ಡಬಲ್ ಮೀನಿಂಗ್ ಇದ್ರೆ ಮಾತ್ರ TRPನಾ?: ರಿಯಾಲಿಟಿ ಶೋ ಸ್ಪರ್ಧಿ ಹೇಳಿದ್ದೇನು?
ಕಾಮಿಡಿ ಕಿಲಾಡಿಗಳು ಶೋ ಮೂಲಕ ಕನ್ನಡ ಜನತೆಗೆ ಪರಿಚಿತರಾದ ಅಪ್ಪಣ್ಣ, ಇಂದು ಸ್ಯಾಂಡಲ್‌ವುಡ್‌ನ ಬೇಡಿಕೆಯ ಹಾಸ್ಯ ನಟರಾಗಿ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಂಡಿದ್ದಾರೆ. ಹಾಸ್ಯ ನಟನಾಗುವುದು ಎಷ್ಟು ಚಾಲೆಂಜಿಂಗ್ ಎನ್ನುವರ ಬಗ್ಗೆ ಮಾತನಾಡಿರುವ ಅಪ್ಪಣ್ಣ ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಕಾಮಿಡಿಗಳ ಬಳಕೆ ಬಗ್ಗೆ ಬಹಳ ಮುಕ್ತವಾಗಿ ಮಾತನಾಡಿದ್ದಾರೆ.
'ಕಿರಿಯರು ಹಿರಿಯರು ಸೇರದಂತೆ ಸಂಪೂರ್ಣ ಕುಟುಂಬಗಳು ಕೂತು ನೋಡುವ ಕಾಮಿಡಿ ಕಾರ್ಯಕ್ರಮದಲ್ಲಿ ಡಬಲ್ ಮೀನಿಂಗ್ ತಮಾಷೆಗಳ ಬಗ್ಗೆ ನನಗೂ ತುಂಬಾ ನೋವಿದೆ. ಈ ರೀತಿ ಕಾಡಿಮಿಗಳು ಸಮಾಜಕ್ಕೆ ತುಂಬಾ ಹಾನಿಯುಂಟು ಮಾಡುತ್ತದೆ. ಆದರೆ ನಮ್ಮನ್ನಾಳುವ ಮೇಲಿರುವ ಮಾಲೀಕರು, ಅವರ ಮೇಲಿರುವ ಮಾಲೀಕರು ನಂಬರ್ ಬೇಕು ಅಂತಾರೆ' ಎನ್ನುವುದರ ಮೂಲಕ ಡಬಲ್ ಮೀನಿಂಗ್ ತಮಾಷೆಗಳು ಟಿಆರ್‌ಪಿಗೊಸ್ಕರ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

'ಇದು ತಪ್ಪು ಅಂದಾಗ ಯಾರು ಇದನ್ನು ತಪ್ಪು ಎಂದು ಕಮೆಂಟ್ ಮಾಡುತ್ತಾನೋ ಅವನೇ ಟಿವಿ ಮುಂದೆ ಕುಳಿತು ನೋಡುತ್ತಾನೆ. ಅವನು ಕಮೆಂಟ್ ಮಾಡಲು ರೆಡಿಇದ್ದಾನೆ. ಡಬಲ್ ಮೀನಿಂಗ್, ಅಸಹ್ಯ ಮಾತನಾಡುತ್ತೀರಿ, ಫ್ಯಾಮಿಲಿ ನೋಡುವ ಶೋ ಎಂದು ಕಮೆಂಟ್ ಮಾಡುತ್ತಾನಲ್ಲ ಅವನೇ ಮೊದಲು ನೋಡುತ್ತಿರುತ್ತಾನೆ. ಹೀಗಾಗಿ ಹೇಳುವವನು ನೋಡುತ್ತಿದ್ದಾನೆ. ಹೇಳದೇ ಇರುವವನು ನೋಡುತ್ತಿದ್ದಾನೆ. ಅವನಿಗೆ ಅದೇ ಬೇಕಾಗಿದೆ' ಎಂದರು.
'ನಾವು ಶುದ್ಧವಾದ ಕಾಮಿಡಿ ಮಾಡುತ್ತೇವೆ. ರಾಜ ಹಾಸ್ಯ ಮಾಡುತ್ತೇವೆ ಅಂತಾ ಮಾಡಿದರೆ ನೋಡುಗರು ಎಷ್ಟಂತಾ ಅದೇ ಹಾಸ್ಯ ಮಾಡುತ್ತೀರಿ. ಹೊಸದಾಗಿ ಏನಾದರೂ ಮಾಡಿ ಅಂತಾರೆ. ಹೊಸದಾಗಿ ಮಾಡಲು ಹೋದರೆ ಅದಕ್ಕೆ ಡಬಲ್ ಮೀನಿಂಗ್ ಎಂದು ಹೆಸರು ಇಡುತ್ತಾರೆ' ಎಂದು ಹೇಳಿದರು.

'ಡಬಲ್ ಮೀನಿಂಗ್ ಇಲ್ಲ ಅಂತಾ ನಾನು ಹೇಳುವುದಿಲ್ಲ. ಖಂಡಿತಾ ಇದೆ. ನಮ್ಮವರೆಲ್ಲಾ ತುಂಬಾ ಕೆಟ್ಟದಾಗೇ ಮಾಡುತ್ತಿದ್ದಾರೆ. ನಾನು ಮಾಡಿದ್ದೇನೆ. ಅದನ್ನೂ ನಾನು ಒಪ್ಪಿಕೊಳ್ಳುತ್ತೇನೆ. ನಂದೂ ತಪ್ಪದು. ನನ್ನ ಬಾಯಿಂದ ಸಹ ಹೇಳಿದ್ದೇನೆ. ಹೀಗಾಗಿ ಅದು ಕಡಿಮೆಯಾಗಬೇಕು. ನಗಿಸಲು ಬೇರೆ ಬೇರೆ ದಾರಿಗಳಿದಾವೆ. ಶುದ್ಧವಾದ ತಮಾಷೆ ಮಾಡಲು ನಾವು ಪ್ರಯತ್ನ ಪಡಬೇಕು. ಇವರು ಕಂಟೆಂಟ್, ಕಾಮಿಡಿ, ನಂಬರ್ ಬರಬೇಕು ಅಂತಾಹೇಳಿ, ಇನ್ನೂ ಕೆಳಕ್ಕೆ ಹೋದರೆ ನೋಡಲು ಅಸಹ್ಯ ಎನಿಸುತ್ತದೆ' ಎಂದು ಅಪ್ಪಣ್ಣ ರಾಮದುರ್ಗ ಈ ದಿನ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹೇಳಿದ್ದಾರೆ.












Click it and Unblock the Notifications