70th National Award: ರಿಷಬ್ ಶೆಟ್ಟಿಯ 'ಕಾಂತಾರ', ಯಶ್ 'ಕೆಜಿಎಫ್' ಜೊತೆಗೆ ಯಾರಿಗೆಲ್ಲ ಪ್ರಶಸ್ತಿ ದಕ್ಕಿದೆ, ಇಲ್ಲಿದೆ ಲಿಸ್ಟ್
ಬೆಂಗಳೂರು, ಆಗಸ್ಟ್ 16: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಶುಕ್ರವಾರ 70ನೇ ರಾಷ್ಟ್ರೀಯ ಚಲನಚಿತ್ರ ಪಶಸ್ತಿ 2022ರ ಪಟ್ಟಿಯನ್ನು (70th National Award) ಪ್ರಕಟಿಸಿದೆ. ಇದರಲ್ಲಿ ಕನ್ನಡ ಚಿತ್ರರಂಗ ತಿರುಗಿ ನೋಡುವಂತೆ ಮಾಡಿರುವ ನಟ ರಾಕಿಂಗ್ ಸ್ಟಾರ್ ಯಶ್ (Actor Yash) ಅವರ ಕೆಜಿಎಫ್ (KGF) ಸಿನಿಮಾಗೆ ಎರಡು ಹಾಗೂ ನಟ ರಿಶಬ್ ಶೆಟ್ಟಿಯವರ (Actor Risheb Shetty) 'ಕಾಂತಾರ' ಸಿನಿಮಾ (Kantara) ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ. ಈ ಮೂಲಕ ಕನ್ನಡಿಗರು, ಕನ್ನಡ ಚಿತ್ರರಂಗ, ಕಲಾವಿದರು ಹೆಮ್ಮೆ ಪಡುವಂತೆ ಈ ಸಿನಿಮಾಗಳು ಮಾಡಿವೆ.

ಪ್ರಶಾಂತ್ ನೀಲ್ ನಿರ್ದೇಶನದ ನಟ 'ಯಶ್' ಅಭಿನಯದ 'ಕೆಜಿಎಫ್ ಸರಣಿ' ಸಿನಿಮಾಗಳ ಪೈಕಿ 'ಕೆಜಿಎಫ್ 2 'ಗೆ 'ಅತ್ಯುತ್ತಮ ಮನರಂಜನಾತ್ಮಕ ಸಿನಿಮಾ' ವಿಭಾಗದಲ್ಲಿ ಹಾಗೂ ಅತ್ಯತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿದೆ. ಈ ಸರಣಿ ಸಿನಿಮಾಗಳು ದೇಶವ್ಯಾಪಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದ್ದವು. ಕನ್ನಡ ಚಿತ್ರರಂಗ ಕೀತಿಯನ್ನು ಮುಗಿಲೆತ್ತರಕ್ಕೆ ಮುಟ್ಟಿಸಿದ್ದವು.
ಇನ್ನು ಕರಾವಳಿ ಸಂಸ್ಕೃತಿ ಅಲ್ಲಿನ ಧೈವಾರಾಧನೆ ಕುರಿತು 'ಕಾಂತಾರ' ಸಿನಿಮಾ ನಿರ್ದೇಶಿಸಿ, ತಾವೇ ನಟಿಸಿರುವ 'ರಿಶಬ್ ಶೆಟ್ಟಿ'ಯವರು 'ಅತ್ಯುತ್ತಮ ನಟ' ವಿಭಾಗದಲ್ಲಿ 'ಪ್ರಶಸ್ತಿ' ಪಡೆದುಕೊಂಡಿದ್ದಾರೆ. ಇನ್ನೂ 'ಕನ್ನಡದ ಅತ್ಯುತ್ತಮ ಮನರಂಜನಾ ಚಿತ್ರ' ಎಂದು 'ಕಾಂತಾರ'ಗೆ ಪ್ರಶಸ್ತಿ ಘೋಷಿಸಲಾಗಿದೆ.
ಅತ್ಯುತ್ತಮ ತಮಿಳು ಸಿನಿಮಾ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯು 'ಪೊನ್ನಿಯಿನ್ ಸೆಲ್ವನ್'ಗೆ ಧಕ್ಕಿದೆ. ಅತ್ಯುತ್ತಮ ನಟಿ ವಿಭಾಗದಲ್ಲಿ ನಟಿ ನಿತ್ಯ ಮೆನೆನ್ (ತಿರುಚಿತ್ರಂಬಲಂ) ಅವರಿಗೆ ಸಿಕ್ಕಿದೆ.
