ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಣಾಳಿಕೆ: ಬೆಂಗಳೂರು ನಗರ ಪ್ರದೇಶಕ್ಕೆ ಕಾಂಗ್ರೆಸ್ ಆಶ್ವಾಸನೆಗಳ ಮಹಾಪೂರ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಹಾಲ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಒಂದು ಇಡೀ ರಾಜ್ಯಕ್ಕಾಗಿ ಸಮಗ್ರ ಪ್ರಣಾಳಿಕೆ, ಮತ್ತೊಂದು ಪ್ರದೇಶವಾರು ಪ್ರಣಾಳಿಕೆಯನ್ನು ಜನತೆ ಮುಂದಿಡಲಾಗಿದೆ. ಬೆಂಗಳೂರು ನಗರ ಪ್ರದೇಶಕ್ಕೆ ಯಾವೆಲ್ಲ ಆಶ್ವಾಸನೆಗಳನ್ನು ನೀಡಲಾಗಿದೆ. ಇಲ್ಲಿ ಓದಿ...

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮೇ 12 ರಂದು ನಡೆಯಲಿದ್ದು, ಮೇ 15 ರಂದು ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಹೊರಬರಲಿರುವ ಕಾಂಗ್ರೆಸ್ ಪ್ರಣಾಳಿಕೆ ಜನ ಸ್ನೇಹಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಒಂದು ಸಮಗ್ರ ಪ್ರಣಾಳಿಕೆಯಿಂದ ರಾಜ್ಯದ ಒಟ್ಟಾರೆ ಸಮಸ್ಯೆಗಳು ಮತ್ತು ಅದರ ಅಭಿವೃದ್ಧಿಗೆ ಪಕ್ಷ ಬದ್ಧವಾಗಿದೆ ಎಂಬುದನ್ನು ಅರ್ಥಮಾಡಿಸುವುದು ಕಷ್ಟ. ಕರ್ನಾಟಕದ ಮೂವತ್ತು ಜಿಲ್ಲೆಗಳೂ ಬೇರೆ ಬೇರೆಯದೇ ರೀತಿಯ ಸಮಸ್ಯೆ ಎದುರಿಸುತ್ತಿವೆ. ಅವುಗಳ ಅಭಿವೃದ್ಧಿಯ ಮಾನದಂಡಗಳೂ ಬೇರೆ ಬೇರೆ. ಆದ್ದರಿಂದ ಆಯಾ ಜಿಲ್ಲೆಗಳಿಗೆ ಹೊಂದುವ, ಆಯಾ ಜಿಲ್ಲೆಗೆ ಅಗತ್ಯವಾದ ಪ್ರಣಾಳಿಕೆಗಳನ್ನು ರಚಿಸುವುದು ತಮ್ಮ ಉದ್ದೇಶ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ..

"ಬಸವಣ್ಣವರ 'ನುಡಿದಂತೆ ನಡೆ' ಮಾತಿನಂತೆ ನಾವು ಕಳೆದ ಬಾರಿ ನೀಡಿದ ಭರವಸೆಗಳಲ್ಲಿ ಶೇಕಡಾ 90ನ್ನು ಪೂರ್ಣಗೊಳಸಿದ್ದೇವೆ. ನೀಡುವ ಭರವಸೆಗಳಿಗೆ ತೂಕ ಇರಬೇಕು ಎಂದು ನಂಬಿದವರು ನಾವು. ಅದರಂತೆ ಐದು ವರ್ಷದ ಹಿಂದೆ ನಾವು ನೀಡಿದ್ದ ಭರವಸೆಗಳನ್ನು ಇಂದು ಈಡೇರಿಸಿದ್ದೇವೆ," ಎಂದು ರಾಹುಲ್ ಗಾಂಧಿ ಹೆಮ್ಮೆಯಿಂದ ಹೇಳಿದರು.

Karnataka Assembly Elections 2018 : Congress manifesto for Bengaluru Urban

* ಸರ್ಕಾರಿ ಕಚೇರಿಗಳ ಮೇಲೆ ರೂಫ್ ಟಾಪ್ ಸೌರಶಕ್ತಿ ಫಲಕ ಹಾಕಿ, ವಿದ್ಯುತ್ ಉತ್ಪಾದನೆ.
* ತ್ಯಾಜ್ಯ ಸಮಸ್ಯೆಗೆ ಪರಿಹಾರ ರೂಪವಾಗಿ, ತ್ಯಾಜ್ಯ ಸಂಸ್ಕರಣಾ ಘಟಕದ ಮೂಲಕ ವಿದ್ಯುತ್ ಉತ್ಪಾದನೆ.

English summary
Karntaka Assembly Elections 2018 : Congress manifesto for Bengaluru Urban district is here. Installation of solar panels on the rooftops of all government buildings and Construct a garbage processing unit for the city, where electricity can be generated from the waste
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X