ಬ್ಯಾಟರಾಯನಪುರ: ತೆವಳುತ್ತಾ ಗೆದ್ದ ಕೃಷ್ಣಭೈರೇಗೌಡ

ಬೆಂಗಳೂರು, ಮೇ 15: ಕನಿಷ್ಟ 10 ಜನ ಕಾಂಗ್ರೆಸ್‌ ಸಚಿವರು ಈ ಬಾರಿ ಸೋಲುತ್ತಾರೆ ಎಂದು ಇಂಟಿಲಿಜೆನ್ಸ್‌ ರಿಪೋರ್ಟ್ ನೀಡಲಾಗಿದೆ ಎಂದಿದ್ದ ಬೆನ್ನಲ್ಲೆ ಕೃಷ್ಣಭೈರೇಗೌಡ ಅವರೂ ಸೋಲುತ್ತಾರೆ ಎಂದೇ ಲೆಕ್ಕ ಹಾಕಲಾಗಿತ್ತು ಆದರೆ ಹಾಗಾಗಿಲ್ಲ.

ಕಳೆದ ಬಾರಿ 30000 ಭಾರಿ ಅಂತರದಿಂದ ಗೆದ್ದಿದ್ದ ಕೃಷ್ಣಭೈರೇಗೌಡ ಅವರು ಈ ಬಾರಿ ಬಹಳ ಪ್ರಯಾಸ ಪಟ್ಟು ಗೆದ್ದಿದ್ದಾರೆ. ಅವರ ಗೆಲುವಿನ ಅಂತರ ಕೇವಲ 5,751 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಆರಂಭದಲ್ಲಿ ಮುನ್ನಡೆ ಪಡೆದಿದ್ದ ಕೃಷ್ಣಭೈರೇಗೌಡ ಅವರು ಆ ನಂತರ 2000 ಮತಗಳ ಹಿನ್ನಡೆ ಅನುಭವಿಸಿದ್ದರು ಆದರೆ ಕೊನೆಯ ಹಂತದ ಮತ ಎಣಿಕೆ ವೇಳೆ ಮತ್ತೆ ಮುನ್ನಡೆ ಸಾಧಿಸಿ ಗೆಲುವಿನ ನಗೆ ಬೀರಿದರು. ಆದರೆ ಕಳೆದ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದಲ್ಲಿ ಕೃಷ್ಣಭೈರೇಗೌಡ ಅವರಿಗೆ ಈ ಗೆಲುವು ಸಮಾಧಾನ ತಂದಿರಲಿಕ್ಕಿಲ್ಲ.

Karnataka elections: Krishna Byre Gowda won in Byataranayapura

ಕೃಷ್ಣಭೈರೇಗೌಡ ಅವರಿಗೆ ಬಿಜೆಪಿಯ ಎ.ರವಿ ಅವರು ಭಾರಿ ಪೈಪೋಟಿ ನೀಡಿದ್ದಾರೆ. ಕೃಷ್ಣಭೈರೇಗೌಡ ಅವರು 114732 ಮತಗಳನ್ನು ಗಳಿಸಿದರೆ ಬಿಜೆಪಿಯ ಎ.ರವಿ ಅವರು 108981 ಮತಗಳನ್ನು ಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಜೆಡಿಎಸ್ ಪಕ್ಷದ ಟಿಜಿ ಚಂದ್ರ ಅವರು ಕೇವಲ 22432 ಮತಗಳನ್ನಷ್ಟೆ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+