Chandan Kumar: ಆ ಸಿನಿಮಾ ನಂತರ ನನಗೆ ಅವಕಾಶಗಳೇ ಬರಲಿಲ್ಲ: ನಟ ಚಂದನ್
ಕಿರುತೆರೆ ಮೂಲಕ ಸಖತ್ ಸೌಂಡ್ ಮಾಡಿದ್ದ ನಟ ಚಂದನ್ ಇದೀಗ ಸಿನಿಮಾ ನಟನಾಗಿ, ನಿರ್ದೇಶಕರಾಗಿದ್ದಾರೆ. ಚಂದನ್ ಕುಮಾರ್ ನಿರ್ದೇಶನದ "ಫ್ಲರ್ಟ್" ಸಿನಿಮಾಗಾಗಿ ಕಿಚ್ಚ ಸುದೀಪ್ ಅವರು ಹಾಡಿದ "ನೀ ನನ್ನ ಜೀವಾ" ಎಂಬ ಫ್ರೆಂಡ್‌ಶಿಪ್ ಸಾಂಗ್ ಕೂಡ ಸೊಗಸಾಗಿ ಮೂಡಿಬಂದಿದೆ. ಚಂದನ್ ಕುಮಾರ್ ಅವರು ಈ ಹಾಡಿನ ಸಾಹಿತ್ಯ ರಚನೆ ಮಾಡಿದ್ದಾರೆ. ಸುದೀಪ್ ಅವರಿಗೆ ಈ ಹಾಡು ಅವರ ಆಳವಾದ ಭಾವವನ್ನು ಮತ್ತು ಸ್ನೇಹದ ವಿಶಿಷ್ಟತೆಯನ್ನು ಅತ್ಯುತ್ತಮವಾಗಿ ವ್ಯಕ್ತಪಡಿಸಲು ಸೂಕ್ತ ಎಂದು ಅಭಿಪ್ರಾಯ ಪಟ್ಟು ಅವರಿಂದಲೇ ಹಾಡಿಸಿದ್ದಾರೆ. ಸುದೀಪ್ ಅವರೇ ನನಗೆ ಪ್ರೇರಣೆ, ನನಗೆ ಈಗ ಅವರು ಅಣ್ಣನಿಂದ್ದಂತೆ ಎಂದಿದ್ದಾರೆ.
ಈಗಿನ ಜನರೇಷನ್‌ನಲ್ಲಿ ಸ್ನೇಹಿತರ ನಡುವಿನ ಬಂಧದ ಕುರಿತು ಈ ಹಾಡು ಮೂಡಿಬಂದಿದೆ. ಇದಕ್ಕೆ ನನಗೆ ಸುದೀಪ್ ಅವರ ವಾಯ್ಸ್ ಬೇಕು ಎಂದು ಕೇಳಿಕೊಂಡೆ. ಅವರು ನನ್ನ ಮನವಿಗೆ ಒಪ್ಪಿಕೊಂಡು ಒಂದೇ ಗಂಟೆಯಲ್ಲಿ ಇದರ ಶೂಟಿಂಗ್ ಮುಗಿಸಿದರು ಎಂದು ಚಂದನ್ ಹೇಳಿದ್ದಾರೆ. ಚಿತ್ರದಲ್ಲಿ ಚಂದನ್ ಹಾಗೂ ಗಿರಿ ಬಾಲ್ಯ ಸ್ನೇಹಿತರಾಗಿ ಕಾಣಿಸಿಕೊಂಡು ಹಾಡಿನ ದೃಶ್ಯಗಳಲ್ಲಿ ನಿಂತಿದ್ದಾರೆ. ನಿರ್ದೇಶಕ ಹೇಳಿರುವಂತೆ, ಈ ಹಾಡನ್ನು ಫ್ರೆಂಡ್‌ಶಿಪ್ ಡೇಗೆ ಸರಿಯಾಗಿ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.

