Darshan Arrest: ನಟ ದರ್ಶನ್ ಅರೆಸ್ಟ್; ಪೋಲಿಸ್ ಠಾಣೆಗೆ ಬಂದ ಪವಿತ್ರಗೌಡ!
ಬೆಂಗಳೂರು, ಜೂನ್ 11: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ ಸೇರಿದಂತೆ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ನಟ ದರ್ಶನ್ ಸೇರಿದಂತೆ ನಾಲ್ವರ ವಿಚಾರಣೆಯನ್ನ ನಡೆಯುತ್ತಿದ್ದು, ಪೋಲಿಸ್ ಅಧಿಕಾರಿಗಳ ಸೂಚನೆಯ ಮೇರೆಗೆ ಪವಿತ್ರಾ ಗೌಡ ಅವರು ಅನ್ನಪೂರ್ಣೇಶ್ವರಿ ನಗರ ಪೋಲಿಸ್ ಠಾಣೆಗೆ ಬಂದಿದ್ದು, ಸದ್ಯ ವಿಚಾರಣೆಗೆ ಒಳಪಡಿಸಲಾಗಿದೆ.
ಅನ್ನಪೂರ್ಣೇಶ್ವರಿನಗರ ಠಾಣೆಗೆ ಬಂದ ನಟ ದರ್ಶನ ಗೆಳತಿ ಪವಿತ್ರಾ ಗೌಡ ಅವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಂದಿದ್ದಾರೆ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ನಟ ದರ್ಶನ್, ಪವಿತ್ರಾ ಸೇರಿ ನಾಲ್ವರ ವಿಚಾರಣೆ ನಡೆಯುತ್ತಿದೆ. ಇನ್ನುಳಿದ ಆರೋಪಿಗಳನ್ನು ಪೊಲೀಸರು ಕಾಮಾಕ್ಷಿಪಾಳ್ಯ ಠಾಣೆಗೆ ಕರೆದೊಯ್ದಿದ್ದಾರೆ.

ಏನಿದು ಕೊಲೆ ಪ್ರಕರಣ? ದರ್ಶನ್ ಅರೆಸ್ಟ್ ಆಗಿದ್ದು ಯಾಕೆ?
ರೇಣುಕಾಸ್ವಾಮಿ ಅವರ ಶವ ಬೆಂಗಳೂರಿನ ಕಾಮಾಕ್ಷಿಪಾಳ್ಯ ಮೋರಿಯಲ್ಲಿ ಜೂನ್ 8ರಂದು ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಇದೊಂದು ಕೊಲೆ ಎನ್ನುವುದು ದೃಢವಾಗಿತ್ತು. ರೇಣುಕಾಸ್ವಾಮಿ ನಟ ದರ್ಶನ್ ಅವರ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಎನ್ನಲಾಗುತ್ತಿದೆ. ಈ ವಿಚಾರಕ್ಕೆ ಚಿತ್ರ ಹಿಂಸೆಯನ್ನ ನೀಡಿ ರೇಣುಕಾಸ್ವಾಮಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ಕಬ್ಬಿಣದ ಸಲಕೆಯಿಂದ ಹೊಡೆದು ಚಿತ್ರ ಹಿಂಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಹಾಕಿದ ಹಿನ್ನೆಲೆ ರೇಣುಕಾಸ್ವಾಮಿ ಅವರನ್ನ ಕರೆದಂದು ಹಲ್ಲೆ ಮಾಡಿದ್ದಾರೆ. ಅಲ್ಲದೇ ಈ ವೇಳೆ ರೇಣುಕಾಸ್ವಾಮಿ ಅವರು ಸಾವನ್ನಾಪ್ಪಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ ಸೇರಿದಂತೆ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ನಟ ದರ್ಶನ ಗೆಳತಿ ಪವಿತ್ರಾ ಗೌಡ ಅವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪೊಲೀಸರು ಪವಿತ್ರಾಗೌಡ ಅವರನ್ನು ಅನ್ನಪೂರ್ಣೇಶ್ವರಿ ಠಾಣೆಗೆ ಕರೆ ತಂದಿದ್ದಾರೆ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ನಟ ದರ್ಶನ್, ಪವಿತ್ರಾ ಸೇರಿ ನಾಲ್ವರ ವಿಚಾರಣೆ ನಡೆಯುತ್ತಿದೆ.
ರೇಣುಕಾಸ್ವಾಮಿ ಕೊಲೆಗೆ ದರ್ಶನ್ ಸೂಚನೆ ಕಾರಣ ಎಂದು ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಅವರು ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಹಾಗೂ ಫೋಟೋ ಕಳುಹಿಸಿದ್ದ ಎನ್ನುವ ಕಾರಣಕ್ಕೆ ದರ್ಶನ್ ಕೋಪಗೊಂಡು ಹುಡುಗರನ್ನು ಕಳುಹಿಸಿ ರೇಣುಕಾಸ್ವಾಮಿ ಅವರನ್ನು ಕರೆಸಿಕೊಂಡು ಅವರಿಗೆ ಹಿಂಸೆ ನೀಡಿದ್ದಾರೆ. ಹಲ್ಲೆ ವೇಳೆ ರೇಣುಕಾಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಅವರ ಮೃತದೇಹವನ್ನು ಚರಂಡಿಗೆ ಎಸೆಯಲಾಗಿದೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ದರ್ಶನ್ ಮನೆಯಲ್ಲಿ ಇರುವ ದರ್ಶನ್ ಅಪ್ತ ಪವನ್ , ಕಿಡ್ನಾಪ್ ಮಾಡಲು ಹೇಳಿದ್ದವನು, ಪವಿತ್ರಗೂ ಆಪ್ತರಾಗಿದ್ದಾರೆ, ಹೋಟೆಲ್ ಉದ್ಯಮಿ ಪ್ರದೋಶ್, ನಂದೀಶ್, ಕೇಶವಮೂರ್ತಿ , ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ, ವಿನಯ್, ಲಕ್ಷ್ಮಣ್ , ದರ್ಶನ್ ಫ್ಯಾನ್ ಅಸೋಷಿಯನ್ ಮೆಂಬರ್ ದೀಪಕ್ , ಕಾರ್ತಿಕ್ ಅವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications