ವರುಣಾ : ಮೂವರು ಸಿದ್ದರ ಹಣಾಹಣಿಗೆ ವೇದಿಕೆ ಸಿದ್ಧ

Varuna (Mysore) constituency profile
ಹಾಲಿ ಶಾಸಕ - ಸಿದ್ದರಾಮಯ್ಯ (ಕಾಂಗ್ರೆಸ್)

ರಾಜಕೀಯ ಮಹತ್ವ : ಕ್ಷೇತ್ರ ಪುನರ್‍ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಕ್ಷೇತ್ರವಿದು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿ ಈ ಬಾರಿಯೂ ಖಾದಿ, ನಿವೃತ್ತ ಖಾಕಿಗಳ ಹಣಾಹಣಿ ನಡೆಯುವ ನಿರೀಕ್ಷೆ ಇದೆ.

ಪ್ರಮುಖ ಸ್ಪರ್ಧಿಗಳು : ಕಾಂಗ್ರೆಸ್ಸಿನಿಂದ ಸಿದ್ದರಾಮಯ್ಯ ಸ್ಪರ್ಧೆ. ಕೆಜೆಪಿಯಿಂದ ಕಾ.ಪು ಸಿದ್ದಲಿಂಗಸ್ವಾಮಿ ಮತ್ತು ಜೆಡಿಎಸ್ ನಿಂದ ಚೆಲುವರಾಜ್ ಸ್ಪರ್ಧೆ. ಬಿಜೆಪಿಯಿಂದ ನಿವೃತ್ತ ಪೊಲೀಸ್ ಅಧಿಕಾರಿ ರೇವಣ್ಣ ಸಿದ್ದಯ್ಯ ಸ್ಪರ್ಧೆ ಸಾಧ್ಯತೆ.

ಗೆಲುವಿನ ಅಂಶಗಳು : ಕಾಂಗ್ರೆಸ್‍ನ ಸಿಎಂ ಅಭ್ಯರ್ಥಿ ಎಂಬ ನಿರೀಕ್ಷೆಯೊಂದಿಗೆ ಮತದಾರರು ಆಶೀರ್ವದಿಸಿದರೆ ಸಿದ್ದು ಹಾದಿ ಸುಗಮ. ಅಲ್ಲದೆ, ಬೆಜೆಪಿಯಿಂದ ಲಿಂಗಾಯತ ಸಮುದಾಯದವರು ಕಣಕ್ಕೆ ಇಳಿದ್ರೆ ಕೆಜೆಪಿಯ ಮತಗಳು ಇಬ್ಭಾಗವಾಗಿ ಅದು ಕಾಂಗ್ರೆಸ್‍ಗೆ ಅನುಕೂಲವಾಗಬಹುದು. ಕ್ಷೇತ್ರದ ಲಿಂಗಾಯತ ಮತಗಳು ಕೆಜೆಪಿ ಪರ ಸಂಪೂರ್ಣವಾಗಿ ನಿಂತು, ಜೊತೆಗೆ ಪರಿಶಿಷ್ಟ ಜಾತಿ ಮತಗಳು (ಸಿದ್ದು ಗೆದ್ದರೆ ಖರ್ಗೆ ಸಿಎಂ ಆಗೋದಿಕ್ಕೆ ಅಡ್ಡಗಾಲು ಹಾಕುತ್ತಾರೆ ಎಂಬ ಕಾರಣಕ್ಕೆ) ಇಬ್ಭಾಗವಾದ್ರೆ ಕೆಜೆಪಿಗೆ ಅನುಕೂಲ.

ಮತದಾರರ ವಿವರ

ಪುರುಷ ಮತದಾರರು - 99700

ಮಹಿಳಾ ಮತದಾರರು - 99300

ಒಟ್ಟು ಮತದಾರರು - 1,99,000

ಹಾಲಿ ಶಾಸಕ - ಸಿದ್ದರಾಮಯ್ಯ (ಕಾಂಗ್ರೆಸ್)

ಸೋತ ಅಭ್ಯರ್ಥಿ - ಎಲ್. ರೇವಣ್ಣ ಸಿದ್ದಯ್ಯ(ಬಿಜೆಪಿ)

ಗೆಲುವಿನ ಅಂತರ 12,000 ಮತಗಳು

ಜಾತಿವಾರು ಮತಗಳು : ಲಿಂಗಾಯಿತರು 55 ಸಾವಿರ, ಎಸ್.ಸಿ 60 ಸಾವಿರ, ಎಸ್‍ಟಿ 26 ಸಾವಿರ, ಕುರುಬರು 32 ಸಾವಿರ, ಒಕ್ಕಲಿಗರು 7 ಸಾವಿರ, ಮುಸ್ಲಿಂ 11 ಸಾವಿರ, ಇತರೆ 8 ಸಾವಿರ ಮತಗಳು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+