ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಜಗದೀಶ್‌ ಶೆಟ್ಟರ್‌ ಬಳಿ 5 ಕೋಟಿಯೂ ಇಲ್ಲ!

By Srinath
|
Google Oneindia Kannada News

ಬೆಂಗಳೂರು, ಏ.16: ಶಾಸನಸಭೆಗೆ ಆಯ್ಕೆಯಾಗಬಯಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿಪಾಸ್ತಿ ವಿವರವನ್ನು ಅಧಿಕೃತವಾಗಿ ಘೋಷಿಸುವುದು ಶಾಸನಬದ್ಧವಾಗಿದೆ. ಈಗ ರಾಜ್ಯದಲ್ಲಿ 14ನೆಯ ವಿಧಾಸನಭೆ ಚುನಾವಣಾ ಭರಾಟೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ.

ಅಭ್ಯರ್ಥಿಗಳು ಸಂಬಂಧಪಟ್ಟ ಚುನಾವಣಾಧಿಕಾರಿಗೆ ನಾಮಪತ್ರವನ್ನು ಸಲ್ಲಿಸುವಾಗ ಆಸ್ತಿ ವಿವರದ ಘೋಷಣಾ ಪತ್ರ (Affidavit) ಸಲ್ಲಿಸಬೇಕಾಗುತ್ತದೆ
ಅವರಲ್ಲಿ ಆಯ್ದ ಅಭ್ಯರ್ಥಿಗಳ ಆಸ್ತಿಪಾಸ್ತಿ ಬಗ್ಗೆ ಒಂದು ಕ್ಷಕಿರಣ ನೋಟ ಇಲ್ಲಿದೆ:

ಸಿಎಂ ಶೆಟ್ಟರ್‌ ಬಳಿ 5 ಕೋಟಿಯೂ ಇಲ್ಲ

ಸಿಎಂ ಶೆಟ್ಟರ್‌ ಬಳಿ 5 ಕೋಟಿಯೂ ಇಲ್ಲ

ಹು-ಧಾ ಕೇಂದ್ರ ಬಿಜೆಪಿ ಅಭ್ಯರ್ಥಿ
ಒಟ್ಟು ಆಸ್ತಿ- 4.94 ಕೋಟಿ ರೂ
ಒಟ್ಟು ಚಿನ್ನ- 1.31 ಕೆಜಿ, ಬೆಳ್ಳಿ- 2.35 ಕೆಜಿ
ವಾಹನ- ಸ್ವಂತ ಕಾರು, ವಾಹನಗಳಿಲ್ಲ

ದೇವೇಗೌಡರ ಬಳಿ ಓಡಾಡಲು ಕಾರಿಲ್ಲ !

ದೇವೇಗೌಡರ ಬಳಿ ಓಡಾಡಲು ಕಾರಿಲ್ಲ !

ಮೈಸೂರು ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರ: ಸಹಕಾರಿ ಧುರೀಣ ಜಿಟಿ ದೇವೇಗೌಡ ಈ ಬಾರಿ ಜೆಡಿಎಸ್ ಕ್ಯಾಂಡಿಡೇಟ್. ಅವರ ಬಳಿ ಒಂದು ದ್ವಿಚಕ್ರ ವಾಹನವಿದೆ. ಆದರೆ ಒಂದು ಕಾರೂ ಇಲ್ಲ! ಅದೇ ಅವರ ಪತ್ನಿ, ಜಿಪಂ ಸದಸ್ಯೆ ಕೆ ಲಲಿತಾ ದೇವೇಗೌಡರ ಹೆಸರಲ್ಲಿ ಎರಡು ಬೆಲೆಬಾಳುವ ಕಾರುಗಳಿವೆ.

ಆದರೆ ದಂಪತಿ ಇಬ್ಬರೂ ಕೋಟ್ಯಧೀಪತಿಗಳೇ. ಗೌಡ ಹಾಗೂ ಅವರ ಪತ್ನಿ ಹೆಸರಲ್ಲಿರುವ ಚರಾಸ್ತಿ ಒಟ್ಟು ಮೌಲ್ಯ 1.84 ಕೋಟಿ ರೂ, ಸ್ಥಿರಾಸ್ತಿಯ ಒಟ್ಟು ಮೌಲ್ಯ 4.70 ಕೋಟಿ ರೂ.

