ಮಂಗಳೂರು ಫೇಸ್ಬುಕ್ ಸಮೀಕ್ಷೆ: ಖಾದರ್ ಗೆ ಸೋಲು, ಸಂತೋಷ್ ರೈಗೆ ಜಯ
ಮಂಗಳೂರು, ಮೇ 3: ಮಂಗಳೂರು ವಿಧಾನಸಭಾ ಕ್ಷೇತ್ರದ ಬಗ್ಗೆ ಸಾಮಾಜಿಕ ಜಾಲತಾಣ 'ಫೇಸ್ಬುಕ್'ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ ಹೊರ ಬಂದಿದೆ. ತನ್ನ ಭದ್ರ ಕೋಟೆ ಮಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಸಚಿವ ಯುಟಿ ಖಾದರ್ ಸೋಲಲಿದ್ದಾರೆ ಎಂದು ಫೇಸ್ಬುಕ್ ಬಳಕೆದಾರರು ಹೇಳಿದ್ದಾರೆ.
ಮಂಗಳೂರು ಕ್ಷೇತ್ರದ ಬಗ್ಗೆ ಒನ್ಇಂಡಿಯಾ ತನ್ನ ಫೇಸ್ಬುಕ್ ಪುಟದಲ್ಲಿ ಫೇಸ್ಬುಕ್ ಲೈವ್ ಪೋಲ್ ನಡೆಸಿತ್ತು. ಇದರಲ್ಲಿ ಫಲಿತಾಂಶ ಹೊರಬಿದ್ದಾಗ, ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಸಚಿವ ಯುಟಿ ಖಾದರ್ ಸೋಲಲಿದ್ದಾರೆ ಎಂಬ ಅಚ್ಚರಿಯ ಅಭಿಪ್ರಾಯ ವ್ಯಕ್ತವಾಗಿದೆ.
ಇಲ್ಲಿ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಗೆಲ್ಲಲಿದ್ದಾರೆ ಎಂಬುದು ಫೇಸ್ಬುಕ್ ಬಳಕೆದಾರರ ಅಭಿಮತವಾಗಿದೆ.

ಫೇಸ್ಬುಕ್ ಲೈವ್ ಮತದಾನ:
ಇದರಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಆಯ್ಕೆಗಳನ್ನು ನೀಡಲಾಗಿರುತ್ತದೆ. ಉದಾಹರಣೆಗೆ ಮಂಗಳೂರು ಕ್ಷೇತ್ರದ ಲೈವ್ ಪೋಲ್ ನಲ್ಲಿ ಮೂವರು ಪ್ರಮುಖ ಅಭ್ಯರ್ಥಿಗಳಿಗೂ ಪ್ರತ್ಯೇಕ ಚಿಹ್ನೆ (ಎಮೋಜಿ) ಬಳಸಲಾಗಿದೆ. ವೀಕ್ಷಕರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಸರಿ ಹೊಂದುವ ಎಮೋಜಿಯನ್ನು ಒತ್ತುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಬಹುದು.
ಫಲಿತಾಂಶ: ಸುಮಾರು ಒಂದು ಅಥವಾ ಎರಡು ಗಂಟೆ ಅವಧಿಯ ಚುಟುಕು ಸಮೀಕ್ಷೆ ಇದಾಗಿತ್ತು. ಈ ವೇಳೆಯಲ್ಲಿ 101ಕ್ಕೂ ಅಧಿಕ ಬಾರಿ ಇದು ಶೇರ್ ಆಗಿದ್ದು, 45ಸಾವಿರಕ್ಕೂ ಅಧಿಕ ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, 3.7ಸಾವಿರಕ್ಕೂ ಅಧಿಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಗಮನಿಸಿ ಅಭ್ಯರ್ಥಿಗಳಿಗೆ ನೀಡಿರುವ ಎಮೋಜಿಗಳನ್ನು ಒತ್ತಿದರೆ ಮಾತ್ರ ನಿಮ್ಮ ಮತ ಲೆಕ್ಕಕ್ಕೆ ಸಿಗಲಿದೆ.
ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಅವರಿಗೆ 756 ಮತಗಳು ಲಭಿಸಿದ್ದು ಸಮೀಕ್ಷೆಯಲ್ಲಿ ವಿಜಯಿಯಾಗಿದ್ದಾರೆ. ಕಾಂಗ್ರೆಸ್ಸಿನ ಯುಟಿ ಖಾದರ್ ಅವರಿಗೆ 317 ಮತಗಳು ಸಿಕ್ಕಿವೆ. ಇನ್ನು ಜೆಡಿಎಸ್ ನ ಕೆ. ಅಶ್ರಫ್ ಅವರಿಗೆ 300ಮತಗಳು ಸಿಕ್ಕಿವೆ.












Click it and Unblock the Notifications