ರಾಜ್ಯದಲ್ಲಿ ಮೋದಿ ಒಂದೇ ಸಭೆ: ಕಾರಣ ಬಿಎಸ್ವೈ!

ಅಹಮದಾಬಾದ್, ಏ 28: ಬಿಜೆಪಿಯ ಸ್ಟಾರ್ ಮೋಸ್ಟ್ ಕ್ಯಾಂಪೇನರ್ ಗುಜರಾಜ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಇತ್ತ ಕರ್ನಾಟಕ ಬಿಜೆಪಿ ಘಟಕ ಸರ್ವ ಸನ್ನದ್ದವಾಗಿ ಸಜ್ಜಾಗುತ್ತಿದ್ದರೆ ಅತ್ತ ಗುಜರಾತ್ ಕಾಂಗ್ರೆಸ್ ವಕ್ತಾರ ಬೇರೇನೆ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ಚುನಾವಣೆಯ ಈ ಸಂದರ್ಭದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಗುರುತರ ಜವಾಬ್ದಾರಿ ಗುಜರಾತ್ ಮುಖ್ಯಮಂತ್ರಿ ಮೋದಿಯವರ ಮೇಲೂ ಇದೆ.

ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸ ಬೇಕೆನ್ನುವು ಬೇಡಿಕೆ ಎಲ್ಲರಿಗಿಂತ ಹೆಚ್ಚಾಗಿ ಅವರ ಮೇಲಿದೆ. ಕರ್ನಾಟಕ ರಾಜ್ಯ ಬಿಜೆಪಿ ಘಟಕದಿಂದ ಕನಿಷ್ಠ ನಾಲ್ಕು ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳ ಬೇಕೆನ್ನುವ ಒತ್ತಡವೂ ಇದೆ.

ಆದರೆ ಈ ಜವಾಬ್ದಾರಿಯನ್ನು ಹೊರಲು ಮೋದಿ ಸಿದ್ದರಿಲ್ಲ. ಬಿಜೆಪಿ ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲದೇ ಇರುವುದು ಒಂದು ಕಾರಣ, ಆದರೆ ಪ್ರಮುಖ ಕಾರಣವೇ ಬೇರೆ ಎಂದು ಗುಜರಾತ್ ರಾಜ್ಯದ ಕಾಂಗ್ರೆಸ್ ವಕ್ತಾರ ಜಯರಾಜ್ ಸಿನ್ಹ ಪಾರ್ಮರ್ ಹೇಳಿದ್ದಾರೆ.

ಮೋದಿ Vs ಗುಜರಾತ್ ಕಾಂಗ್ರೆಸ್

ಮೋದಿ Vs ಗುಜರಾತ್ ಕಾಂಗ್ರೆಸ್

ಮೋದಿಗೆ ಕರ್ನಾಟಕದ ಹಿಂದಿನ ಕಳಂಕಿತ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಉತ್ತಮ ಸಂಬಂಧವಿದೆ. ಈ ಹಿಂದೆ ಯಡಿಯೂರಪ್ಪ ಬಿಜೆಪಿ ತೊರೆಯುವ ಮುನ್ನ ಮುಂಬೈನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ಹೇಳಿದ ಹೇಳಿಕೆ ಸ್ಮರಿಸಿಕೊಳ್ಳೋಣ.

ಮೋದಿ Vs ಗುಜರಾತ್ ಕಾಂಗ್ರೆಸ್

ಮೋದಿ Vs ಗುಜರಾತ್ ಕಾಂಗ್ರೆಸ್

ಅಂದು ಸಾರ್ವಜನಿಕವಾಗಿ ನರೇಂದ್ರ ಮೋದಿ ಮುಂದಿನ ಪ್ರಧಾನಿಯಾಗಲು ಸೂಕ್ತ ಆಯ್ಕೆಯೆಂದು ಅಡ್ವಾಣಿ ಸಮ್ಮುಖದಲ್ಲೇ ಯಡಿಯೂರಪ್ಪ ಹೇಳಿಕೆ ನೀದಿದ್ದರು. ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದ ಮೇಲೂ ಮೋದಿ ಮತ್ತು ಯಡಿಯೂರಪ್ಪ ನಡುವಣ ಸಂಬಂಧ ಉತ್ತಮವಾಗಿಯೇ ಇದೆ.

ಮೋದಿ Vs ಗುಜರಾತ್ ಕಾಂಗ್ರೆಸ್

ಮೋದಿ Vs ಗುಜರಾತ್ ಕಾಂಗ್ರೆಸ್

ಮುಂದೆ ಪ್ರಧಾನಿಯಾಗಲು ಮೋದಿಗೆ ಯಡಿಯೂರಪ್ಪನವರ ಬೆಂಬಲದ ಅಗತ್ಯವಿದೆ. ಹಾಗಾಗಿ ಮೋದಿ ಯಾವ ಕಾರಣಕ್ಕೂ ಯಡಿಯೂರಪ್ಪನವರನ್ನು ಎದುರಿ ಹಾಕಿಕೊಳ್ಳಲು ತಯಾರಿಲ್ಲ.

ಮೋದಿ Vs ಗುಜರಾತ್ ಕಾಂಗ್ರೆಸ್

ಮೋದಿ Vs ಗುಜರಾತ್ ಕಾಂಗ್ರೆಸ್

ಅಂದು ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ತನ್ನನ್ನು ಬೆಂಬಲಿಸಿದ್ದಕ್ಕೆ ಮತ್ತು ಮುಂದೆ ಕೂಡಾ ಬೆಂಬಲದ ಅಗತ್ಯವಿರುವುದರಿಂದ ಮೋದಿ ಗೌರವ ಪೂರ್ವಕವಾಗಿ ಕರ್ನಾಟಕದಲ್ಲಿ ಒಂದೇ ಸಾರ್ವಜನಿಕ ಸಭೆ ನಡೆಸುತ್ತಿದ್ದಾರೆ.

ಮೋದಿ Vs ಗುಜರಾತ್ ಕಾಂಗ್ರೆಸ್

ಮೋದಿ Vs ಗುಜರಾತ್ ಕಾಂಗ್ರೆಸ್

ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಎಲ್ಲಾ ಸಮೀಕ್ಷೆಗಳು ಅದನ್ನೇ ಹೇಳುತ್ತಿವೆ ಎಂದು ಜಯರಾಜ್ ಸಿನ್ಹ ಪಾರ್ಮರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+