ದ.ಕನ್ನಡ ಜಿಲ್ಲೆ ಅಭ್ಯರ್ಥಿಗಳ ಪಟ್ಟಿ:ಗೆಲ್ಲೋ ಕುದ್ರೆ ಯಾವ್ದು?
ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆ, ಕಾಲ ಬದಲಾದಂತೆ ಕರಾವಳಿಯ ಜನತೆ ಕಮಲದ ಹೂವನ್ನು ಮುಡಿಗೇರಿಸಲು ಆರಂಭಿಸಿಕೊಂಡರು. ಆದರೆ ಈಗಿನ ವಾಸ್ತವ ಪರಿಸ್ಥಿತಿಯೇ ಬೇರೆ. ಬಿಜೆಪಿ ಭದ್ರನೆಲೆ ಎಂದು ಕರೆಯಿಸಿಕೊಳ್ಳುತ್ತಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಪರಿಸ್ಥಿತಿ ಬಿಜೆಪಿಗೆ ಪೂರಕವಾಗಿಲ್ಲ.
ಕರ್ನಾಟಕ ಕರಾವಳಿಯ ಹೆಬ್ಟಾಗಿಲು, ಎಂಆರ್ಪಿಎಲ್, ನವಮಂಗಳೂರು ಬಂದರು, ಎಂಸಿಎಫ್, ಮುಂತಾದ ಉದ್ಯಮ ಸಂಸ್ಥೆಗಳು ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಮುಸ್ಲಿಂ, ಕ್ರಿಸ್ಚಿಯನ್ ಸೇರಿದಂತೆ ಬ್ರಾಹ್ಮಣರು (ಶಿವಳ್ಳಿ, ಹವ್ಯಕ, ಕೋಟ), ಮೊಗವೀರ, ಕೊಂಕಣಿ, ಬಂಟ್ಸ್, ಬಿಲ್ಲವ ಪಂಗಡದವರು ಈ ಪ್ರದೇಶದಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಸದಾ ಒಂದಲ್ಲೊಂದು ಸುದ್ದಿಯಲ್ಲಿರುವ ಈ ಜಿಲ್ಲೆಯ ಹೆಚ್ಚಿನ ಕ್ಷೇತ್ರಗಳಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ. ಮೂಡಬಿದರೆ ಕ್ಷೇತ್ರದಲ್ಲಿ ಮಾತ್ರ ತ್ರಿಕೋಣ ಸ್ಪರ್ಧೆಯಿದೆ. ತುಳು ಭಾಷಿಗರು ಹೆಚ್ಚಾಗಿರುವ ದಕ್ಷಿಣಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು ಹೀಗೆ ಐದು ತಾಲೂಕುಗಳಿವೆ.
2008ರಲ್ಲಿ ಗೆದ್ದವರು ಇವರು
ಬೆಳ್ತಂಗಡಿ: ವಸಂತ ಬಂಗೇರಾ, ಕಾಂಗ್ರೆಸ್, ಗೆದ್ದ ಮತದ ಅಂತರ 16,103.
ಮೂಡಬಿದಿರೆ: ಕೆ ಅಭಯ ಚಂದ್ರ ಜೈನ್, ಕಾಂಗ್ರೆಸ್, ಗೆದ್ದ ಮತದ ಅಂತರ 9,903.
ಮಂಗಳೂರು ಉತ್ತರ : ಜೆ ಕೃಷ್ಣ ಪಾಲೇಮಾರ್, ಬಿಜೆಪಿ, ಗೆದ್ದ ಮತದ ಅಂತರ 14,426.
ಮಂಗಳೂರು ದಕ್ಷಿಣ : ಎನ್ ಯೋಗೀಶ್ ಭಟ್, ಬಿಜೆಪಿ, ಗೆದ್ದ ಮತದ ಅಂತರ 8,760.
ಮಂಗಳೂರು (ಉಳ್ಳಾಲ) : ಯು ಟಿ ಖಾದರ್, ಕಾಂಗ್ರೆಸ್, ಗೆದ್ದ ಮತದ ಅಂತರ 7,049.
ಬಂಟ್ವಾಳ : ಬಿ ರಮಾನಾಥ ರೈ, ಕಾಂಗ್ರೆಸ್, ಗೆದ್ದ ಮತದ ಅಂತರ 1,251.