ʻಫ್ಲರ್ಟ್ʼ ಚಿತ್ರದಲ್ಲಿ ನಟಿಸುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಚಂದನ್ ಕುಮಾರ್ ಹೊತ್ತಿದ್ದಾರೆ. ಎವರೆಸ್ಟ್ ಪಿಕ್ಚರ್ಸ್ ಬ್ಯಾನರ್ ಅಡಿ ಚಂದನ್ ಅವರ ಪತ್ನಿ ಕವಿತಾ ಗೌಡ ಕೂಡ ಈ ಸಿನಿಮಾ ನಿರ್ಮಿಸಿದ್ದಾರೆ. ವಿಶೇಷವಾಗಿ ಸುದೀಪ್ ಅವರ ಹಾಡಿಗೆ ನಕುಲ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡಿನ ಬಿಡುಗಡೆ ಸಂದರ್ಭದಲ್ಲಿ ಸುದೀಪ್ ಅವರು ಚಂದನ್‌ಗೆ ವಿಡಿಯೋ ಮೂಲಕ ಶುಭ ಹಾರೈಸಿದ್ದಾರೆ.
ಹಠ ಹಿಡಿದಕ್ಕೆ ಹಾಡಿದೆ ಎಂದ ಕಿಚ್ಚ
ಈ ಹಿಂದೆ ಚಂದನ್ ಅವರು ಅರ್ಜುನ್ ಸರ್ಜಾ ಅವರ ಪುತ್ರಿ ಜೊತೆ ಪ್ರೇಮಬರಹ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ಚಂದನ್‌ಗೆ ಒಳ್ಳೆಯ ಆಫರ್‌ಗಳು ಸಿಕ್ಕಿಲ್ಲ ಎನ್ನಲಾಗಿದೆ. ಈ ಬಗ್ಗೆಯೂ ಚಂದನ್ ಅವರು ಫ್ಲರ್ಟ್ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಪ್ರೇಮಬರಹ ಸಿನಿಮಾ ಆದ ಮೇಲೆ ನನಗೆ ಸಿನಿಮಾ ಆಫರ್‌ಗಳು ಅಷ್ಟಾಗಿ ಬರಲಿಲ್ಲ. ಬಂದಿದ್ದೆಲ್ಲ ಶ್ರೀಮಂತ ಮನೆ ಹುಡುಗ, ಬಡವ ಅನ್ನೋ ಸ್ಟೋರಿಗಳೇ ಹೆಚ್ಚಾಗಿ ಬಂದವು. ಒಂದೇ ರೀತಿಯ ಕಥೆಗಳನ್ನ ಕೇಳಿ ಕೇಳಿ ನನಗೂ ಸಾಕಾಯ್ತು ಎಂದು ಚಂದನ್ ಹೇಳಿದ್ದಾರೆ.
ಚಂದನ್ ಅವರ ಫ್ಲರ್ಟ್ ಸಿನಿಮಾ ಬಗ್ಗೆ ತಾವು ಹಾಡಿದ ಸಾಂಗ್ ಬಗ್ಗೆ ಕಿಚ್ಚ ಸುದೀಪ್ ವಿಡಿಯೋದಲ್ಲಿ ಪ್ರತಿಕ್ರಿಯಿಸಿದ್ದಾರೆ. ಚಂದನ್‌ಗೆ ಆಲ್ ದಿ ಬೆಸ್ಟ್ ಎಂದಿದ್ದಾರೆ. ಈ ಸಿನಿಮಾ ನಿಮಗೆ ದೊಡ್ಡಮಟ್ಟದ ಯಶಸ್ಸು ತಂದುಕೊಡಲಿ ಎಂದು ಸುದೀಪ್ ಹೇಳಿದ್ದಾರೆ. "ನೀ ನನ್ನ ಜೀವ" ಸಾಂಗ್ ಮಾಡಿ ನನ್ನ ಕೈಯಲ್ಲಿ ಹಾಡಿಸಿದ ನಕುಲ್‌ಗೆ ಧನ್ಯವಾದ, ಈ ಹಾಡಿಗೆ ಚಂದನ್ ಸಾಹಿತ್ಯ ಬರೆದಿದ್ದು, ನನ್ನ ಪ್ರಕಾರ ಇದೊಂದು ಅದ್ಭುತವಾದ ಫ್ರೆಂಡ್‌ಶಿಪ್ ಸಾಂಗ್ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾನು ಯಾವತ್ತೂ ಮೆಲೋಡಿ ಸಾಂಗ್ ಹಾಡಿರಲಿಲ್ಲ. ಇದು ತುಂಬ ಒಳ್ಳೇ ಸಾಂಗ್. ಚಂದನ್ ಹಠ ಹಿಡಿದು ಕೊನೆಗೂ ನನ್ನಿಂದ ಹಾಡಿಸಿದರು ಎಂದಿದ್ದಾರೆ ಸುದೀಪ್.












Click it and Unblock the Notifications