ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಯಲ್ಲಿ ಗೆದ್ದ ಶಾಸಕರ ಜಾತಿ ಲೆಕ್ಕಾಚಾರ

|
Google Oneindia Kannada News

ಬೆಂಗಳೂರು, ಮೇ 11: ಕ್ಷೇತ್ರದಲ್ಲಿ ಯಾವ ಸಮುದಾಯ ಪ್ರಾಬಲ್ಯವನ್ನು ಹೊಂದಿದೆ ಎನ್ನುವ ಲೆಕ್ಕಾಚಾರದ ಮೇಲೆಯೇ ಎಲ್ಲಾ ಪಕ್ಷಗಳು ಟಿಕೆಟ್ ನೀಡುವುದು. ಇದಕ್ಕೆ ಅಪವಾದ ಎನ್ನುವಂತೆ ಎಲ್ಲೋ ಕೆಲವೊಮ್ಮೆ ಬೇರೆ ಸಮುದಾಯದವರಿಗೆ ಟಿಕೆಟ್ ನೀಡಿದ ಉದಾಹರಣೆ ಇಲ್ಲದಿಲ್ಲ.

ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಸಮುದಾಯದ ಅಭ್ಯರ್ಥಿ ಗೆದ್ದ ಉದಾಹರಣೆ ಈ ಬಾರಿಯ ಚುನಾವಣೆಯಲ್ಲೂ ಇದೆ. ಅದಕ್ಕೆ ಕೊಡಬಹುದಾದ ಎರಡು ಉದಾಹರಣೆ ಎಂದರೆ ಮೂಡಬಿದರೆ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಿರುವ ಜೈನ ಸಮುದಾಯದ ಅಭಯಚಂದ್ರ ಜೈನ್.

ಇನ್ನೊಂದು ಉದಾಹರಣೆಯೆಂದರೆ ಕಡೂರು ಕ್ಷೇತ್ರದಿಂದ ಗೆದ್ದ ವೈ ಎಸ್ ವಿ ದತ್ತಾ. ಲೆಕ್ಕ ಮಾಡಬಹುದಷ್ಟು ಮಾತ್ರ ಬ್ರಾಹ್ಮಣ ಸಮುದಾಯ ಈ ಕ್ಷೇತ್ರದಲ್ಲಿದ್ದರೂ ದತ್ತಾ ಗೆಲುವು ಸಾಧಿಸಿದ್ದಾರೆ. ಆದರೂ ಜಾತಿ ರಾಜಕೀಯ ಲೆಕ್ಕಾಚಾರವನ್ನು ಮಾತ್ರ ಯಾವುದೇ ರಾಜಕೀಯ ಪಕ್ಷಗಳು ಕೈಬಿಡುತ್ತಿಲ್ಲ.

ಟಿಕೆಟ್ ಕೊಡುವಾಗಲೂ ಜಾತಿ ಲೆಕ್ಕಾಚಾರ, ಗೆದ್ದ ಮೇಲೂ ಜಾತಿ ಲೆಕ್ಕಾಚಾರ. 223 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಲ್ಲಿ ಯಾವ ಜಾತಿ ಮುಂಚೂಣಿಯಲ್ಲಿದೆ ಮುಂದೆ ಸ್ಲೈಡಿನಲ್ಲಿ ನೋಡಿ..

ಒಕ್ಕಲಿಗ ಸಮುದಾಯ

ಒಕ್ಕಲಿಗ ಸಮುದಾಯ

ನಾನಾ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳೂ ಸೇರಿದಂತೆ 53 ಮಂದಿ ಗೆಲುವು ಸಾಧಿಸಿದ್ದಾರೆ. ಪಕ್ಷಾವಾರು ಬ್ರೇಕ್ ಅಪ್ ಕೊಡಬಹುದಾದರೆ JDS - 20, Cong - 18, BJP - 11 ಪಕ್ಷೇತರರೂ ಸೇರಿದಂತೆ ಇತರರು ಒಟ್ಟು ನಾಲ್ಕು ಮಂದಿ.

