ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾದಗಿರಿಯಲ್ಲಿ ಚುನಾವಣಾ ಕಾವೇರಿಸಿದ ಅಭ್ಯರ್ಥಿಗಳು

By Prasad
|
Google Oneindia Kannada News

Yadgir official candidates list
ಯಾದಗಿರಿ, ಏ. 24 : ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಹೆಸರುವಾಸಿಯಾಗಿರುವ ಬಿಸಿಲನಾಡು ಯಾದಗಿರಿಯಲ್ಲಿ ಚುನಾವಣಾ ಕಣ ಮತ್ತಷ್ಟು ಕಾವನ್ನು ಏರಿಸಿದೆ. ಜಿಲ್ಲೆ ಒಟ್ಟು 4 ಕ್ಷೇತ್ರಗಳನ್ನು (ಯಾದಗಿರಿ, ಶಹಾಪುರ, ಸುರಪುರ, ಮತ್ತು ಗುರುಮಿಠಕಲ್) ಹೊಂದಿದೆ.

ಸುರಪುರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದಿಂದ ಕರ್ನಾಟಕ ಜನತಾ ಪಕ್ಷಕ್ಕೆ ಹಾರಿರುವ ನರಸಿಂಹ ನಾಯಕ್ (ರಾಜೂಗೌಡ) ಅವರು ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ್ ಮತ್ತು ಬಿಜೆಪಿಯ ರಾಜಾ ಮದನಗೋಪಾಲ ನಾಯಕ್ ಅವರಿಗೆ ಸೆಡ್ಡು ಹೊಡೆದಿದ್ದಾರೆ. ಒಟ್ಟಿನಲ್ಲಿ ನಾಯಕ್ ಜನಾಂಗದವರ ನಡುವಿನ ಬಡಿದಾಟಕ್ಕೆ ಸುರಪುರ ಸಾಕ್ಷಿಯಾಗಲಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಮಲ್ಲಿಕಾರ್ಜುನ ಖರ್ಗೆ ಅವರ ಹಿಂದಿನ ಕ್ಷೇತ್ರ ಗುರುಮಿಠಕಲ್ ಈ ಬಾರಿ ಸಾಕಷ್ಟು ಆಸಕ್ತಿಯನ್ನು ಕೆರಳಿಸಿದೆ. ಬಿಜೆಪಿಯಿಂದ ಬಿಸಿರಕ್ತದ ಗಿರೀಶ್ ಮಟ್ಟಣ್ಣನವರ್ ಅವರು ಕಳೆದ ಬಾರಿಯ ಶಾಸಕ ಕಾಂಗ್ರೆಸ್ ಪಕ್ಷದ ಬಾಬುರಾವ್ ಚಿಂಚನಸೂರ್ ಅವರಿಗೆ ಸವಾಲೆಸೆದಿದ್ದಾರೆ. ಹೈಟೆಕ್ ವಾಹನವನ್ನು ಬಾಡಿಗೆ ಪಡೆದಿರುವ ಬಾಬುರಾವ್ ಚಿಂಚನಸೂರ್ ತಣ್ಣಗೆ ಪ್ರಚಾರ ಆರಂಭಿಸಿದ್ದಾರೆ.

ಯಾದಗಿರಿಯಲ್ಲಿ ಕಾಂಗ್ರೆಸ್‌ನ ಡಾ. ಎ.ಬಿ. ಮಾಲಕರೆಡ್ಡಿ ಅವರು ಗೆಲುವಿನ ಕುದುರೆಯಾಗಿದ್ದಾರೆ. ಇನ್ನು ಶಹಾಪುರದಲ್ಲಿ ಕೂಡ ಕಾಂಗ್ರೆಸ್ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. 2008ರ ಚುನಾವಣೆಯಲ್ಲಿ ಶರಣಬಸಪ್ಪ ದರ್ಶನಾಪುರ ಅವರು ಜಯಭೇರಿ ಬಾರಿಸಿದ್ದರು.

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ
36 ಸುರಪುರ
(ಎಸ್ ಟಿ)
ರಾಜಾ ಮದನಗೋಪಾಲ ನಾಯಕ್
ರಾಜಾ ವೆಂಕಟಪ್ಪ ನಾಯಕ್ ನರಸಿಂಹ ನಾಯಕ್ (ರಾಜೂಗೌಡ) ಶಿವರಾಜ ಮಲ್ಲೇಶಿ ನಂದಕುಮಾರ್ ಪಾಟೀಲ
(ಬಿಎಸ್ಆರ್)
37 ಶಹಾಪುರ ವೀರಣ್ಣಗೌಡ ಮಲ್ಲಾಬಾದಿ ಶರಣಬಸಪ್ಪ ದರ್ಶನಾಪುರ ಶರಣಪ್ಪ ಸಲಾದಪುರ
ಗುರು ಪಾಟೀಲ
ಶಂಕ್ರಣ್ಣ ವಣಿಕ್ಯಾಳ
(ಬಿಎಸ್ಆರ್)
38 ಯಾದಗಿರಿ ಚಂದ್ರಶೇಖರ ಮಾಗನೂರ ಡಾ. ಎ.ಬಿ. ಮಾಲಕರೆಡ್ಡಿ
ಎ.ಸಿ. ಕಾಡ್ಲೂರ ಡಾ. ವೀರಬಸವಂತ ರೆಡ್ಡಿ ಮುದ್ನಾಳ್ ಮೌಲಾಲಿ ಅನ್ಪೂರು
(ಬಿಎಸ್ಆರ್)
39 ಗುರುಮಿಠಕಲ್ ಗಿರೀಶ್ ಮಟ್ಟಣ್ಣನವರ್ ಬಾಬುರಾವ್ ಚಿಂಚನಸೂರ್ ನಾಗನಗೌಡ ಕುಂದಕೂರ ವೆಂಕಟರೆಡ್ಡಿ ಮುದ್ನಾಳ್ ಬಾಬು ಚವ್ಹಾಣ್
(ಬಿಎಸ್ಆರ್)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
List of official candidates of all major parties contesting for assembly election to be held on May 5, from Yadgir district. The district has 4 constituencies. Congress had the upper hand in the previous election. Now, battle lines are drawn. Which party will snatch more seats? Be on the tip of your seat to know the result on May 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X