ಶಾಂತಿನಗರ ವಿಧಾನಸಭಾ ಕ್ಷೇತ್ರದ ಪರಿಚಯ

* ಸಾಧನೆಗಳು: ಮೂಲತಃ ಉದ್ಯಮಿ. ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ. ಗಮನಾರ್ಹ ಸಾಧನೆ ಮಾಡಿದ್ದಾರೆ. ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣ, ವ್ಯಾಯಾಮ ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ.
85 ಕೋಟಿ ರೂ. ಘೋಷಿತ ಆಸ್ತಿವಂತ. ಬಿಜೆಪಿ ಆಡಳಿತವಿರೋಧಿಗೆ ಸಿಕ್ಕಿ ಪತರಗುಟ್ಟಿದರೆ ಹ್ಯಾರಿಸ್ ಅವರಿಗೆ ಈ ಬಾರಿಯೂ ಗೆಲುವು ನಿರಾಯಾಸ. ಜನಪರ ಶಾಸಕ ಎಂಬ ಹೆಗ್ಗಳಿಕೆಯೂ ಇವರ ಕೈಹಿಡಿಯಲಿದೆ.
* ಸಮಸ್ಯೆಗಳು: ಬಡವರು ವಾಸಿಸುವ ಪ್ರದೇಶಗಳನ್ನು ನಿರ್ಲಕ್ಷ್ಯಿಸಿದ್ದಾರೆ. ನೈರ್ಮಲ್ಯ ಸಮಸ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಯುಡಿ ಮಲ್ಲಿಕಾರ್ಜುನ. ಅಭಿವೃದ್ಧಿ ಕೆಲಸಗಳಿಗೆ ಆಡಳಿತ ಪಕ್ಷ ಅಡ್ಡಗಾಲು ಹಾಕಿದೆ ಎಂಬ ಮಾತಿದೆ.
* ವಾರ್ಡ್: ಜೌಗುಪಾಳ್ಯ, ಶಾಂತಲಾ ನಗರ, ದೊಮ್ಮಲೂರು, ಅಗರ, ವಣ್ಣಾರ್ ಪೇಟೆ, ನೀಲಸಂದ್ರ, ಶಾಂತಿ ನಗರ
* ಮತದಾರರ ಸಂಖ್ಯೆ: 1,84,138. ಕಳೆದ ಬಾರಿ ವೋಟ್ ಮಾಡಿದವರು ಶೇ. 44ರಷ್ಟು ಮಂದಿ. ಅದರಲ್ಲಿ ಎನ್ಎ ಹ್ಯಾರಿಸ್ ಮತ ಗಳಿಕೆ ಪ್ರಮಾಣ ಶೇ. 53.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications