ಯಲಹಂಕ- ವಿಮಾನ ನಿಲ್ದಾಣದ ಸುತ್ತ 'ವಿಶ್ವ' ಪ್ರದಕ್ಷಿಣೆ

S R Vishwanath
* ವಿಧಾನಸಭಾ ಕ್ಷೇತ್ರ ಸಂಖ್ಯೆ 150:
ಹಾಲಿ ಶಾಸಕ- ಎಸ್ಆರ್ ವಿಶ್ವನಾಥ್ (50 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಚಂದ್ರಪ್ಪ- ಕಾಂಗ್ರೆಸ್

* ಸಾಧನೆಗಳು: ಮಾಜಿ ಎಚ್ಎಎಲ್ ಉದ್ಯೋಗಿ. ಮಾಜಿ ಯಡಿಯೂರಪ್ಪ ಕಟ್ಟಾಳು... ಹೀಗೆ ಇನ್ನೂ ಏನೇನೋ ಬಿರುದು ಬಾವಲಿಗಳು ಇವರಿಗೆ ನೇತು ಹಾಕಿಕೊಂಡಿವೆ. ಮೊದಲ ಬಾರಿಗೆ ಶಾಸಕರಾದ ವಿಶ್ವನಾಥರು ಈ ಬಾರಿಯೂ ಬಿಜೆಪಿಯಿಂದ ಗೆದ್ದು ಬರುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾವಾಗಲೂ ಜನರ ಮಧ್ಯೆಯೇ ಇದ್ದು, ಜನರ ಕಷ್ಟಸುಖಕ್ಕೆ ಧಾವಿಸುತ್ತಾರೆ.

25 ಕೋಟಿ ರೂ ಅರ್ಕಾವತಿ ಪುನಶ್ಚೇತನ ಯೋಜನೆ, ಬಸವ ಯೋಜನೆಯಡಿ 2800 ಮನೆ ನಿರ್ಮಾಣ, ಕಾವೇರಿ 4ನೇ ಹಂತದ ನೀರಿನ ಯೋಜನೆ ಸಹಿತ ಸುಮಾರು 600 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಖುದ್ದು ವಿಶ್ವನಾಥರೇ ಹೇಳುತ್ತಾರೆ.

* ಸಮಸ್ಯೆಗಳು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎದ್ದುಹೋಗುವ ವಿಮಾನಗಳ ಮೊದಲ ನೆರಳು ಇವರ ಕ್ಷೇತ್ರದ ಮೇಲೆಯೇ ಬೀಳುವುದು. ಅದರಡಿ ರಿಯಲ್ ಎಸ್ಟೇಟ್ ದಂಧೆಯ ಕರಿನೆರಳು ವ್ಯಾಪಕವಾಗಿ ಹರಡಿದೆ. ಕಾನೂನು ಸುವ್ಯವಸ್ಥೆ ಸಮಸ್ಯೆಯೂ ಶಾಸಕರ ಹಿಡಿತಕ್ಕೆ ಸಿಕ್ಕಿಲ್ಲ.

* ವಾರ್ಡ್: ಕೆಂಪೇಗೌಡ, ಚೌಡೇಶ್ವರಿ, ಅಟ್ಟೂರು, ಯಲಹಂಕ ಉಪನಗರ

* ಮತದಾರರ ಸಂಖ್ಯೆ: 2,41,439. ಕಳೆದ ಬಾರಿ ವೋಟ್ ಮಾಡಿದವರು ಶೇ. 61ರಷ್ಟು ಮಂದಿ. ಅದರಲ್ಲಿ ಎಸ್ಆರ್ ವಿಶ್ವನಾಥ್ ಮತ ಗಳಿಕೆ ಪ್ರಮಾಣ ಶೇ. 42.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+