ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಜಿಲ್ಲೆ ಅಭ್ಯರ್ಥಿಗಳು:ಯಾರಿಗೆ ಮಾರಾಯ್ರೇ ಗೆಲುವು

|
Google Oneindia Kannada News

ಅಷ್ಟಮಂಗಲ, ನೀಲಿ ಸಿಡಿ ಹಗರಣ, ಮಡೆಸ್ನಾನ, ಸಹಪಂಕ್ತಿ ಭೋಜನ, ಕೃಷ್ಣ ಮಠ ಮುಜರಾಯಿ ಇಲಾಖೆಗೆ ಒಪ್ಪಿಸಬೇಕೆನ್ನುವ ಪರ, ವಿರೋಧ ಚರ್ಚೆ.. ಹೀಗೆ ಹತ್ತು ಹಲಾವಾರು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ಜಿಲ್ಲೆ ಉಡುಪಿ.

ಪೊಡವಿಗೊಡೆಯ ಕೃಷ್ಣನ ನಾಡಿನಲ್ಲೀಗ ಬಿಸಿಲಿನ ತಾಪಕ್ಕಿಂತ ಹೆಚ್ಚಾಗಿರುವುದು ಚುನಾವಣೆಯ ಕಾವು. ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ. ಕಾಪು ಕ್ಷೇತ್ರದಲ್ಲಿ ಮಾತ್ರ ತ್ರಿಕೋಣ ಸ್ಪರ್ಧೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಆಗಸ್ಟ್ 1997ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಜೆ ಎಚ್ ಪಟೇಲ್ ಅವಧಿಯಲ್ಲಿ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಉಡುಪಿ ಜಿಲ್ಲೆ ಪೂರ್ವಕ್ಕೆ ಸಹ್ಯಾದ್ರಿ, ಪಶ್ಚಿಮಕ್ಕೆ ಅರಬ್ಬೀ ಸಮುದ್ರ ಪ್ರಕೃತಿ ಮೈಸಿರಿಯನ್ನು ತುಂಬಿಕೊಂಡಿರುವ ನಾಡು. ಮಲ್ಪೆ, ಕಾಪು ಬೀಚ್, ಸೈಂಟ್ ಮೇರಿ ದ್ವೀಪ, ಕೊಲ್ಲೂರು ದೇವಾಲಯ, ಮರವಂತೆಯ ಸುಂದರ ಕಡಲ ಕಿನಾರೆ, ಮಂದರ್ತಿ, ಕಮಲಶಿಲೆ, ಆನೆಗುಡ್ಡೆ ದೇವಾಲಯ, ಸೈಂಟ್ ಮಿಲಾಗ್ರಿಸ್ ಚರ್ಚ್ ಮುಂತಾದವು ಕ್ಷೇತ್ರದ ಪ್ರೇಕ್ಷಣೀಯ ಸ್ಥಳಗಳು.

Udupi district

ಉಡುಪಿ ಕಡೆಗೆ ಹೋದಾಗ ಗೋಳಿಬಜೆ, ಬಿಸ್ಕುಟ್ ಅಂಬಡೆ, ಅಡ್ಯೆ, ಬಜಿಲ್ ಸಜ್ಜಿಗೆ, ಪತ್ರೋಡೆ, ಬಂಗುಡೆ ಸಾರು ತಿನ್ನಲು ಮರೆಯದಿರಿ. ಹಾಗೇ, ಭೂತಕೋಲ, ಯಕ್ಷಗಾನವನ್ನೂ ಕಣ್ತುಂಬಿಸಿಕೊಳ್ಳಿ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಉಡುಪಿ, ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳಿವೆ.

