ಹಸಿರು ಜಿಲ್ಲೆ 'ಉತ್ತರ ಕನ್ನಡ'ದಲ್ಲೀಗ ಕೇಸರಿ ಮಯ.!
ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಉತ್ತರ ಕನ್ನಡ. ಎಲ್ಲೆಲ್ಲೂ ಹಸಿರು ಕಾಣುವ ಈ ಜಿಲ್ಲೆ ಇದೀಗ ಕೇಸರಿ ಮಯವಾಗಿದೆ. ಅರ್ಥಾತ್, 2018 ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.
ಮೂಲಭೂತ ಸೌಕರ್ಯ ಸಮಸ್ಯೆ, ಆಸ್ಪತ್ರೆ ಕೊರತೆ, ಅಡಿಕೆ ಬೆಳೆಗಾರರು ಹಾಗೂ ಮೀನುಗಾರರ ಸಂಕಷ್ಟ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲೀಗ ಕಮಲ ಅರಳಿದೆ.

ಉತ್ತರ ಕನ್ನಡ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಎರಡು ಮಾತ್ರ ಕಾಂಗ್ರೆಸ್ ತೆಕ್ಕೆಗೆ ಸೇರಿದೆ. ಉಳಿದ ನಾಲ್ಕು ಕ್ಷೇತ್ರಗಳು ಬಿಜೆಪಿ ಪಾಲಾಗಿದೆ.
ಉತ್ತರ ಕನ್ನಡ ಜಿಲ್ಲೆ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ:
| ಕ್ಷೇತ್ರ | ಗೆದ್ದವರು | ಪಕ್ಷ | ಗಳಿಸಿದ ಮತಗಳು | ಸೋತವರು | ಪಕ್ಷ | ಗಳಿಸಿದ ಮತಗಳು |
| ಹಳಿಯಾಳ | ಆರ್.ವಿ.ದೇಶಪಾಂಡೆ | ಕಾಂಗ್ರೆಸ್ | 61577 | ಸುನೀಲ್ ಹೆಗಡೆ | ಬಿಜೆಪಿ | 56437 |
| ಕಾರವಾರ | ರೂಪಾಲಿ ಸಂತೋಷ್ ನಾಯಕ್ | ಬಿಜೆಪಿ | 60339 | ಆನಂದ್ ವಸಂತ್ ಅಸ್ನೋಟಿಕರ್ | ಜೆಡಿಎಸ್ | 46275 |
| ಕುಮಟಾ | ದಿನಕರ್ ಕೇಶವ್ ಶೆಟ್ಟಿ | ಬಿಜೆಪಿ | 59392 | ಶಾರದಾ ಮೋಹನ್ ಶೆಟ್ಟಿ | ಕಾಂಗ್ರೆಸ್ | 26642 |
| ಭಟ್ಕಳ | ಸುನೀಲ್ ನಾಯಕ್ | ಬಿಜೆಪಿ | 83172 | ಮಂಕಳ ವೈದ್ಯ | ಕಾಂಗ್ರೆಸ್ | 77242 |
| ಶಿರಸಿ | ವಿಶ್ವೇಶರ ಹೆಗ್ಡೆ ಕಾಗೇರಿ | ಬಿಜೆಪಿ | 70595 | ಭೀಮಣ್ಣ ನಾಯಕ್ | ಕಾಂಗ್ರೆಸ್ | 53134 |
| ಯಲ್ಲಾಪುರ | ಅರಬೈಲ್ ಹೆಬ್ಬಾರ್ ಶಿವರಾಮ್ | ಕಾಂಗ್ರೆಸ್ | 66290 | ಶಿವಣ್ಣಗೌಡ ಪಾಟಿಲ್ | ಬಿಜೆಪಿ | 64807 |












Click it and Unblock the Notifications