ಸಿದ್ದರಾಮಯ್ಯ ಸೋಲು ಮಹಿಷಾಸುರ ಮರ್ಧನ: ಎಚ್. ವಿಶ್ವನಾಥ್
ಮೈಸೂರು, ಮೇ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿರುವುದು ಮಹಿಷಾಸುರ ಮರ್ಧನವಾದಂತೆ ಆಗಿದೆ ಎಂದು ಹುಣಸೂರು ಕ್ಷೇತ್ರದ ಶಾಸಕ ಎಚ್. ವಿಶ್ವನಾಥ್ ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಲ್ಲಿನ ದರ್ಪಕ್ಕೆ ಸರಿಯಾದ ಶಾಸ್ತಿ ಆಗಿದೆ. ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ದೇವರಾಜ ಅರಸು ಅವರ ಕರ್ಮ ಭೂಮಿಯಲ್ಲಿ ಗೆದ್ದಿದ್ದೇನೆ. ನನ್ನ ಗೆಲುವಿಗೆ ಕಾರಣರಾದ ಹುಣಸೂರು ಜನತೆಗೆ ಧನ್ಯವಾದಗಳು ಎಂದು ವಿಶ್ವನಾಥ್ ಹೇಳಿದ್ದಾರೆ.

ನಾನು ಗೆಲ್ಲಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಶ್ರಮ ಹೆಚ್ಚಿದೆ.
ನಾನು ಬಿಎಸ್ ಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. ಕಾಂಗ್ರೆಸ್‌ನಲ್ಲಿದ್ದ ನನ್ನನ್ನು ಜೆಡಿಎಸ್‌ಗೆ ಕರೆತಂದವರು ಮಾಜಿ ಶಾಸಕ ದಿ. ಚಿಕ್ಕಮಾದು ಅವರು. ಅವರನ್ನು ಈ ಸಮಯದಲ್ಲಿ ನಾನು ಸ್ಮರಿಸಿಕೊಳ್ಳುತ್ತೇನೆ. ಹುಣಸೂರಿನಲ್ಲಿ ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಹುಣಸೂರು ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಎಚ್. ವಿಶ್ವನಾಥ್ ಅವರು ಕಾಂಗ್ರೆಸ್‌ನ ಎಚ್.ಪಿ. ಮಂಜುನಾಥ್ ಅವರ ವಿರುದ್ಧ 8,575 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.












Click it and Unblock the Notifications