2008ರಲ್ಲಿ ಗೆದ್ದವರ ಪಟ್ಟಿ
ಬೈಂದೂರು : ಕೆ ಲಕ್ಷ್ಮೀನಾರಾಯಣ, ಬಿಜೆಪಿ, ಗೆದ್ದ ಮತದ ಅಂತರ 7,970.
ಕುಂದಾಪುರ : ಹಾಲಾಡಿ ಶ್ರೀನಿವಾಸ ಶೆಟ್ಟ, ಬಿಜೆಪಿ, ಗೆದ್ದ ಮತದ ಅಂತರ 25,083.
ಉಡುಪಿ : ರಘುಪತಿ ಭಟ್, ಬಿಜೆಪಿ, ಗೆದ್ದ ಮತದ ಅಂತರ 2,479.
ಕಾಪು : ಲಾಲಾಜಿ ಆರ್ ಮೆಂಡನ್, ಬಿಜೆಪಿ, ಗೆದ್ದ ಮತದ ಅಂತರ 967.
ಕಾರ್ಕಳ : ಎಚ್ ಗೋಪಾಲ ಭಂಡಾರಿ, ಕಾಂಗ್ರೆಸ್, ಗೆದ್ದ ಮತದ ಅಂತರ 1,538.

2013 ಕರ್ನಾಟಕ ವಿಧಾನಸಭೆ ಚುನಾವಣೆ ಉಡುಪಿ ಜಿಲ್ಲೆ ಅಭ್ಯರ್ಥಿಗಳು:

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಕೆಜೆಪಿ ಬಿಎಸ್ಆರ್ / ಸಿಪಿ / ಪಕ್ಷೇತರರು /ಇತರರು
118 ಬೈಂದೂರು ಗೋಪಾಲ ಪೂಜಾರಿ
ಬಿ ಎಂ ಸುಕುಮಾರ ಶೆಟ್ಟಿ ಸುರಯ್ಯಾ ಭಾನು ನವೀನ್ ಚಂರ ಉಪ್ಪುಂದ ಒಟ್ಟು 13 ಮಂದಿ ಕಣದಲ್ಲಿ
119 ಕುಂದಾಪುರ ಮಲ್ಯಾಡಿ ಶಿವರಾಂ ಶೆಟ್ಟಿ
ಕಿಶೋರ್ ಕುಮಾರ್ ಅಭ್ಯರ್ಥಿ ಕಣಕ್ಕಿಳಿಸಲಿಲ್ಲ ಅಭ್ಯರ್ಥಿ ಕಣಕ್ಕಿಳಿಸಲಿಲ್ಲ ಕೆ ಎಚ್ ಇಬ್ರಾಹಿಂ (BSR)
ಹಾಲಾಡಿ ಶ್ರೀನಿವಾಸ ಶೆಟ್ಟಿ (Independent))
ಸೇರಿ ಕಣದಲ್ಲಿ ಆರು ಅಭ್ಯರ್ಥಿಗಳು
120 ಉಡುಪಿ ಪ್ರಮೋದ್ ಮಧ್ವರಾಜ್ ಸುಧಾಕರ ಶೆಟ್ಟಿ ಸತೀಶ್ ಪೂಜಾರಿ ಅಭ್ಯರ್ಥಿ ಕಣಕ್ಕಿಳಿಸಲಿಲ್ಲ ನಾಸಿರ್ ಹುಸೇನ್ (BSR) ಸೇರಿ ಕಣದಲ್ಲಿ 7 ಅಭ್ಯರ್ಥಿಗಳು
121 ಕಾಪು ವಿನಯ್ ಕುಮಾರ್ ಸೊರಕೆ
ಲಾಲಾಜಿ ಮೆಂಡನ್ ವಸಂತ್ ಸಾಲ್ಯಾನ್ ಅಭ್ಯರ್ಥಿ ಕಣಕ್ಕಿಳಿಸಲಿಲ್ ಪ್ರವೀಣ್ ಕುಮಾರ್ (BSR) ಸೇರಿ ಕಣದಲ್ಲಿ 11 ಅಭ್ಯರ್ಥಿಗಳು
122 ಕಾರ್ಕಳ ಎಚ್ ಗೋಪಾಲ್ ಭಂಡಾರಿ ವಿ ಸುನಿಲ್ ಕುಮರ್ ವಾಲ್ಟರ್ ಡಿಸೋಜಾ ಯು ಕೆ ಸಯ್ಯದ್ ಒಟ್ಟು 9 ಮಂದಿ ಕಣದಲ್ಲಿ
English summary
Udupi district all set for forth coming assembly election. Here is all party candidates list for the five constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X