ಪುತ್ತೂರು : ಮಲ್ಲಿಕಾ ಪ್ರಸಾದ್, ಬಿಜೆಪಿ,ಗೆದ್ದ ಮತದ ಅಂತರ 1,425.
ಸುಳ್ಯ : ಅಂಗಾರ ಎಸ್, ಬಿಜೆಪಿ, ಗೆದ್ದ ಮತದ ಅಂತರ 4,322.
2013 ಕರ್ನಾಟಕ ವಿಧಾನಸಭೆ ಚುನಾವಣೆ ದಕ್ಷಿಣಕನ್ನಡ ಜಿಲ್ಲೆ ಅಭ್ಯರ್ಥಿಗಳು:
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ / ಸಿಪಿ / ಪಕ್ಷೇತರರು /ಇತರರು |
| 200 | ಬೆಳ್ತಂಗಡಿ | ಕೆ ವಸಂತ ಬಂಗೇರ | ರಂಜನ್ ಜಿ ಗೌಡ | ರಾಜಶ್ರೀ ಹೆಗಡೆ | ಸುಕೇಶ್ ಕುಮಾರ್ ಜೈನ್ | ಒಟ್ಟು ಏಳು ಮಂದಿ ಕಣದಲ್ಲಿ |
| 201 | ಮೂಡಬಿದರೆ | ಕೆ ಅಭಯಚಂದ್ರ ಜೈನ್ | ಉಮಾನಾಥ್ ಕೋಟ್ಯಾನ್ | ಅಮರನಾಥ್ ಶೆಟ್ಟಿ | ಮೈಕಲ್ ಲೋಬೋ | ಒಟ್ಟು ಆರು ಮಂದಿ ಕಣದಲ್ಲಿ |
| 202 | ಮಂಗಳೂರು ನಗರ ಉತ್ತರ | ಮೊಯುದ್ದೀನ್ ಬಾವ | ಕೃಷ್ಣ ಜೆ ಪಾಲೇಮರ್ | ಗುಲಾಂ ಮಹಮ್ಮದ್ | ರಾಮಚಂದ್ರ ಬೈಕಂಪಾಡಿ | ಒಟ್ಟು ಒಂಬತ್ತು ಮಂದಿ ಕಣದಲ್ಲಿ |
| 203 | ಮಂಗಳೂರು ನಗರ ದಕ್ಷಿಣ | ಜಾನ್ ರಿಚರ್ಡ್ ಲೋಬೋ | ಎನ್ ಯೋಗೀಶ್ ಭಟ್ | ಚೆಂಗಪ್ಪ | ದಯಾನಂದ ಶೆಟ್ಟಿ | ಒಟ್ಟು 13 ಮಂದಿ ಕಣದಲ್ಲಿ |
| 204 | ಮಂಗಳೂರು (ಉಲ್ಲಾಳ) | ಯು ಟಿ ಖಾದರ್ | ಚಂದ್ರಹಾಸ್ ಉಲ್ಲಾಳ್ | ಅಬ್ದುಲ್ ಅಜೀಜ್ ಮಲಾರ್ | ರವೀಂದ್ರ ಶೆಟ್ಟಿ | ಒಟ್ಟು 15 ಮಂದಿ ಕಣದಲ್ಲಿ |
| 205 | ಬಂಟ್ವಾಳ | ಬಿ ರಮಾನಾಥ ರೈ | ರಾಜೇಶ್ ನಾಯಕ್ | ಕೃಷ್ಣಪ್ಪ ಪೂಜಾರಿ | ಇಬ್ರಾಹಿಂ | ಒಟ್ಟು ಆರು ಮಂದಿ ಕಣದಲ್ಲಿ |
| 206 | ಪುತ್ತೂರು | ಶಕುಂತಲಾ ಶೆಟ್ಟಿ | ಸಂಜೀವ್ ಮಠಂದೂರು | ಬಿ ಎನ್ ದಿನೇಶ್ | ಜಯರಾಂ ಭಟ್ | ಒಟ್ಟು ಆರು ಮಂದಿ ಕಣದಲ್ಲಿ |
| 207 | ಸುಳ್ಯ (ಮೀಸಲು) | ಡಾ. ಬಿ ರಘು | ಎಸ್ ಅಂಗಾರ | ನಂದರಾಜು ಸಂಕೇಶ್ | ಚಂದ್ರಾವತಿ | ಒಟ್ಟು 9 ಮಂದಿ ಕಣದಲ್ಲಿ |












Click it and Unblock the Notifications