ಬೊಮ್ಮನಹಳ್ಳಿಯಲ್ಲಿ ಮೂರನೇ ಬಾರಿ 'ಕಮಲ' ಅರಳಿಸಿದ ಸತೀಶ್ ರೆಡ್ಡಿ

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಿರುವ ಬಿಜೆಪಿ ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರವನ್ನ ತನ್ನ ಖಾತೆಗೆ ಸೇರಿಸಿಕೊಂಡಿದೆ.

ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ ಸತೀಶ್ ರೆಡ್ಡಿ ಭರ್ಜರಿ ಗೆಲುವು ಕಂಡಿದ್ದಾರೆ. ಹೀಗಾಗಿ, ಮೂರನೇ ಬಾರಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಸುಮಾರು 48 ಸಾವಿರ ಮತಗಳ ಅಂತರದಿಂದ ಸತೀಶ್ ರೆಡ್ಡಿ ಜಯಗೊಳಿಸಿದ್ದು, ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಅಂತರಗಳಿಂದ ಗೆಲುವು ಸಾಧಿಸಿರುವ ದಾಖಲೆ ಬರೆದಿದ್ದಾರೆ.

ಸತೀಶ್ ರೆಡ್ಡಿ ಪಡೆದ ಮತ: 111863
ಸುಷ್ಮಾ ರಾಜ್ ಗೋಪಾಲ್ ರೆಡ್ಡಿ ಪಡೆದ ಮತ : 64701

ಸತೀಶ್ ರೆಡ್ಡಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಸುಷ್ಮಾರಾಜ್ ಗೋಪಾಲ್ ರೆಡ್ಡಿ ಅವರು ಎದುರಾಳಿಯಾಗಿದ್ದು, ಮೊದಲ ಸುತ್ತಿನಿಂದಲೂ ಹಿನ್ನಡೆಯಲ್ಲಿದ್ದರು. ಒಂದೇ ಒಂದು ಸುತ್ತಿನಲ್ಲೂ ಮುನ್ನಡೆ ಸಾಧಿಸದ ಸುಷ್ಮಾ ರಾಜ್ ಗೋಪಾಲ್ ರೆಡ್ಡಿ ಅವರು ಹೀನಾಯ ಸೋಲು ಕಂಡಿದ್ದಾರೆ.

Karnataka Election Results 2018: BJP sathish reddy wins in Bommanahalli

ಸತತ 10 ವರ್ಷಗಳಿಂದ ಯಶಸ್ವಿ ಆಳ್ವಿಕೆ ನಡೆಸಿರುವ ಸತೀಶ್ ರೆಡ್ಡಿ ಮುಂದಿನ 5 ವರ್ಷವೂ ಎಂ.ಎಲ್.ಎ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಬಿಜೆಪಿಯ ಭದ್ರಕೋಟೆಗಳಲ್ಲಿ ಬೊಮ್ಮನಹಳ್ಳಿಯೂ ಒಂದಾಗಿದ್ದು, ತನ್ನ ಕ್ಷೇತ್ರವನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+