ಈ ಪ್ರಶಸ್ತಿ ಪಟ್ಟಿಯು 2022ರ ಜನವರಿ 1ರಿಂದ ಡಿಸೆಂಬರ್ 31 ನಡುವೆ ಸೆನ್ಸಾರ್ ಪ್ರಮಾಣ ಪತ್ರ ಪಡೆದು ಬಿಡುಗಡೆ ಆದ ಸಿನಿಮಾಗಳಿಗೆ ನೀಡಲಾದ ಪ್ರಶಸ್ತಿಗಳಾಗಿವೆ
70ನೇ ರಾಷ್ಟ್ರೀಯ ಪ್ರಶಸ್ತಿ 2022 ಪೂರ್ಣ ಪಟ್ಟಿ ಇಲ್ಲಿದೆ
* ಅತ್ಯುತ್ತಮ ಚಿತ್ರ - ಆಟ್ಟಂ
* ಅತ್ಯುತ್ತಮ ನಿರ್ದೇಶನ - ನಿರ್ದೇಶಕ ಸೂರಜ್ ಆರ್ ಬರ್ಜಾತ್ಯಾ (ಉಂಚೈ)
* ಸಂಪೂರ್ಣ ಮನರಂಜನೆಯ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿ- ಕನ್ನಡದ 'ಕಾಂತಾರ'
* ಅತ್ಯುತ್ತಮ ನಟ - ರಿಷಬ್ ಶೆಟ್ಟಿ (ಕಾಂತಾರ)
* ಅತ್ಯುತ್ತಮ ನಟಿ - ಮಾನಸಿ ಪರೇಖ್ (ಕಚ್ ಎಕ್ಸ್‌ಪ್ರೆಸ್ ಸಿನಿಮಾ)
* ಅತ್ಯುತ್ತಮ ಪೋಷಕ ನಟ - ಪವನ್ ರಾಜ್ ಮಲ್ಹೋತ್ರಾ (ಫೌಜಾ)
* ಅತ್ಯುತ್ತಮ ಪೋಷಕ ನಟಿ - ನೀನಾ ಗುಪ್ತಾ (ಉಂಚೈ)
* ಅತ್ಯುತ್ತಮ ಬಾಲ ಕಲಾವಿದ - ಶ್ರೀಪತ್ (ಮಾಲಿಕಪ್ಪುರಂ)
* ಅತ್ಯುತ್ತಮ ಛಾಯಾಗ್ರಹಣ - ರವಿವರ್ಮಮ್ (ಪೊನ್ನಿಯಿನ್ ಸೆಲ್ವನ್ 1)
* ಅತ್ಯುತ್ತಮ ಚಿತ್ರಕಥೆ - ಆನಂದ್ ಏಕರ್ಷಿ (ಆಟ್ಟಂ)
* ಅತ್ಯುತ್ತಮ ಸಂಭಾಷಣೆ ಲೇಖಕಿ - ಅರ್ಪಿತಾ ಮುಖರ್ಜಿ ಮತ್ತು ಗುಲ್ಮೊಹರ್‌ಗಾಗಿ ರಾಹುಲ್ ವಿ ಚಿಟ್ಟೆಲಾ
* ಅತ್ಯುತ್ತಮ ನಿರ್ಮಾಣ ವಿನ್ಯಾಸ - ಆನಂದ ಅಧ್ಯಾ (ಅಪರಾಜಿತೋ)
* ಅತ್ಯುತ್ತಮ ಆಕ್ಷನ್ ಕೊರಿಯೋಗ್ರಫಿ - ಅನ್ಬರಿವ್ (ಕೆಜಿಎಫ್ 2)
* ಅತ್ಯುತ್ತಮ ಮೇಕಪ್ ಕಲಾವಿದ - ಸೋಮನಾಥ್ ಕುಂದು (ಅಪರಾಜಿತೋ)
* ಅತ್ಯುತ್ತಮ ವಸ್ತ್ರ ವಿನ್ಯಾಸ - ನಿಕಿ ಜೋಶಿ (ಕಚ್ ಎಕ್ಸ್‌ಪ್ರೆಸ್)
* ಹಾಡುಗಳಿಗೆ ಅತ್ಯುತ್ತಮ ಸಂಗೀತ ನಿರ್ದೇಶನ - ಪ್ರೀತಮ್ (ಬ್ರಹ್ಮಾಸ್ತ್ರ 1- ಶಿವ)
* ಹಿನ್ನೆಲೆ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶನ - ಎ.ಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್ 2)
