹರಿಸಿ, ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆತಂದು ಹಲ್ಲೆ ನಡೆಸಿದ್ದರು ಎನ್ನುವ ಆರೋಪವಿದೆ. ಇದರಿಂದ ರೇಣುಕಾಸ್ವಾಮಿ ಮೃತಪಟ್ಟ ಕಾರಣ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಹತ್ತಾರು ಮಂದಿ ಅರೆಸ್ಟ್ ಆಗಿ ಸುಮಾರು ಐದು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲೇ ಇದ್ದರು. ಇತ್ತೀಚೆಗೆ ಇವರಿಗೆ ಕೋರ್ಟ್ ಜಾಮೀನು ನೀಡಿದ್ದು, ಬಳಿಕ ಹೊರಬಂದಿದ್ದಾರೆ.












Click it and Unblock the Notifications