Bigg Boss: ಬಿಗ್‌ಬಾಸ್ ಶೋಗೆ ಈ ಬಾರಿ 3 ಜನ ನಿರೂಪಕರು, ಧಮಾಕ!
Bigg Boss: ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಹೊಸ ಹೊಸ ಥೀಮ್‌ಗಳನ್ನು ಪರಿಯಚಯಿಸಲಾಗುತ್ತಿದೆ. ಪ್ರತಿ ವರ್ಷವೂ ಬಿಗ್‌ಬಾಸ್‌ನಲ್ಲಿ ಒಂದಿಲ್ಲೊಂದು ಬದಲಾವಣೆ ಆಗುತ್ತಿದೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಬಿಗ್‌ಬಾಸ್ ತಂಡ ಮಾಡುತ್ತಿದೆ. ಹೊಸ ನಿರೂಪಕರು ಹಾಗೂ ಜನಸಾಮಾನ್ಯರನ್ನು ಬಿಗ್‌ಬಾಸ್ ಶೋಗೆ ಕರೆಸುವುದು. ಕಲಾವಿದರ ಹಾಗೂ ಟ್ರೋಲ್, ವಿವಾದಕ್ಕೆ ಒಳಗಾಗಿರುವ ಸೆಲೆಬ್ರಿಟಿಗಳನ್ನು ಬಿಗ್‌ಬಾಸ್‌ಗೆ ಕರೆಸುವುದು ಇದೆ. ಆದರೆ ಈ ಬಾರಿ ಇನ್ನೊಂದು ಹೊಸ ಪ್ರಯೋಗವನ್ನೇ ಬಿಗ್‌ಬಾಸ್‌ನಲ್ಲಿ ಮಾಡಲಾಗುತ್ತಿದೆ. ಅದೇ ಬಿಗ್‌ಬಾಸ್‌ನಲ್ಲಿ ಮೂರು ನಿರೂಪಕರು ಇರುವುದು. ಹೌದು ಈ ಬಾರಿಯ ಬಿಗ್‌ಬಾಸ್‌ನಲ್ಲಿ ಒಬ್ಬರಲ್ಲ.. ಮೂರು ಜನ ನಿರೂಪಕರು ಇರಲಿದ್ದಾರೆ!
ಈ ವರ್ಷದ ಬಿಗ್ ಬಾಸ್ ಹೊಸ ಸೀಸನ್‌ಗೆ ವಿವಿಧ ಭಾಷೆಗಳಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಕನ್ನಡದ ಬಿಗ್‌ಬಾಸ್‌ಗೆ ಕಳೆದ ಬಾರಿಯ ಶೋನಲ್ಲಿ ಭರ್ಜರಿ ರೆಸ್ಪಾನ್ಸ್ ಬಂದಿದೆ. ಅಲ್ಲದೇ ತಮಿಳು ಹಾಗೂ ತೆಲುಗು ಭಾಷೆಗಳಲ್ಲೂ ಕಳೆದ ಬಾರಿ ಒಳ್ಳೆಯ ರೆಸ್ಪಾನ್ಸ್ ಇತ್ತು. ಇನ್ನು ಕಳೆದ ಬಾರಿ ಬಿಗ್‌ಬಾಸ್ ಶೋ ಹಲವು ಕಾರಣಕ್ಕೆ ವಿಶೇಷವಾಗಿತ್ತು. ಸೆಮಿ ಫೈನಲ್ ಹಾಗೂ ಫೈನಲ್‌ನಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿತ್ತು. ಈ ಬಾರಿ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿ ಬಿಗ್‌ಬಾಸ್ ನಿರೂಪಣೆಯಲ್ಲೂ ಕೆಲವೊಂದು ಬದಲಾವಣೆಗಳು ಆಗಿವೆ. ಈ ಬಾರಿ ಮೂರು ಜನ ನಿರೂಪಕರು ಇರಲಿದ್ದಾರೆ ಅಂತ ಹೇಳಲಾಗಿದೆ.