* ಅತ್ಯುತ್ತಮ ಸಾಹಿತ್ಯ - ನೌಶಾದ್ ಸದರ್ ಖಾನ್ (ಸಲಾಮಿ ಸಾಹಿತ್ಯ : ಫೌಜಾ)
* ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ - ಅರಿಜಿತ್ ಸಿಂಗ್ ('ಕೇಸರಿಯಾ': ಬ್ರಹ್ಮಾಸ್ತ್ರದ 1- ಶಿವ)
* ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ - ಬಾಂಬೆ ಜಯಶ್ರೀ (ಚಾಯುಂ ವೆಯಿಲ್: ಸೌದಿ ವೆಲ್ಲಕ್ಕ)
* ಅತ್ಯುತ್ತಮ ನೃತ್ಯ ಸಂಯೋಜನೆ - ಜಾನಿ ಮಾಸ್ಟರ್ ಮತ್ತು ಸತೀಶ್ ಕೃಷ್ಣನ್ (ಮೇಘಂ ಕರುಕಥ: ತಿರುಚಿತ್ರಂಬಲಂ)
* ಅತ್ಯುತ್ತಮ ಧ್ವನಿ ವಿನ್ಯಾಸ - ಆನಂದ್ ಕೃಷ್ಣಮೂರ್ತಿ (ಪೊನ್ನಿಯಿನ್ ಸೆಲ್ವನ್ - ಭಾಗ 1)
* ಅತ್ಯುತ್ತಮ ಸಂಕಲನ - ಮಹೇಶ್ ಭುವನಂದ್ (ಆಟ್ಟಂ)
ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ ವಿಭಾಗದ ಪ್ರಶಸ್ತಿ ಪಟ್ಟಿ ಯಾರಿಗೆ?
* ವಿಶೇಷ ತೀರ್ಪುಗಾರರ ಪ್ರಶಸ್ತಿ - ಮನೋಜ್ ಬಾಜ್‌ಪೇಯಿ ಮತ್ತು ಕದಿಕನ್‌ಗಾಗಿ ಸಂಜೋಯ್ ಚೌಧರಿ (ಗುಲ್ಮೊಹರ್)
ವಿಶೇಷ ಸಿನಿಮಾ (ಫೀಚರ್ ಫಿಲ್ಮ್) ಪಟ್ಟಿ
* ಹಿಂದಿಯಲ್ಲಿ ಅತ್ಯುತ್ತಮ ಚಲನಚಿತ್ರ - ರಾಹುಲ್ ವಿ. ಚಿತ್ತೆಲ್ಲಾ ಅವರ ಗುಲ್ಮೊಹರ್
* ಅಸ್ಸಾಮಿಯಲ್ಲಿ ಅತ್ಯುತ್ತಮ ಚಲನಚಿತ್ರ - ಕುಲನಂದಿನಿ ಮಹಂತ ಅವರ ಎಮುತಿ ಪುತಿ
* ಬೆಂಗಾಲಿಯಲ್ಲಿ ಅತ್ಯುತ್ತಮ ಚಲನಚಿತ್ರ - ಕೌಶಿಕ್ ಗಂಗೂಲಾ ಅವರ ಕಬೇರಿ ಅಂತರಧನ
* ಕನ್ನಡದ ಅತ್ಯುತ್ತಮ ಚಲನಚಿತ್ರ - ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ 2'
* ಮಲಯಾಳಂನ ಅತ್ಯುತ್ತಮ ಚಲನಚಿತ್ರ - ತರುಣ್ ಮೂರ್ತಿಯವರ ಸೌದಿ ವೆಲ್ಲಕ್ಕ
* ಮರಾಠಿಯಲ್ಲಿ ಅತ್ಯುತ್ತಮ ಚಲನಚಿತ್ರ - ಪರೇಶ್ ಮೊಕಾಶಿ ಅವರ ವಾಲ್ವಿ
* ಪಂಜಾಬಿಯಲ್ಲಿ ಅತ್ಯುತ್ತಮ ಚಲನಚಿತ್ರ - ಮುಖೇಶ್ ಗೌತಮ್ ಅವರ ಬಾಘಿ ದಿ ಧೀ
* ತಮಿಳಿನ ಅತ್ಯುತ್ತಮ ಚಲನಚಿತ್ರ - ಪೊನ್ನಿಯಿನ್ ಸೆಲ್ವನ್ ಭಾಗ 1, ಮಣಿರತ್ನಂ ಅವರಿಂದ
