50 Crore Dog: 50 ಕೋಟಿ ರೂಪಾಯಿಯ ಶ್ವಾನ: 'ಇದು ನಾಯಿ ಅಲ್ಲ ಹುಲಿ' ಎಂದ ಕೆ ಮಂಜು

ಇದೇ ತಿಂಗಳು ಫೆಬ್ರವರಿ 21ನೇ ತಾರೀಕು 'ವಿಷ್ಣುಪ್ರಿಯಾ' ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ಟ್ರೇಲರ್ ಟೀಸರ್ ನೋಡಿದವರ ಕಣ್ಣಲ್ಲಿ ನೀರು ತರಿಸುತ್ತಿದೆ. ಯಾಕೆಂದರೆ ಅಷ್ಟೊಂದು ಎಮೋಷನಲ್ ಆಗಿದೆ ಸಿನಿಮಾ. ಆದರೆ ಈ ಸಿನಿಮಾ ಬಗ್ಗೆ ನಾವು ನಂತರ ಮಾತನಾಡೋಣ. ಈಗ ವಿಷ್ಣುಪ್ರಿಯಾ ಸಿನಿಮಾ ಇವೆಂಟ್​​ಗೆ ಬಂದ 50 ಕೋಟಿ ರೂಪಾಯಿಯ ಶ್ವಾನದ ಬಗ್ಗೆ ತಿಳಿಯೋಣ. ಈ ಸಿನಿಮಾ ಇವೆಂಟಿಗೆ ದುಬಾರಿ ನಾಯಿ ಬಂದಿದ್ದು ಯಾಕೆ?

ʼವಿಷ್ಣುಪ್ರಿಯಾʼ ಸಿನಿಮಾದಲ್ಲಿ ಮಧುರ ಪ್ರೇಮ ಕಾವ್ಯ ಇದೆಯಂತೆ. ಇದೊಂದು ಉತ್ತರ ಕರ್ನಾಟಕದ ನೈಜ ಕತೆಯಾಗಿದೆಯಂತೆ. ಈ ಸಿನಿಮಾದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ ನಟಿಸಿದ್ದಾರೆ. ವಿಕೆ ಪ್ರಕಾಶ್‌ ಅವರು ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಕೆ ಮಂಜು ಅವರು ಮಗ ಶ್ರೇಯಸ್‌ಗೋಸ್ಕರ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರೆಸ್‌ ಮೀಟ್‌ನಲ್ಲಿ ಈ ಸಿನಿಮಾಗಿಂತ ಅಲ್ಲಿಗೆ ಬಂದಿದ್ದ ನಾಯಿ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ. ಹಾಗಾದರೆ ಯಾರದ್ದು ಈ ನಾಯಿ?

50 crore dog at the Vishnupriya cinema event

ಹೌದು... ಕೆ ಮಂಜು ಅವರು ತಮ್ಮ 30 ವರ್ಷದ ಗೆಳೆಯ ಸತೀಶ್ ಅವರಿಗೆ ಮಗ ಶ್ರೇಯಸ್‌ಗೋಸ್ಕರ ಒಂದು ನಾಯಿ ಮರಿಯನ್ನು ನೀಡುವಂತೆ ಕೇಳಿದ್ದರಂತೆ. ತುಂಬಾ ವರ್ಷಗಳಿಂದ ಗೆಳೆಯ ಸತೀಶ್ ಅವರಿಗೆ ನಾಯಿ ಮರಿಯನ್ನು ಕೇಳುತ್ತಿದ್ದರಂತೆ. ನಾಯಿ ಮರಿಯನ್ನು ಕೊಡಲು 'ವಿಷ್ಣುಪ್ರಿಯಾ' ಇವೆಂಟ್ ಪ್ರೆಸ್‌ಮೀಟ್ ಅನ್ನು ಆಯ್ಕೆ ಮಾಡಿಕೊಂಡ ಸತೀಶ್ ನಾಯಿಯನ್ನು ತಂದು ಕೆ ಮಂಜು ಮುಂದೆ ನಿಲ್ಲಿಸಿದ್ದಾರೆ. ಆದರೆ ನಾಯಿಯನ್ನು ನೋಡಿ ಮಂಜು ಶಾಕ್ ಆಗಿದ್ದಾರೆ. 'ನಾಯಿ ಮರಿ ತೆಗೆದುಕೊಂಡು ಬಾ ಅಂದರೆ ಸತೀಶ್ ಅವರು ಹುಲಿ ಮರಿಯನ್ನು ತಂದಿದ್ದಾರೆ' ಎಂದು ಕಾಮಿಡಿ ಮಾಡಿದ್ದಾರೆ ಮಂಜು.

