ಇದ್ದಕ್ಕಿದ್ದಂತೆ ಏನಿದು ಎಚ್ಡಿಕೆಯ ’ಏಕಾಂಗಿ’ ಹೇಳಿಕೆ!
ಚನ್ನಗಿರಿ, ಏ 28: ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಚುನಾವಣಾ ಪ್ರಚಾರ ಭಾಷಣ ಕೇಳಿ ನೆರೆದಿದ್ದ ಸಭಿಕರು ಭಾವಪರವಶರಾಗಿದ್ದಾರೆ.
ಚುನಾವಣಾ ಪೂರ್ವ ಸಮೀಕ್ಷೆ ನಂಬಿಕೆಗೆ ಅರ್ಹವಾದುದಲ್ಲ. ಖಾಸಾಗಿ ವಾಹಿನಿಗಳು ದುಡ್ಡು ಪಡೆದುಕೊಂಡು ಪಕ್ಷಗಳಿಗೆ ಬೇಕಾದ ಹಾಗೆ ಸಮೀಕ್ಷೆ ನಡೆಸುತ್ತಿವೆ. ನನ್ನ ನಂಬಿಕೆ ನಿಮ್ಮ ಮೇಲೆ, ನಿಮ್ಮ ಆಶೀರ್ವಾದದ ಮೇಲೆ ಎಂದಿದ್ದಾರೆ ಕುಮಾರಸ್ವಾಮಿ.
ಹಾಗೇ ಭಾಷಣ ಮುಂದುವರಿಸುತ್ತಾ ಕುಮಾರಸ್ವಾಮಿ, ಈ ಬಾರಿ ನಾನು ಏಕಾಂಗಿ. ನನ್ನ ಹಿಂದೆ ಯಾರೂ ಸ್ಟಾರ್ ಪ್ರಚಾರಕರಿಲ್ಲ. ಏಕಾಂಗಿಯಾಗಿ ಈ ಬಾರಿಯ ಚುನಾವಣೆಗೆ ಹೋರಾಡುತ್ತಿದ್ದೇನೆ.
ಈ ಏಕಾಂಗಿಯ ಹೋರಾಟಕ್ಕೆ ಜನ ಬೆಂಬಲ ಬೇಕಿದೆ, ನಿಮ್ಮ ಪ್ರೀತಿ ಮತ್ತು ಸಹಕಾರ ಈ ಏಕಾಂಗಿ ಕುಮಾರಸ್ವಾಮಿಯ ಮೇಲಿದ್ದರೆ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದು ಕನಸಿನ ಮಾತಲ್ಲ ಎಂದು ಕುಮಾರಸ್ವಾಮಿ ತುಂಬಿದ ಸಭೆಯಲ್ಲಿ ಹೇಳಿದ್ದಾರೆ.
'ನೀವು ಏಕಾಂಗಿಯಲ್ಲಿ ಕುಮಾರಣ್ಣ, ನಿಮ್ಮ ಜೊತೆ ನಾವಿದ್ದೇವೆ' ಎಂದು ಸಭಿಕರ ಕಡೆಯಿಂದ ಘೋಷಣೆ ಬರುತ್ತಿದ್ದಂತೆ ಮತ್ತೆ ಮಾತು ಮುಂದುವರಿಸಿದ ಕುಮಾರಸ್ವಾಮಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತೇವೆ. ರೈತರ ಸಾಲವನ್ನು ಮನ್ನಾ ಮಾಡುತ್ತೇವೆ, ಈ ಬಾರಿ ನನ್ನನ್ನು ಹರಸಿ ಎಂದು ತುಂಬಿದ ಸಭೆಗೆ ಭರವಸೆ ನೀಡಿ ಭಾಷಣಕ್ಕೆ ಮಂಗಳ ಹಾಡಿದ್ದಾರೆ.
ಮುಂದುವರಿದ ಜೆಡಿಎಸ್ - ಕಾಂಗ್ರೆಸ್ ವಾಕ್ಸಮರ - ಸ್ಲೈಡಿನಲ್ಲಿ

ಜೆಡಿಎಸ್ - ಕಾಂಗ್ರೆಸ್ ವಾಕ್ಸಮರ
ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳು ಕಂಡವನು ನಾನು. ಶಿವಕುಮಾರ್ ಅವರಿಂದ ರಾಜಕೀಯ ಪಾಠ ಕಲಿಯುವ ಅವಶ್ಯಕತೆ ನನಗಿಲ್ಲ. ವಾಮಾಚಾರ ಮಾಡಲು ನಾನೇನೂ ನೀಚನಲ್ಲ - ಕನಕಪುರದ ಜೆಡಿಎಸ್ ಅಭ್ಯರ್ಥಿ ಪಿ ಜಿ ಆರ್ ಸಿಂಧ್ಯಾ ಹೇಳಿಕೆ.

