ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರುತ್ತಿದೆ, ಇಳಿಯುತ್ತಿದೆ ಬಿಜೆಪಿಯ ಅಭ್ಯರ್ಥಿ ಶ್ರೀರಾಮುಲು ಆಸ್ತಿ

|
Google Oneindia Kannada News

Recommended Video

Karnataka Elections 2018 : ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಆಸ್ತಿ ವಿವರ ಘೋಷಣೆ

ಬೆಂಗಳೂರು, ಏಪ್ರಿಲ್ 24: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂಸದ ಬಿ. ಶ್ರೀರಾಮುಲು ಆಸ್ತಿ ವಿವರ ಸಲ್ಲಿಸಿದ್ದು, ಐದು ವರ್ಷದಲ್ಲಿ ಅವರ ಕುಟುಂಬದ ಆಸ್ತಿ ಶೇ 41.4ರಷ್ಟು ಕರಗಿದೆ. ಆದರೆ, 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇದ್ದ ಆಸ್ತಿಗಿಂತ ಒಟ್ಟಾರೆ ಆಸ್ತಿ ಮೌಲ್ಯದಲ್ಲಿ ಏರಿಕೆಯಾಗಿದೆ.

2008ರ ಚುನಾವಣೆಯಿಂದಲೂ ಶ್ರೀರಾಮುಲು ಅವರ ಆಸ್ತಿ ಮೌಲ್ಯದಲ್ಲಿ ಸಾಕಷ್ಟು ಏರಿಳಿತ ಉಂಟಾಗಿದೆ. 2008ರಲ್ಲಿ ತಮ್ಮ ಬಳಿ ಇರುವ ಆಸ್ತಿ ಮೊತ್ತ 19.22 ಕೋಟಿ ರೂಪಾಯಿ ಎಂದು ಶ್ರೀರಾಮುಲು ಘೋಷಿಸಿದ್ದರು. 2011ರ ಉಪಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವೇಳೆ ಅವರ ಆಸ್ತಿ ಮೌಲ್ಯ 47.74 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. 2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 45 ಕೋಟಿ ಇದ್ದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಅದು ಏಕಾಏಕಿ 15.13 ಕೋಟಿ ರೂಪಾಯಿಗೆ ಕುಸಿದಿತ್ತು. ಈಗ ಅವರ ಆಸ್ತಿ ಮತ್ತೆ ಏರಿಕೆಯಾಗಿದೆ.

ಕುಟುಂಬದ ಆಸ್ತಿ 25.6 ಕೋಟಿ

ಕುಟುಂಬದ ಆಸ್ತಿ 25.6 ಕೋಟಿ

ತಮ್ಮ ಕುಟುಂಬದ ಬಳಿ 25.6 ಕೋಟಿ ಆಸ್ತಿ ಇದೆ ಎಂದು ಶ್ರೀರಾಮುಲು ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಬಳ್ಳಾರಿ ನಗರದಲ್ಲಿ ಮತದಾನದ ಹಕ್ಕು ಹೊಂದಿರುವ ಅವರು, ಟ್ವಿಟರ್ ಅಕೌಂಟ್ ಹೊಂದಿರುವುದಾಗಿ ತಿಳಿಸಿದ್ದಾರೆ.

* ಶ್ರೀರಾಮುಲು ಬಳಿ ಇರುವ ಚರಾಸ್ತಿ ಮೌಲ್ಯ -4.51 ಕೋಟಿ
* ಪತ್ನಿ ಭಾಗ್ಯಲಕ್ಷ್ಮಿ ಅವರ ಬಳಿ ಇರುವ ಚರಾಸ್ತಿ- 22.40 ಲಕ್ಷ
* ಮಕ್ಕಳಾದ ರಕ್ಷಿತಾ ಮತ್ತು ದೀಕ್ಷಿತಾ ಹೆಸರಿನಲ್ಲಿರುವ ಚರಾಸ್ತಿ- 30.51 ಲಕ್ಷ
* ಶ್ರೀರಾಮುಲು ಬಳಿ ಇರುವ ಸ್ಥಿರಾಸ್ತಿ ಮೌಲ್ಯ- 12.40 ಕೋಟಿ
* ಪತ್ನಿ ಭಾಗ್ಯಲಕ್ಷ್ಮಿ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ- 1.04 ಕೋಟಿ