ವಿಶ್ವದಲ್ಲಿ ಅಪರೂಪದ ಹಾಗೂ ಅತ್ಯಂತ ದುಬಾರಿ ನಾಯಿಯನ್ನ ಗೆಳೆಯ ಸತೀಶ್ ಮಂಜು ಅವರಿಗೆ ನೀಡಿದ್ದಾರೆ. ಇದರ ಬೆಲೆ ಬರೋಬ್ಬರಿ 50 ಕೋಟಿ ರೂಪಾಯಿಯಂತೆ. ನೋಡಲು ಹುಲಿ ಮರಿಯಂತೆ ಕಾಣುವ ಈ ನಾಯಿಯ ವಯಸ್ಸು ತೀರಾ ಕಡಿಮೆ ಇದ್ದು, ಇದಿನ್ನು ಮೂರು ಪಟ್ಟು ತುಂಬಾ ದೊಡ್ಡದಾಗಿ ಬೆಳೆಯುತ್ತದೆ ಎಂದು ಸತೀಶ್ ಹೇಳಿಕೊಂಡಿದ್ದಾರೆ.

ಇದಕ್ಕೆ ಮಂಜು ಇಷ್ಟೊಂದು ಹಣದಲ್ಲಿ ಒಂದು ಹಿಂದಿ ಸಿನಿಮಾ ಮಾಡಬಹುದು. ನನಗೆ ಕಡಿಮೆ ದುಡ್ಡಲ್ಲಿ ನಾಯಿ ಕೊಡು ಸಾಕು ಎಂದು ಸತೀಶ್ ಬಳಿ ಕೇಳಿಕೊಂಡಿದ್ದಾರೆ. ಆದರೆ ಸತೀಶ್ ಅವರು 'ನನಗೆ ದುಡ್ಡು ಬೇಡ, ನೀನು ನನ್ನ ಗೆಳೆಯ ನಾನು ಇದನ್ನು ನಿನಗೆ ಫ್ರೀ ಕೊಡುತ್ತೇನೆ' ಎಂದು ಹೇಳಿದ್ದಾರೆ.

ನಾನು ನನ್ನ ಮಗನಿಗಾಗಿ ಸಿನಿಮಾ ಮಾಡಿದೆ. ನಾಯಿ ಮರಿ ಗಿಫ್ಟ್‌ ಕೊಡಬೇಕು ಅಂತ ಬಯಸಿದ್ದೆ. ಆದರೆ ಹುಲಿ ಮರಿ ಕೊಡಬೇಕು ಅಂದುಕೊಂಡಿರಲಿಲ್ಲ. ಆದರೆ ಸತೀಶ್ ಅವರು ಹುಲಿ ಮರಿ ತಂದಿದ್ದಾರೆ ಎಂದು ಮಂಜು ಕಾಮಿಡಿ ಮಾಡಿದ್ದಾರೆ. ನಾನು ಕೇಳಿದು ಒಂದು ಲಕ್ಷ ರೂಪಾಯಿ ನಾಯಿ. ಇದು 50 ಕೋಟಿ ರೂಪಾಯಿ ಅಂತೆ. ಗಿಫ್ಟ್ ತೊಗೊಬೇಕು ಇಷ್ಟೊಂದು ದುಬಾರಿ ಗಿಫ್ಟ್‌ ಬೇಡ ತಪ್ಪಾಗುತ್ತೆ ಎಂದಿದ್ದಾರೆ ಮಂಜು.

ಈ ನಾಯಿ ತುಂಬಾ ಅಪರೂಪ. ಇದು ಫಾರೆನ್‌ ಅಲ್ಲಿ ಒಬ್ಬ ಮಹಿಳೆಯ ಬಳಿ ಇದೆಯಂತೆ. ಒಂದು ವಾರ ಊಟ ಹಾಕಿದರೆ ಹೊಂದಿಕೊಳ್ಳುವ ಈ ನಾಯಿ ತುಂಬಾ ಶಕ್ತಿಶಾಲಿ. ಜೊತೆಗೆ ಜನರೊಂದಿಗೆ ಬೇಗ ಹೊಂದಿಕೊಳ್ಳುವುದಿಲ್ಲ. ಆದರೆ ಈ ನಾಯಿಯನ್ನು ಮಂಜು ಅವರು ತಿರಸ್ಕರಿಸಿದ್ದಾರೆ. ಬದಲಾಗಿ ಸಣ್ಣ ನಾಯಿ ಮರಿ ತಂದು ಕೊಡಲು ಕೇಳಿದ್ದಾರೆ. ವಿಷ್ಣುಪ್ರಿಯ ರಿಯಲ್ ಲವ್ ಸ್ಟೋರಿ. ಈ ಸಿನಿಮಾ ನಿರ್ಮಾಣಕ್ಕೆ ಕೆ.ಮಂಜು ದುಡ್ಡು ಹಾಕಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+