ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಪರಿಚಯ

katta-subrahmanya-naidu
ವಿಧಾನಸಭಾ ಕ್ಷೇತ್ರ ಸಂಖ್ಯೆ 158: ಹಾಲಿ ಶಾಸಕ- ಕಟ್ಟಾ ಸುಬ್ರಮಣ್ಯ ನಾಯ್ಡು (62 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಎಚ್ಎಂ ರೇವಣ್ಣ- ಕಾಂಗ್ರೆಸ್

* ಸಾಧನೆಗಳು: 1993ರಲ್ಲಿ ರಾಜಕೀಯ ಪ್ರವೇಶ. 1999 ಮತ್ತು 2004ರಲ್ಲಿ ಶಿವಾಜಿ ನಗರ ಕ್ಷೇತ್ರದಿಂದ ಮತ್ತು 2008ರಲ್ಲಿ ಹೆಬ್ಬಾಳ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಭೂಹಗರಣಗಳಲ್ಲಿ ಸಿಲುಕಿ ಯಡಿಯೂರಪ್ಪ ಜತೆಗೆ ಇವರೂ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿಬಂದವರು.

ಒಂದಷ್ಟು ಅಭಿವೃದ್ಧಿ ಕಾರ್ಯಗಳು ತಂತಾನೇ ನಡೆದಿವೆ. ಮತದಾರರನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಆಸ್ತಿ ಕೇವಲ 13 ಕೋಟಿ ರೂ ಎಂದು ಘೋಷಿಸಿಕೊಂಡಿದ್ದಾರೆ.

* ಸಮಸ್ಯೆಗಳು: ಪುತ್ರನನ್ನೂ ಜತೆ ಹಾಕಿಕೊಂಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿದ್ದಾರೆ. ಕಾನೂನು ಸುವ್ಯಸವ್ಥೆ ಸುಧಾರಿಸಬೇಕು. ಪೂರ್ಣ ಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸುವಲ್ಲಿ ಎಡವಿದ್ದಾರೆ. ಸಾರಿಗೆ ವ್ಯವಸ್ಥೆ ಪರವಾಗಿಲ್ಲ. ಮಹಿಳಾ ಸುರಕ್ಷತೆ ಆತಂಕದ ಮಟ್ಟದಲ್ಲಿದೆ.

ಚುನಾವಣೆಗೂ ಮುನ್ನವೇ ನೀರಿನಂತೆ ಹಣ ಖರ್ಚು ಮಾಡುತ್ತಿದ್ದಾರೆ. ಅಮಾಯಕ ಮತದಾರ ಕಟ್ಟಾ ಸುಬ್ರಮಣ್ಯ ಪ್ರಲೋಭೆಗೆ ಮರುಳಾಗುತ್ತಾರಾ?. ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ರೇವಣ್ಣ ಅವರ ಚುನಾವಣೆ ಕಾರ್ಯತಂತ್ರ ಏನೆಂಬುದು ಫಲಿತಾಂಶವನ್ನು ನಿರ್ಧರಿಸುತ್ತದೆ.

* ವಾರ್ಡ್: ರಾಧಾಕೃಷ್ಣ ದೇವಸ್ಥಾನ, ಸಂಜಯ ನಗರ, ಗಂಗಾ ನಗರ, ಹೆಬ್ಬಾಳ, ವಿಶ್ವನಾಥ ನಾಗೇನಹಳ್ಳಿ, ಮನೋರಾಯನ ಪಾಳ್ಯ, ಗಂಗೇನಹಳ್ಳಿ, ಜಯಚಾಮರಾಜೇಂದ್ರನಗರ

* ಮತದಾರರ ಸಂಖ್ಯೆ: 1,00,986. ಕಳೆದ ಬಾರಿ ವೋಟ್ ಮಾಡಿದವರು ಶೇ. 95ರಷ್ಟು ಮಂದಿ. ಅದರಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಮತ ಗಳಿಕೆ ಪ್ರಮಾಣ ಶೇ. 49.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+