6.23 ಲಕ್ಷ ಸಾಲ

6.23 ಲಕ್ಷ ಸಾಲ

ತಾವು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 6.23 ಲಕ್ಷ ಸಾಲ ಹೊಂದಿರುವುದಾಗಿ ಶ್ರೀರಾಮುಲು ತಿಳಿಸಿದ್ದಾರೆ. 2014ರ ಲೋಕಸಭೆ ಚುನಾವಣೆ ವೇಳೆ ಶ್ರೀರಾಮುಲು ತಮ್ಮ ಮೇಲೆ 40 ಲಕ್ಷ ರೂಪಾಯಿ ಸಾಲವಿದೆ ಎಂದು

ಹೇಳಿದ್ದರು. 2013ರ ವಿಧಾನಸಭೆ ಚುನಾವಣೆ ವೇಳೆ 15 ಕೋಟಿ ಸಾಲದ ಹೊರೆ ಇದೆ ಎಂದು ಮಾಹಿತಿ ನೀಡಿದ್ದರು. ಆ ಸಾಲದ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ.
* ಶ್ರೀರಾಮುಲು ಕೈಯಲ್ಲಿರುವ ನಗದು ಹಣ- 2.20 ಲಕ್ಷ
* ಭಾಗ್ಯಲಕ್ಷ್ಮಿ ಬಳಿ ಇರುವ ನಗದು- 75 ಸಾವಿರ

ಈಶ್ವರಪ್ಪ ಆಸ್ತಿ ಮೌಲ್ಯ ಏರಿಕೆಯಾಗಿದ್ದು ಕೇವಲ 2 ಕೋಟಿ ರೂಪಾಯಿಈಶ್ವರಪ್ಪ ಆಸ್ತಿ ಮೌಲ್ಯ ಏರಿಕೆಯಾಗಿದ್ದು ಕೇವಲ 2 ಕೋಟಿ ರೂಪಾಯಿ

4 ಕೆಜಿ ಚಿನ್ನಾಭರಣ

4 ಕೆಜಿ ಚಿನ್ನಾಭರಣ

ತಮ್ಮ ಬಳಿ ಒಟ್ಟು 4,257 ಗ್ರಾಂನಷ್ಟು ಚಿನ್ನವಿದ್ದು, 9,500 ಗ್ರಾಂ ಬೆಳ್ಳಿ ವಸ್ತುಗಳಿವೆ. ಇವುಗಳ ಮೌಲ್ಯ 38.98 ಲಕ್ಷ. ಹಾಗೆಯೇ ತಮ್ಮ ಪತ್ನಿ ಬಳಿ 2,330 ಗ್ರಾಂ ಚಿನ್ನಾಭರಣವಿದ್ದು, 6.79 ಮೌಲ್ಯ ಹೊಂದಿವೆ ಎಂದು ಶ್ರೀರಾಮುಲು ಘೋಷಿಸಿದ್ದಾರೆ.
1.20 ಕೋಟಿ ಮತ್ತು 1 ಕೋಟಿ ಬೆಲೆಯ ಎರಡು ಕಾರುಗಳಿವೆ. ಪತ್ನಿ ಬಳಿ 14 ಲಕ್ಷ ಬೆಲೆಯ ಕಾರು ಇದೆ ಎಂದು ಹೇಳಿದ್ದಾರೆ.

