Actor Darshan: ನಟ ದರ್ಶನ್ 'ಡೆವಿಲ್‌' ಶೂಟಿಂಗ್‌ ಸೆಟ್‌ ಏರುವ ಹೊತ್ತಲೇ ಬೇಡಿಕೆಯಿಟ್ಟ ರೇಣುಕಾಸ್ವಾಮಿ ಕುಟುಂಬ

Actor Darshan Thoogudeepa: ನಟ ದರ್ಶನ್ ಅಭಿನಯದ ಡೆವಿಲ್‌ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಿದೆ. ಈ ನಡುವೆಯೇ ಮೃತ ರೇಣುಕಾಸ್ವಾಮಿ ಕುಟುಂಬಸ್ಥರು ಗೋಕರ್ಣದಲ್ಲಿ ವಿಷೇಶ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಹಾಗಾದ್ರೆ ಅವರು ಇಟ್ಟ ಬೇಡಿಕೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ನಟ ದರ್ಶನ್‌ ಗ್ಯಾಂಗ್‌ನಿಂದ ಹತ್ಯೆಗೊಳಗಾಗಿದ್ದ ಚಿತ್ರದುರ್ಗದ ರೇಣುಕಸ್ವಾಮಿ ಕುಟುಂಬಸ್ಥರು ಗೋಕರ್ಣಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ರೇಣುಕಸ್ವಾಮಿ ತಂದೆ ಕಾಶಿನಾಥ ಗೌಡ, ಪತ್ನಿ, ಸೊಸೆ ಹಾಗೂ ಮೊಮ್ಮಗ ಗೋಕರ್ಣಕ್ಕೆ ಆಗಮಿಸಿ ದೇವರ ದರ್ಶನ ಪಡೆದು ರೇಣುಕಸ್ವಾಮಿಗೆ ಮೋಕ್ಷ ಕರುಣಿಸುವಂತೆ ಪ್ರಾರ್ಥಿಸಿದರು.

Actor darshan Renukaswamy Family A demand during Devil Cinema Shooting

ರೇಣುಕಸ್ವಾಮಿ ಕುಟುಂಬಸ್ಥರು ಗೋಕರ್ಣಕ್ಕೆ ಆಗಮಿಸಿ ವೀರಶೈವ ವಸತಿ ಗೃಹದಲ್ಲಿ ಉಳಿದುಕೊಂಡಿದ್ದರು. ಬಳಿಕ ಅವರು ದೇವರ ದರ್ಶನ ಪಡೆದು ತನ್ನ ಮಗನಿಗೆ ಆದ ಪರಿಸ್ಥಿತಿ ಯಾರಿಗೂ ಆಗಬಾರದು. ನನ್ನ ಮಗನ ಹತ್ಯೆ ಮಾಡಿದ ಎಲ್ಲಾ ಆರೋಪಿಗಳಿಗೂ ಶಿಕ್ಷೆ ಆಗಬೇಕು. ಸೊಸೆಗೆ ಸರ್ಕಾರಿ ನೌಕರಿ ನೀಡಬೇಕೆಂದು ರೇಣುಕಸ್ವಾಮಿ ತಂದೆ ಕಾಶಿನಾಥ ಬೇಡಿಕೊಂಡರು.

ಇನ್ನು ರೇಣುಕಸ್ವಾಮಿ ಕುಟುಂಬಸ್ಥರು ಬಂದು ಹೋದ ಬೆನ್ನಲ್ಲೇ ನಟ ದರ್ಶನ ಗೌಪ್ಯವಾಗಿ ಗೋಕರ್ಣಕ್ಕೆ ಆಗಮಿಸಿ ಅರ್ಚಕರೊಬ್ಬರ ಮನೆಗೆ ತೆರಳಿ ಶಿಕ್ಷೆಯಿಂದ ಪಾರು ಮಾಡುವಂತೆ ಹೋಮ ಹವನ ಮಾಡಿಸಿದ್ದಾರೆ ಎಂದು ಎಂದು ಮೂಲಗಳಿಂದ ತಿಳಿದುಬಂದಿದೆ. ಕಳೆದ ಸೋಮವಾರ ಆಗಮಿಸಿದ ದರ್ಶನ್‌ ಅರ್ಚಕರ ಮನೆಯಲ್ಲಿ ಒಂದು ದಿನ ಉಳಿದುಕೊಂಡು ಹೋಮ-ಯಜ್ಞ ಮಾಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನನಗೆ ನೀಡಿದ ಜಾಮೀನು ಮುಂದುವರಿಕೆ ಮತ್ತು ಈ ಪ್ರಕರಣದಿಂದ ತನ್ನನ್ನು ಪಾರು ಮಾಡುವಂತೆ ಅರ್ಚಕರ ಬಳಿ ಬೇಡಿಕೊಂಡಿದ್ದಾರೆ. ಅರ್ಚಕರು ನಟ ದರ್ಶನ್‌ ಅವರಿಗೆ ಧೈರ್ಯ ಹೇಳಿ ಹೋಮ-ಯಜ್ಞಗಳನ್ನು ಮಾಡಿ ಕಳುಸಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎನ್ನುವ ಕಾರಣಕ್ಕೆ ನಟ ದರ್ಶನ್‌ ಗ್ಯಾಂಗ್‌ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆತಂದು ಭೀಕರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎನ್ನುವುದು ಪೊಲೀಸ್‌ ಮೂಲಗಳಲ್ಲಿ ಉಲ್ಲೇಖಲಾಗಿದೆ. ಬಳಿಕ ಪೊಲೀಸರು ಪ್ರಕರಣ ಸಂಬಂಧ ಪವಿತ್ರಾ ಗೌಡ, ನಟ ದರ್ಶನ್‌ ಸೇರಿದಂತೆ ಗ್ಯಾಂಗ್‌ ಅನ್ನು ಬಂಧಿಸಿದ್ದರು.

6 ತಿಂಗಳ ಬಳಿಕ ನಟ ದರ್ಶನ್‌ ಮತ್ತು ಗ್ಯಾಂಗ್ ಜಾಮೀನಿನ ಮೇಲೆ ಬಿಡುಗಡೆಯಾಯಿತು. ದರ್ಶನ್‌ ಜೈಲು ಸೇರಿದಾಗಿನಿಂದ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಜಯಕ್ಷ್ಮಿ ಅವರು ರಾಜ್ಯದಲ್ಲಿರುವ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ವ್ರತ, ಪೂಜೆಗಳನ್ನು ಮಾಡಿದ್ದರು. ಅಲ್ಲದೆ, ಅಭಿಮಾನಿಗಳು ಸಹ ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ಇದರ ಪ್ರತಿಫಲವಾಗಿ ನಾ ದರ್ಶನ್‌ ಕೊನೆಗೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇದೀಗ ಅರ್ಧಕ್ಕೆ ನಿಂತಿದ್ದ ಡೆವಿಲ್‌ ಸಿನಿಮಾ ಶೂಟಿಂಗ್‌ ಸೆಟ್‌ ಏರಲು ಸಿದ್ಧರಾಗಿದ್ದಾರೆ. ಇದೀಗ ಅವರಿಗೆ ಬೆನ್ನು ನೋವು ಇರುವ ಹಿನ್ನೆಲೆ ಸಾಹಸ ದೃಶ್ಯಗಳನ್ನು ಬಿಟ್ಟು, ಬರೀ ಮಾತಿನ ಶೂಟಿಂಗ್‌ ಮಾಡಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+