ಜೆಡಿಎಸ್ - ಕಾಂಗ್ರೆಸ್ ವಾಕ್ಸಮರ
ಬಿಎಸ್ಪಿಯಿಂದ ಮೂವತ್ತು ಕೋಟಿ ಹೊಡೆದು ಮಾಯಾವತಿಯಿಂದ ಪಕ್ಷದಿಂದ ಹೊರಹಾಕಿಸಿಕೊಂಡ ರಾಜಕೀಯ ಹಿನ್ನಲೆ ಇರುವವರು ಸಿಂಧ್ಯ. ಚುನಾವಣೆಯಲ್ಲಿ ನನ್ನನ್ನು ಸೋಲಿಸುವುದಿರಲಿ ನನಗೆ ಪೈಪೋಟಿ ನೀಡಲೂ ಜೆಡಿಎಸ್ ಪಕ್ಷದಿಂದ ಸಾಧ್ಯವಿಲ್ಲ. - ಕನಕಪುರದ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಶಿವಕುಮಾರ್ ಹೇಳಿಕೆ.

ಜೆಡಿಎಸ್ - ಕಾಂಗ್ರೆಸ್ ವಾಕ್ಸಮರ
ಮೈಸೂರು ಕರ್ನಾಟಕ ಬಿಟ್ಟರೆ ಜೆಡಿಎಸ್ ನಮಗೆ ಸರಿಸಾಟಿಯಲ್ಲ. ಅಪ್ಪ ಮಕ್ಕಳ ಪಕ್ಷ ನಂಬಿಕೆದ್ರೋಹಿಗಳ ಪಕ್ಷ. ರಾಜ್ಯದ ಜನತೆಗೆ ಇವರ ನಾಟಕ ತಿಳಿದಿದೆ - ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್ ಹೇಳಿಕೆ.

ಜೆಡಿಎಸ್ - ಕಾಂಗ್ರೆಸ್ ವಾಕ್ಸಮರ
ದೇವೇಗೌಡ ಕುಟುಂಬ ನಂಬಿಕೆ ದ್ರೋಹಿಗಳು ಅನ್ನುವುದಕ್ಕೆ ನಾನೇ ಸಾಕ್ಷಿ. ಕುಮಾರಸ್ವಾಮಿ ಅದು ಯಾವ ಲೆಕ್ಕಾಚಾರದ ಮೇಲೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೋ ನನಗಂತೂ ತಿಳಿಯದು - ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ.

ಜೆಡಿಎಸ್ - ಕಾಂಗ್ರೆಸ್ ವಾಕ್ಸಮರ
ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಲು ಜೆಡಿಎಸ್ ನೀಡಿದ ಸಹಕಾರ ಕಾರಣ ಎನ್ನುವದನ್ನು ಕೃಷ್ಣ ಸಾಹೇಬ್ರು ಮರೆತಿದ್ದಾರೆ. ರಾಜಕೀಯವಾಗಿ ನನ್ನನ್ನು ಮುಗಿಸಲು ವಿಫಲ ಯತ್ನ ನಡೆಸಿದರು - ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ.

ಜೆಡಿಎಸ್ - ಕಾಂಗ್ರೆಸ್ ವಾಕ್ಸಮರ
ಐದು ವರ್ಷಗಳಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ 175 ಕೋಟಿ ಸಂಪಾದಿಸುತ್ತಾರೆ. ಮಾಮೂಲಿ ರೈತನ ಮಗನೊಬ್ಬ ವ್ಯವಸಾಯದಿಂದ ಯಾವ ರೀತಿ ಸಂಪತ್ತು ಗಳಿಸ ಬಹುದು - ಕನಕಪುರದಲ್ಲಿ ಮಾಜಿ ಪ್ರಧಾನಿ ದೇವೇಗೌಡ.

ಜೆಡಿಎಸ್ - ಕಾಂಗ್ರೆಸ್ ವಾಕ್ಸಮರ
ಸಿದ್ದರಾಮಯ್ಯ ಅವರನ್ನು ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆಸಿದವರು ದೇವೇಗೌಡರು. ಇದನ್ನು ಮರೆತು ಅಪ್ಪ ಮಕ್ಕಳ ಪಕ್ಷವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಸಿಎಂ ಆಗುವ ಮುಂಚೆ ಮೊದಲು ವರುಣಾ ಕ್ಷೇತ್ರದಲ್ಲಿ ಗೆದ್ದು ಬರಲಿ - ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ.












Click it and Unblock the Notifications