ಭೂಮಿ, ಕಟ್ಟಡ ವಿವರ

ಭೂಮಿ, ಕಟ್ಟಡ ವಿವರ

ಬಳ್ಳಾರಿಯಲ್ಲಿ 3 ಎಕರೆ ಕೃಷಿಭೂಮಿ ಹೊಂದಿದ್ದು, ಅದರ ಅಂದಾಜು ಮಾರುಕಟ್ಟೆ ಮೌಲ್ಯ 3 ಲಕ್ಷ ರೂಪಾಯಿ. ಬಳ್ಳಾರಿ, ಗದಗದಲ್ಲಿ ಐದು ಕಡೆ ಕೃಷಿಯೇತರ ಭೂಮಿ ಇದೆ. ಪತ್ನಿ ಹೆಸರಿನಲ್ಲಿ 20 ಎಕರೆ ಜಮೀನು ಇದೆ. ಬಳ್ಳಾರಿಯಲ್ಲಿ ವಾಣಿಜ್ಯ ಕಟ್ಟಡವಿದೆ. ಬಳ್ಳಾರಿ ಮತ್ತು ಗದಗದಲ್ಲಿ ಮೂರು ಕಡೆ ನಿವಾಸಗಳಿವೆ. ಇವುಗಳ ಮೇಲೆ ಸುಮಾರು 4 ಕೋಟಿ ಹೂಡಿಕೆ ಮಾಡಿದ್ದಾರೆ.

ದಿನೇಶ್ ಗುಂಡೂರಾವ್ ಬಳಿ ಆಸ್ತಿ ಎಷ್ಟಿದೆ, ಎಷ್ಟು ಶ್ರೀಮಂತರುದಿನೇಶ್ ಗುಂಡೂರಾವ್ ಬಳಿ ಆಸ್ತಿ ಎಷ್ಟಿದೆ, ಎಷ್ಟು ಶ್ರೀಮಂತರು

ವೈಯಕ್ತಿಕ ಮಾಹಿತಿ

ವೈಯಕ್ತಿಕ ಮಾಹಿತಿ

47 ವರ್ಷದ ಶ್ರೀರಾಮುಲು ಅವರು ಅಳಗಪ್ಪ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದಿದ್ದಾರೆ. ಪತ್ನಿ ಭಾಗ್ಯಲಕ್ಷ್ಮಿ ಗೃಹಿಣಿಯಾಗಿದ್ದಾರೆ. ತಮಗೆ ಸಂಸದ ಸ್ಥಾನದಿಂದ, ಡೆನ್ ನೆಟ್‌ವರ್ಕ್‌ ಡಿಸ್ಟ್ರಿಬ್ಯೂಷನ್‌ನಿಂದ ಮತ್ತು ಕೃಷಿಯಿಂದ ಆದಾಯ ದೊರಕುತ್ತಿದೆ.

ತಮ್ಮ ಅವಲಂಬಿತರಾದ ಭಾಗ್ಯಲಕ್ಷ್ಮಿ ಹೆಸರಿನಲ್ಲಿ 40,587 ರೂಪಾಯಿ, ದೀಕ್ಷಿತಾ ಹೆಸರಿನಲ್ಲಿ 3.19 ಲಕ್ಷ ರೂಪಾಯಿ, ರಕ್ಷಿತಾ ಹೆಸರಿನಲ್ಲಿ 5.48 ಲಕ್ಷ ಉಳಿತಾಯ ಖಾತೆ ಹಣವಿದೆ ಎಂದು ತಿಳಿಸಿದ್ದಾರೆ.

ಗಂಭೀರ ಆರೋಪದ ಪ್ರಕರಣ ಒಂದು

ಗಂಭೀರ ಆರೋಪದ ಪ್ರಕರಣ ಒಂದು

ಶ್ರೀರಾಮುಲು ವಿರುದ್ಧ ನ್ಯಾಯಾಲಯದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆ ವಿಧಿಸುವಂತಹ ಪ್ರಕರಣಗಳಲ್ಲಿ ಒಂದು ಪ್ರಕರಣ ಬಾಕಿ ಉಳಿದಿದೆ. ಗಂಭೀರವಲ್ಲದ ಮೂರು ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದೆ.
ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದಂತೆ 35.85 ಲಕ್ಷ ಮೊತ್ತದ ವಿವಾದ ಬೆಂಗಳೂರಿನ ಸಿಐಟಿ ಮುಂದಿದೆ.

English summary
Karnataka Assembly Elections 2018 : Molakalmuru Bjp candidate B. Sriramulu has declared his assets and liabilities. His net assets stand at Rs 25 crores
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X