ಭ್ರಷ್ಟಾಚಾರದಲ್ಲಿ ಗುರು ಬಿಎಸ್ವೈಯನ್ನೇ ಮೀರಿಸಿದ ಶಿಷ್ಯ
ಮೈಸೂರು, ಏ 30 : ವರುಣಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕಾ.ಪು ಸಿದ್ಧಲಿಂಗ ಸ್ವಾಮಿ ಚುನಾವಣೆಯಲ್ಲಿ ಮಠಾಧಿಪತಿಗಳ ಫೋಟೋವನ್ನು ಭಾರೀ ಪ್ರಮಾಣದಲ್ಲಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ, ನಿವೃತ್ತ ಪೊಲೀಸ್ ಅಧಿಕಾರಿ ಎಲ್ ರೇವಣಸಿದ್ಧಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ (ಏ 29) ಸಂಜೆ ಮೈಸೂರಿನ ಪತ್ರಿಕಾಭವನದಲ್ಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಠಾಧಿಪತಿಗಳ ಛಾಯಾಚಿತ್ರಗಳುಳ್ಳ ಕೆಜೆಪಿ ಪಕ್ಷದ ಪ್ರಚಾರ ಸಾಮಗ್ರಿಗಳ ಪ್ರತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿದರು.
ಚುನಾವಣೆ ಪ್ರಚಾರಕ್ಕೆ ವಿವಿಧ ಜನಾಂಗದ ಮಠಾಧಿಪತಿಗಳ ಛಾಯಾಚಿತ್ರಗಳನ್ನು ಯಡಿಯೂರಪ್ಪ ಹಾಗೂ ತನ್ನ ಫೋಟೋಗಳ ಮಧ್ಯಭಾಗದಲ್ಲಿ ಬಳಸಿಕೊಂಡು ವಿವಿಧ ಜನಾಂಗದ ಮತದಾರರನ್ನು ತಪ್ಪುದಾರಿಗೆ ತಳ್ಳುತ್ತಿದ್ದಾರೆ ಎಂದು ಅವರು ಆಪಾದಿಸಿದರು. ವಿವಿಧ ಸಮುದಾಯಗಳ ಮತಗಳಿಸಲು ನಡೆಸಿರುವ ಷಡ್ಯಂತ್ರ ಇದು. ಸಮಾಜ ಇದನ್ನು ಗಮನಿಸುತ್ತಿದೆ ಎಂದು ರೇವಣಸಿದ್ಧಯ್ಯ ಆರೋಪಿಸಿದ್ದಾರೆ.

ಇಂತಹ ಅಕ್ರಮ ಎಸಗಿದವರಿಗೆ ಠೇವಣಿ ಕಳೆದುಕೊಳ್ಳುವ ರೀತಿಯಲ್ಲಿ ತಕ್ಕ ಉತ್ತರ ಸಿಗುವುದು ನಿಶ್ಚಿತ. ಜಾತಿ, ಧರ್ಮ ಹಾಗೂ ಮಠಗಳ ಮತ್ತು ಮಠಾಧಿಪತಿಗಳ ಛಾಯಾಚಿತ್ರಗಳನ್ನು ಬಳಸಿಕೊಂಡು ಮತಯಾಚನೆ ಮಾಡುವ ಮೂಲಕ ಮತದಾರಿಗೆ ಆತ್ಮವಂಚನೆ ಮಾಡುತ್ತಿದ್ದು ಈವರೆಗೂ ಚುನಾವಣಾ ಆಯೋಗ ಅಭ್ಯರ್ಥಿಯ ಮೇಲೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯವಾಗಿದೆ ರೇವಣಸಿದ್ಧಯ್ಯ ಬೇಸರ ವ್ಯಕ್ತ ಪಡಿಸಿದ್ದಾರೆ.
ವರುಣಾ ವಿಧಾನಸಭಾ ಚುನಾವಣೆಯಲ್ಲಿ ಎದುರಾಗಿವುದು ಭ್ರಷ್ಟ ಮತ್ತು ಸ್ವಚ್ಛ ರಾಜಕಾರಣಿ ನಡುವಿನ ಸಮರ. ನಾನು ಇಲ್ಲಿ ಸ್ವಚ್ಛ ರಾಜಕಾರಣದ ಕೈ ಹಿಡಿಯುತ್ತಿದ್ದೇನೆ. ನಾನು ಮೂಲತಃ ಕಾಂಗ್ರೆಸಿಗ ಎಂಬ ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ನಿಂತು ಅವರ ಗೆಲುವಿಗೆ ಶ್ರಮಿಸಲಿದ್ದೇನೆ ಎಂದು ರೇವಣಸಿದ್ದಯ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಭ್ರಷ್ಟಾಚಾರವೇ ಒಂದು ವ್ಯಕ್ತಿಯಾಗಿ ಬಂದರೆ ಹೇಗಿರುತ್ತದೆ ಎಂಬುದಕ್ಕೆ ಸಾಕ್ಷಿಯಂತೆ ಕಾ.ಪು ಸಿದ್ದಲಿಂಗಸ್ವಾಮಿ ಇದ್ದಾರೆ. ವರುಣಾ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿರುವ ಅವರು ಭ್ರಷ್ಟಾಚಾರದಲ್ಲಿ 'ಗುರುವನ್ನೂ ಮೀರಿಸಿದ ಶಿಷ್ಯ'. ಕಪ್ಪು ಹಣ ಸಂಗ್ರಹಿಸುವುದರಿಂದ ಹಿಡಿದು ಭ್ರಷ್ಟ ರೀತಿಯಿಂದ ಮತಬೇಟೆಯವರೆಗೆ ಅವರು ನಾನಾ ಅಕ್ರಮಗಳಲ್ಲಿ ತೊಡಗಿದ್ದಾರೆ.
ಅವರು ಯುವಕರನ್ನು ದುಶ್ಚಟಗಳ ದಾಸರನ್ನಾಗಿ ಮಾಡುತ್ತಿದ್ದಾರೆ. ಸಮುದಾಯದ ಮುಖಂಡರಿಗೆ ಕಳಂಕ ತರುತ್ತಿದ್ದಾರೆ ಎಂದು ರೇವಣಸಿದ್ದಯ್ಯ ಆಪಾದಿಸಿದ್ದಾರೆ.












Click it and Unblock the Notifications