ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಜಯನಗರದಲ್ಲಿ ಮತ್ತೆ ಅರಳಿದ ಕಮಲ

ಬೆಂಗಳೂರು, ಏಪ್ರಿಲ್ 24: ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಓದುಗರ ಅಭಿಪ್ರಾಯ ಸಂಗ್ರಹ ಮಾಡುವುದು ಸರ್ವೇಸಾಮಾನ್ಯ. ಈ ಸಂದರ್ಭದಲ್ಲಿ ಒನ್ಇಂಡಿಯಾ ತನ್ನ ಫೇಸ್ ಬುಕ್ ಪುಟದಲ್ಲಿ ಪ್ರತಿದಿನ ಫೇಸ್ಬುಕ್ ಲೈವ್ ಪೋಲ್ ನಡೆಸುತ್ತಿದೆ. ಜಯನಗರ ವಿಧಾನಸಭಾ ಕ್ಷೇತ್ರಕ್ಕಾಗಿ ನಡೆಸಿದ ಸಮೀಕ್ಷೆ ಫಲಿತಾಂಶ ಇಲ್ಲಿದೆ.

ಸುಭಿಕ್ಷವಾದ ನೆಮ್ಮದಿಯ ವಿಧಾನಸಭಾ ಕ್ಷೇತ್ರ ಎನಿಸಿಕೊಂಡಿರುವ ಜಯನಗರದಲ್ಲಿ ಸದ್ಯ ವಿಜಯ್ ಕುಮಾರ್ ಅವರು ಹಾಲಿ ಶಾಸಕ.

ಜಾತಿ ಸಮೀಕರಣವನ್ನು ಗಮನಿಸಿದರೆ, ಬ್ರಾಹ್ಮಣರು, ಮುಸ್ಲಿಮರು, ವೈಶ್ಯರು, ಜೈನರು ಹಾಗೂ ಹಿಂದುಳಿದ ವರ್ಗದ ಮತಗಳು ಭಾರೀ ಪ್ರಾಮುಖ್ಯ ಪಡೆಯುತ್ತವೆ. 'ಸಂಪನ್ಮೂಲ'ದ ದೃಷ್ಟಿಯಿಂದ ನೋಡಿದರೆ ಸೌಮ್ಯಾ ರೆಡ್ಡಿ ಅವರು ವಿಜಯಕುಮಾರ್ ಅವರಿಗಿಂತ ಮುಂದಿರುವಂತೆ ಕಾಣುತ್ತಾರೆ. ಆದರೆ ಸಂಘಟನೆ ಹಾಗೂ ಇತಿಹಾಸದ ಫಲಿತಾಂಶವು ವಿಜಯಕುಮಾರ್ ಪರವಾಗಿ ತಕ್ಕಡಿ ತೂಗುತ್ತವೆ.

Karnataka assembly Elections 2018 : VijayKumar to win in Jayanagar- Oneindia Fb Poll

ಫೇಸ್ಬುಲ್ ಲೈವ್ ಮತದಾನ:
ಇದರಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಆಯ್ಕೆಗಳನ್ನು ನೀಡಲಾಗಿರುತ್ತದೆ. ಉದಾಹರಣೆಗೆ ಚನ್ನಪಟ್ಟಣದ ಲೈವ್ ಪೋಲ್ ನಲ್ಲಿ ಮೂವರು ಪ್ರಮುಖ ಅಭ್ಯರ್ಥಿಗಳಿಗೂ ಪ್ರತ್ಯೇಕ ಚಿಹ್ನೆ(ಎಮೋಜಿ) ಬಳಸಲಾಗಿದೆ. ವೀಕ್ಷಕರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಸರಿ ಹೊಂದುವ ಎಮೋಜಿಯನ್ನು ಒತ್ತುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಬಹುದು.

ಸುಮಾರು ಒಂದು ಅಥವಾ ಎರಡು ಗಂಟೆ ಅವಧಿಯ ಚುಟುಕು ಸಮೀಕ್ಷೆ ಇದಾಗಿತ್ತು. ಈ ವೇಳೆಯಲ್ಲಿ ಐವತ್ತಕ್ಕೂ ಅಧಿಕ ಬಾರಿ ಶೇರ್ ಆಗಿದ್ದು,2 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದಾರೆ. ಗಮನಿಸಿ ಅಭ್ಯರ್ಥಿಗಳಿಗೆ ನೀಡಿರುವ ಎಮೋಜಿಗಳನ್ನು ಒತ್ತಿದರೆ ಮಾತ್ರ ನಿಮ್ಮ ಮತ ಲೆಕ್ಕಕ್ಕೆ ಸಿಗಲಿದೆ.

ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರಿಗೆ 578 ಮತಗಳು ಲಭಿಸಿದ್ದರೆ, ಕಾಂಗ್ರೆಸ್ಸಿನ ಸೌಮ್ಯ ರೆಡ್ಡಿ ಅವರಿಗೆ 236ಮತಗಳು ಸಿಕ್ಕಿವೆ. ಇನ್ನು ಜೆಡಿಎಸ್ ನ ತನ್ವೀರ್ ಅಹ್ಮದ್ ಅವರಿಗೆ 194 ಮತಗಳು ಹಾಗೂ ರವಿಕೃಷ್ಣಾ ರೆಡ್ಡಿ ಅವರಿಗೆ 59 ಮತಗಳು ಲಭಿಸಿದೆ. ಆದರೆ, ಈ ಸಮೀಕ್ಷೆ ನಡೆಯುವ ವೇಳೆಗೆ ಜೆಡಿಎಸ್ ನ ಅಭ್ಯರ್ಥಿ ಬದಲಾಗಿದ್ದು, ಈ ಬಾರಿ ರವಿಕುಮಾರ್ ಎಂಬುವವರು ಜೆಡಿಎಸ್ ನ ಅಧಿಕೃತ ಅಭ್ಯರ್ಥಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+