ಬೇರೆ ಬೇರೆ ಭಾಷೆಗಳಲ್ಲಿ ಶೋ ಆರಂಭಕ್ಕೆ ತಯಾರಿ ನಡೆಯುತ್ತಿದೆ. ಹಿಂದಿ ಭಾಷೆಯಲ್ಲಿ ಈಗಾಗಲೇ 18 ಸೀಸನ್‌ಗಳು ಪೂರ್ಣಗೊಂಡಿದ್ದು 19ನೇ ಸೀಸನ್ಗೆ ಭರ್ಜರಿ ಸಿದ್ಧತೆ ಪ್ರಾರಂಭವಾಗಿದೆ. ಇದರ ನಿರೂಪಣೆಯನ್ನು ನಟ ಸಲ್ಮಾನ್ ಖಾನ್ ಅವರು ನಡೆಸಿಕೊಡುತ್ತಿದ್ದು. ಮುಂದಿನ ಶೋ ನಿರೂಪಣೆಯನ್ನು ನಟ ಸಲ್ಮಾನ್ ಖಾನ್ ಅವರು ಸೇರಿ ಮೂವರು ನಿರೂಪಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಹಿಂದಿಯಲ್ಲಿ ಈ ರೀತಿ ಬದಲಾವಣೆ ಆಗುತ್ತಿರುವುದು ಮುಂದಿನ ದಿನಗಳಲ್ಲಿ ಕನ್ನಡದಲ್ಲೂ ಹೊಸ ಮಾದರಿಯ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಿಂದಿ ಬಿಗ್‌ಬಾಸ್ 18 ಸೀಸನ್ ಪೂರ್ಣಗೊಂಡಿದೆ. ಇದೀಗ ಬಿಗ್‌ಬಾಸ್ ಹಿಂದಿ 19ನೇ ಸೀಸನ್ಗೆ ಭರ್ಜರಿ ಸಿದ್ಧತೆ ಶುರುವಾಗಿದೆ. ಇಷ್ಟು ವರ್ಷ ಬಿಗ್‌ಬಾಸ್ 3 ತಿಂಗಳು ಅಂದರೆ 100 ದಿನಗಳ ಅವಧಿಗೆ ನಡೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಹೊಸ ಮಾದರಿಯ ಪ್ರಯೋಗವನ್ನು ಮಾಡಲಾಗುತ್ತಿದ್ದು. ಈ ಬಾರಿ ಬಿಗ್‌ಬಾಸ್ ಹಿಂದಿ ಶೋ 5 ತಿಂಗಗಳ ಕಾಲ ನಡೆಯಲಿದೆ. ಬಿಗ್‌ಬಾಸ್ ಶೋನಲ್ಲಿ ಇದೊಂದು ಹೊಸ ಮಾದರಿಯ ಪ್ರಯೋಗವಾಗಿದೆ. ಹೀಗಾಗಿ 5 ತಿಂಗಳ ಅವಧಿಯಲ್ಲಿ ಮೂರು ಜನ ನಿರೂಪಕರು ಇರಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದನ್ನು ಯಾವ ರೀತಿ ಡಿವೈಡ್ ಮಾಡಲಾಗುತ್ತದೆ ಎನ್ನುವ ಅಪ್ಡೇಟ್ಸ್ ಬಂದಿಲ್ಲ.
ಮೊದಲ ಮೂರು ತಿಂಗಳ ಅವಧಿಗೆ ಸಲ್ಮಾನ್ ಖಾನ್ ಅವರು ಇರಲಿದ್ದು ಅವರ ಜೊತೆ ಕರಣ್ ಜೋಹರ್ ಹಾಗೂ ಅನಿಲ್ ಕಪೂರ್ ಬಿಗ್‌ಬಾಸ್ ಶೋ ನಡೆಸಿಕೊಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಬರೆಬೇಕಿದೆ.












Click it and Unblock the Notifications