* ತೆಲುಗಿನ ಅತ್ಯುತ್ತಮ ಚಲನಚಿತ್ರ - ಕಾರ್ತಿಕೇಯ 2, ಚಂದೂ ಮೊಂಡೆಟಿ
* ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್‌ನಲ್ಲಿ ಅತ್ಯುತ್ತಮ ಚಲನಚಿತ್ರ -ಅಯನ್ ಮುಖರ್ಜಿ ( ಬ್ರಹ್ಮಾಸ್ತ್ರ: ಭಾಗ 1 - ಶಿವ)
* ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ - ವಿರಾಲ್ ಶಾ (ಕಚ್ ಎಕ್ಸ್‌ಪ್ರೆಸ್)
ನಾನ್-ಫೀಚರ್ ಫಿಲ್ಮ್ ವಿಭಾಗಗಳು
* ಅತ್ಯುತ್ತಮ ನಾನ್-ಫೀಚರ್ ಫಿಲ್ಮ್ - ಸಿದ್ಧಾಂತ್ ಸರಿನ್ ಅವರ ಅಯೆನಾ
* ಅತ್ಯುತ್ತಮ ಸಾಕ್ಷ್ಯಚಿತ್ರ - ಮರ್ಮರ್ಸ್ ಆಫ್ ದಿ ಜಂಗಲ್
* ಅತ್ಯುತ್ತಮ ಮಾನವಶಾಸ್ತ್ರೀಯ/ಜನಾಂಗೀಯ ಚಿತ್ರ
* ಅತ್ಯುತ್ತಮ ಕಲೆ/ಸಾಂಸ್ಕೃತಿಕ ಚಿತ್ರ
* ಅತ್ಯುತ್ತಮ ವೈಜ್ಞಾನಿಕ ಚಿತ್ರ
* ಅತ್ಯುತ್ತಮ ಪ್ರಚಾರ ಚಿತ್ರ
* ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ
* ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ - ಜೋಶಿ ಬೆನೆಡಿಕ್ಟ್ (ತೆಂಗಿನ ಮರ)
ಅತ್ಯುತ್ತಮ ಕಿರುಚಿತ್ರ ವಿಭಾಗದ ಪ್ರಶಸ್ತಿಗಳ ಪಟ್ಟಿ
* ಅತ್ಯುತ್ತಮ ನಾನ್-ಫೀಚರ್ ಫಿಲ್ಮ್ ಡೈರೆಕ್ಷನ್ - ಮಿರಿಯಮ್ ಚಾಂಡಿ ಮೆನಾಚೆರಿ ಅವರಿಂದ ದಿ ಶ್ಯಾಡೋ
* ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ ಸಂಗೀತ ನಿರ್ದೇಶನ - ವಿಶಾಲ್ ಭಾರದ್ವಾಜ್ ಫರ್ಸತ್ (ಲೀಜರ್)
* ಅತ್ಯುತ್ತಮ ಸಿನಿಮಾ ಪುಸ್ತಕ - ಕಿಶೋರ್ ಕುಮಾರ್: ಅನಿರುಧಾ ಭಟ್ಟಾಚಾರ್ಯ ಮತ್ತು ಪಾರ್ಥಿವ್ ಧರ್ ಅವರ 'ದಿ ಅಲ್ಟಿಮೇಟ್ ಬಯೋಗ್ರಫಿ'
* ಅತ್ಯುತ್ತಮ ಚಲನಚಿತ್ರ ವಿಮರ್ಶಕ - ದೀಪಕ್ ದುವಾ (ಹಿಂದಿ)
* ಅತ್ಯುತ್ತಮ ಮೊದಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ ಘೋಷಿಸಲಾಗಿದೆ.












Click it and Unblock the Notifications