ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಪರಿಚಯ

M Srinivas
ವಿಧಾನಸಭಾ ಕ್ಷೇತ್ರ ಸಂಖ್ಯೆ 154 ರಾಜರಾಜೇಶ್ವರಿ ನಗರ:
ಹಾಲಿ ಶಾಸಕ- ಎಂ ಶ್ರೀನಿವಾಸ್ (71 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಹನುಮಂತರಾಯಪ್ಪ- ಕಾಂಗ್ರೆಸ್

* ಸಾಧನೆಗಳು: ಜನತಾ ಪರಿವಾರದಲ್ಲಿ ಶ್ರೀನಿವಾಸ್, ಸಂಸದರಾಗಿಯೂ ಆಯ್ಕೆಯಾಗಿದ್ದರು. ಜೆಡಿಎಸ್ ತೊರೆದು ಬಿಜೆಪಿ ಶಾಸಕರಾಗಿ ಆಯ್ಕೆಗೊಂಡರು.

* ಸಮಸ್ಯೆಗಳು: ಸಾರ್ವಜನಿಕ ಸಾರಿಗೆ, ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು, ಕಾನೂನು ಸುವ್ಯವಸ್ಥೆ, ಒಳಚರಂಡಿ ಮೂಲಸೌಕರ್ಯಗಳತ್ತ ಗಮನವೇ ಹರಿಸಿಲ್ಲ. ಆಡಳಿತಾರೂಢ ಪಕ್ಷದ ಶಾಸಕರಾಗಿದ್ದರೂ ಮುತುವರ್ಜಿ ವಹಿಸಿ ಸರಕಾರದ

ವತಿಯಿಂದ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಿಸಿಲ್ಲ. ಬಿಬಿಎಂಪಿಯಿಂದ ಬಿಡುಗಡೆಯಾದ ಹಣ ದುರ್ಬಳಕೆ ಮಾಡಿಕೊಂಡಿರುವ ಅಪಖ್ಯಾತಿಗೆ ಪಾತ್ರರಾಗಿದ್ದಾರೆ.

* ಮತ್ತೊಮ್ಮೆ ಕ್ಷೇತ್ರ ಪುನರ್ವಿಂಗಡಣೆಯಾಗುವ ಹಾದಿಯಲ್ಲಿದೆ. ಜನಸಂಖ್ಯೆ ಹೆಚ್ಚಾಗಿದ್ದು, ಸಮಸ್ಯೆಯೂ ಅಧಿಕವಾಗಿದೆ. ಜತೆಗೆ ರಾಜಕೀಯದಲ್ಲಿ ಇನ್ನೂ ಆಸಕ್ತಿಯಿದ್ದರೂ ಅಭಿವೃದ್ಧಿ ಕೆಲಸಗಳಲ್ಲಿ ಶ್ರೀನಿವಾಸ್ ಉತ್ಸಾಹ ಕಳೆದುಕೊಂಡಿದ್ದಾರೆ

ಎಂಬುದನ್ನು ಪ್ರತಿಸ್ಪರ್ಧಿಗಳು ಕಂಡುಕೊಂಡಿದ್ದಾರೆ. ರಿಯಲ್ ಎಸ್ಟೇಟ್ ದಂಧೆ ಜೋರಾಗಿದೆ. ಹೊಸ ಬಡಾವಣೆಗಳಲ್ಲಿ ಜನ ಸಮಸ್ಯೆಗಳ ಮಧ್ಯೆಯೇ ಜೀವನ ದೂಡುತ್ತಿದ್ದಾರೆ.

* ವಾರ್ಡ್: ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ, ಎಚ್ಎಂಟಿ, ಲಕ್ಷ್ಮಿದೇವಿ ನಗರ, ಲಗ್ಗೆರೆ, ಕೊಟ್ಟಿಗೇಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ

* ಮತದಾರರ ಸಂಖ್ಯೆ: 3,01,531. ಕಳೆದ ಬಾರಿ ವೋಟ್ ಮಾಡಿದವರು ಶೇ.48 ರಷ್ಟು ಮಂದಿ. ಅದರಲ್ಲಿ ಎಂ ಶ್ರೀನಿವಾಸ್ ಮತ ಗಳಿಕೆ ಪ್ರಮಾಣ ಶೇ. 42.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+