ಲಿಂಗಾಯಿತ ಸಮುದಾಯ

ಲಿಂಗಾಯಿತ ಸಮುದಾಯ

ಎರಡನೇ ಸ್ಥಾನದಲ್ಲಿ ಲಿಂಗಾಯಿತ ಸಮುದಾಯವಿದೆ. ಒಟ್ಟು 50 ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ Cong - 29, BJP - 10, JDS - 4, KJP - 6 ಮತ್ತು ಇತರರು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ (ಎಸ್ ಸಿ)

ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ (ಎಸ್ ಸಿ)

ಹಿಂದುಳಿದ ವರ್ಗ - ಈ ಸಮುದಾಯದಿಂದ 36 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ Cong - 27, ಇತರರು - 4, BJP - 3, JDS - 2.

ಎಸ್ ಸಿ - Cong - 17, JDS - 10, BJP - 06 ಮತ್ತು ಇತರರು ಎರಡು = ಒಟ್ಟು 35.

ಪರಿಶಿಷ್ಟ ಪಂಗಡ (ಎಸ್ ಟಿ) ಮತ್ತು ಬ್ರಾಹ್ಮಣ

ಪರಿಶಿಷ್ಟ ಪಂಗಡ (ಎಸ್ ಟಿ) ಮತ್ತು ಬ್ರಾಹ್ಮಣ

ಎಸ್ ಟಿ - ಈ ಸಮುದಾಯದ 19 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅದರಲ್ಲಿ Cong - 11, ಇತರರು 4, BJP -3, JDS - 1.

ಬ್ರಾಹ್ಮಣ - ಬ್ರಾಹ್ಮಣ ಸಮುದಾಯದಿಂದ ಒಟ್ಟು 11 ಮಂದಿ ಆಯ್ಕೆಯಾಗಿದ್ದಾರೆ. ಇದರಲ್ಲಿ Cong - 5, BJP - 4, JDS ಮತ್ತು ಇತರರು ತಲಾ ಒಂದೊಂದು ಸ್ಥಾನದಲ್ಲಿ ಗೆದ್ದಿದ್ದಾರೆ.

ಮುಸ್ಲಿಂ ಮತ್ತು ಕ್ರೈಸ್ತ

ಮುಸ್ಲಿಂ ಮತ್ತು ಕ್ರೈಸ್ತ

ಮುಸ್ಲಿಂ ಸಮುದಾಯದ 11 ಮಂದಿ ಚುನಾವಣೆಯಲ್ಲಿ ಗೆದ್ದರೆ ಕ್ರೈಸ್ತ ಸಮುದಾಯದ ಇಬ್ಬರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಕ್ರೈಸ್ತ ಸಮುದಾಯದಿಂದ ಗೆದ್ದ ಇಬ್ಬರೂ ಕಾಂಗ್ರೆಸ್ ಟಿಕೆಟಿನಿಂದ ಗೆದ್ದಿದ್ದರೆ, ಒಂಬತ್ತು ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟಿನಿಂದ ಮತ್ತು ಇಬ್ಬರು ಜೆಡಿಎಸ್ ಟಿಕೆಟಿನಿಂದ ಗೆದ್ದಿದ್ದಾರೆ.

ವೈಶ್ಯ, ಜೈನ ಮತ್ತು ಕೊಡವ

ವೈಶ್ಯ, ಜೈನ ಮತ್ತು ಕೊಡವ

ವೈಶ್ಯ ಜನಾಂಗದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟಿನಿಂದ ತಲಾ ಒಬ್ಬರು.
ಜೈನ ಸಮುದಾಯದಿಂದ ಕಾಂಗ್ರೆಸ್ಸಿನಿಂದ ಇಬ್ಬರು ಮತ್ತು ಬಿಜೆಪಿಯಿಂದ ಒಬ್ಬರು ಜಯಗಳಿಸಿದ್ದಾರೆ.
ಕೊಡವ ಸಮುದಾಯದಿಂದ ಬಿಜೆಪಿ ಟಿಕೆಟಿನಿಂದ ಒಬ್ಬರು ಗೆದ್ದಿದ್ದಾರೆ.

English summary
All party winners caste wise break-up in Karnataka Assembly Election 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X