Challennging Star Darshan: ತಮಿಳುನಾಡಿನಲ್ಲಿ ದರ್ಶನ್ ತೂಗುದೀಪ ಬಸ್ ನಿಲ್ದಾಣ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲಿ ಕೂಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಾಟೇರ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಅವರ ಅಭಿಮಾನಿ ಬಳಗ ಕೂಡ ಹೆಚ್ಚಾಗಿದೆ.

ಕಾಟೇರ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದರೂ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದೆ. ದರ್ಶನ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳಾಗಿದ್ದು, ಬೆಳ್ಳಿ ಪರ್ವ ಕಾರ್ಯಕ್ರಮ ಕೂಡ ಮಾಡಿದ್ದಾರೆ.

ಇತ್ತೀಚೆಗೆ ತಾನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ರಸ್ತೆಯೊಂದಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಹೆಸರಿಡಲಾಗಿತ್ತು. ಅಭಿಮಾನಿಗಳ ಒತ್ತಾಯದ ಮೇರೆಗೆ ವಾರ್ಡ್ ಸದಸ್ಯರೊಬ್ಬರು ನಗರದ ಪ್ರಮುಖ ರಸ್ತೆಯೊಂದಕ್ಕೆ ದರ್ಶನ್ ಹೆಸರು ಇಡಲು ಒಪ್ಪಿಗೆ ನೀಡಿದ್ದರು.

 A Bus Stop in a Tamil Nadu Village Named as Darshan Thoogudeepa

ಇದೀಗ ಬಸ್ ನಿಲ್ದಾಣವೊಂದಕ್ಕೆ ದರ್ಶನ್ ತೂಗುದೀಪ ಅವರ ಹೆಸರಿಟ್ಟು ಅಭಿಮಾನಿಗಳು ಅಭಿಮಾನ ತೋರಿದ್ದಾರೆ. ಅದೂ ಕೂಡ ಪಕ್ಕದ ತಮಿಳುನಾಡು ರಾಜ್ಯದಲ್ಲಿ ಎಂದರೆ ನೀವು ನಂಬುತ್ತೀರಾ!

ಹಳೇವೂರು ಬಸ್‌ ನಿಲ್ದಾಣಕ್ಕೆ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ತಾಲೂಕಿನ ಹಳೇವೂರು ಬಸ್ ನಿಲ್ದಾಣಕ್ಕೆ ನಟ ದರ್ಶನ್ ತೂಗುದೀಪ ಅವರ ಹೆಸರಿಟ್ಟು ತಮ್ಮ ಅಭಿಮಾನ ತೋರಿದ್ದಾರೆ.

ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ಹಳೇವೂರು ತಮಿಳುನಾಡಿಗೆ ಸೇರಿದ್ದರು ಇಲ್ಲಿನ ಬಹುಪಾಲು ಜನರ ತಾಯಿಭಾಷೆ ಕನ್ನಡ. ಇಲ್ಲಿ ಸಾಕಷ್ಟು ಜನಕ್ಕೆ ತಮಿಳು ಗೊತ್ತಿಲ್ಲ. ಇದನ್ನು ಅಪ್ಪಟ ಕನ್ನಡದ ಗಡಿ ಹಳ್ಳಿ ಎಂದೇ ಗುರುತಿಸಲಾಗುತ್ತದೆ. ಈ ಊರು ಗುಮ್ಮಳಾಪುರದಿಂದ ಸುಮಾರು 4 ಕಿ. ಮೀ ದೂರದಲ್ಲಿದೆ .

ತಮಿಳುನಾಡು ಕರ್ನಾಟಕ ಗಡಿ ಭಾಗದಲ್ಲಿ ಹಲವು ಹಳ್ಳಿಗಳು ತಮಿಳುನಾಡಿಗೆ ಸೇರಿದ್ದರೂ, ಕನ್ನಡವನ್ನೇ ಆಡುಭಾಷೆಯನ್ನಾಗಿ ಉಳಿಸಿಕೊಂಡಿವೆ. ಇತ್ತೀಚೆಗೆ ಕಾಟೇರ ಸಿನಿಮಾ ಹೊಸೂರಿನಲ್ಲಿ ಕೂಡ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು.

ಇಲ್ಲಿನ ಜನ ಕನ್ನಡ ಸಿನಿಮಾಗಳನ್ನು ನೋಡುವ ಕಾರಣ ಹಲವು ನಟರಿಗೆ ಅಭಿಮಾನಿಗಳು ಇದ್ದಾರೆ. ಕರಿಯನಪಾಳ್ಯ, ಡೆಂಕಣಿಕೋಟೆಯ ಡಿ ಕಂಪನಿ ಅಭಿಮಾನಿ ಬಳಗದ ವತಿಯಿಂದ ಇಲ್ಲಿ ಬಸ್ ನಿಲ್ದಾಣಕ್ಕೆ ದರ್ಶನ್ ಅವರ ಹೆಸರಿಡಲಾಗಿದೆ. ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳೇ ಈ ಬಸ್ ನಿಲ್ದಾಣ ನಿರ್ಮಿಸಿ ನೆಚ್ಚಿನ ನಟನ ಹೆಸರಿಟ್ಟು ಅಭಿಮಾನ ತೋರಿಸಿದ್ದಾರೆ.

ಕಾಟೇರ ಸಿನಿಮಾದ ಯಶಸ್ಸಿನ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡೆವಿಲ್ ದಿ ಹೀರೋ' ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಇದೇ ವರ್ಷ ಡೆವಿಲ್ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ಬಳಿಕ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+