ಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟ, ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ
ಬೆಂಗಳೂರು, ಏಪ್ರಿಲ್ 22: ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಅಂತಿಮ ಪಟ್ಟಿಯನ್ನು ಭಾನುವಾರದಂದು ಪ್ರಕಟಿಸಿದೆ. ಬಾದಾಮಿಯಿಂದ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿದ್ದಾರೆ ಎಂಬುದು ಮುಖ್ಯವಾಗಿ ಈ ಪಟ್ಟಿಯಲ್ಲಿ ಎದ್ದು ಕಾಣುತ್ತಿದೆ.
ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಹೀಗಾಗಿ, 223 ಕ್ಷೇತ್ರಗಳ ಪೈಕಿ ಕಿತ್ತೂರು, ಶಾಂತಿನಗರ, ನಾಗಠಾಣಾ, ರಾಯಚೂರು ಹಾಗೂ ಸಿಂಧಗಿ ಈ 5 ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲಾಗಿತ್ತು. ಇದರ ಜೊತೆಗೆ ಗೊಂದಲದ ಗೂಡಾಗಿದ್ದ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದೆ.
ಅಂತಿಮ ಪಟ್ಟಿ :
* ಕಿತ್ತೂರು : ಡಾ. ಬಿ ಇನಾಂದರ್
* ಬಾದಾಮಿ : ಸಿದ್ದರಾಮಯ್ಯ (ಡಾ. ದೇವರಾಜ್ ಪಾಟೀಲ್ ಬದಲಿಗೆ), ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
* ನಾಗಠಾಣ(ಎಸ್ ಸಿ) : ವಿಠಲ್ ಧೊಂಡಿಬಾ ಕಟಕದೊಂಡ
* ಸಿಂದಗಿ : ಮಲ್ಲಣ್ಣ ನಾಗಣ್ಣ ಸಾಲಿ
* ರಾಯಚೂರು : ಸೈಯದ್ ಯಾಸಿನ್
* ಜಗಳೂರು (ಎಸ್ ಟಿ): ಎಚ್. ಪಿ ರಾಜೇಶ್ (ಎ.ಎಲ್ ಪುಷ್ಪಾ ಬದಲಿಗೆ)
* ತಿಪಟೂರು : ಕೆ ಷಡಕ್ಷರಿ (ಬಿ ನಂಜಾಮರಿ ಬದಲಿಗೆ)
* ಮಲ್ಲೇಶ್ವರಂ : ಕೆಂಗಲ್ ಶ್ರೀಪಾದ ರೇಣು (ಎಂ. ಆರ್ ಸೀತಾರಾಮ್ ಬದಲಿಗೆ)
* ಶಾಂತಿನಗರ : ಎನ್. ಎ ಹ್ಯಾರೀಸ್.
* ಪದ್ಮನಾಭನಗರ: ಎಂ ಶ್ರೀನಿವಾಸ್ (ಬಿ ಗುರಪ್ಪ ನಾಯ್ಡು ಬದಲಿಗೆ)
* ಮಡಿಕೇರಿ : ಕೆ.ಪಿ ಚಂದ್ರಕಲಾ (ಎಚ್. ಎಸ್ ಚಂದ್ರಮೌಳಿ)












Click it and Unblock the Notifications