ಘೋಷಿತ ಒಟ್ಟು ಆಸ್ತಿ ಮೌಲ್ಯದಲ್ಲಿ 50 ಲಕ್ಷ ರೂ. ಬೆಲೆಯ ಆಸ್ತಿ ಪಿತ್ರಾರ್ಜಿತ. ಗೌಡರು ತಮ್ಮ ಪುತ್ರ ಜಿಡಿ ಹರೀಶ್‌ಗೆ 99 ಲಕ್ಷ ರೂ ಹಾಗೂ ಮುನಿಯನ್‌ ಎಂಬುವವರಿಗೆ 7.45 ಲಕ್ಷ ರೂ ಸಾಲ ನೀಡಿದ್ದಾರೆ.

ಗೌಡರ ಸ್ವಗ್ರಾಮ ಇಲವಾಲ ತಾಲೂಕು ಗುಂಗ್ರಾಲ್‌, ರಟ್ನಹಳ್ಳಿ, ಕೆಆರ್‌ ನಗರ ತಾಲೂಕು ಚೌಕಹಳ್ಳಿಯಲ್ಲಿ 25 ಎಕರೆ ಅಧಿಕ ಕೃಷಿ ಭೂಮಿ ಇದೆ.

 ಬ್ರಹ್ಮಚಾರಿ ರಾಮದಾಸ್‌ ಬಳಿ ಸೂರಿಲ್ಲ-ಕಾರಿಲ್ಲ

ಬ್ರಹ್ಮಚಾರಿ ರಾಮದಾಸ್‌ ಬಳಿ ಸೂರಿಲ್ಲ-ಕಾರಿಲ್ಲ

ಮೈಸೂರು ನಗರದ ಬಾಡಿಗೆ ಮನೆ ನಿವಾಸಿ ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್‌ಗೆ ಮೈಸೂರಲ್ಲಿ ಸ್ವಂತ ಸೂರಿಲ್ಲ !

ಮೂರು ಬಾರಿ ಗೆದ್ದು, ಶಾಸಕರಾಗಿ, ಈ ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್‌ ತಮ್ಮ 33 ವಯಸ್ಸಿನಲ್ಲಿ 1994 ಚುನಾವಣೆಯಲ್ಲಿ ವಿಧಾನಸಭೆ ಪ್ರವೇಶಿಸುವ ಮೂಲಕ ಕಿರಿಯ ವಯಸ್ಸಿನ ಶಾಸಕರಲ್ಲಿ ಒಬ್ಬರಾಗಿದ್ದರು. ಅಂದು ಅವರ ಬಳಿ ಇದ್ದ ಬೈಕ್‌ ಇಂದಿಗೂ ಅವರ ಬಳಿ ಇದೆ.

ಇವರ ಹೆಸರಲ್ಲಿ ಬೆಂಗಳೂರು, ಮೈಸೂರು ವಿವಿಧ ಬ್ಯಾಂಕುಗಳಲ್ಲಿ 38.57 ಲಕ್ಷ ರೂ. ಇದೆ. ಎಲ್‌ಐಸಿ 6.34 ಲಕ್ಷ ರೂ., ಎಸ್‌ಬಿಐ ಎಂಟು ಲಕ್ಷ ರೂ. ಪಾಲಿಸಿ ಮಾಡಿಸಲಾಗಿದೆ.

ಬ್ರಹ್ಮಚಾರಿ ರಾಮದಾಸ್‌ ಬಳಿ 5.62 ಲಕ್ಷ ರೂ.ಮೌಲ್ಯದ 200 ಗ್ರಾಂ ಚಿನ್ನ, 1.80 ಲಕ್ಷ ರೂ.ಮೌಲ್ಯದ ನಾಲ್ಕು ಕೆಜಿ ಬೆಳ್ಳಿ ಇದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ದನಗೂರಿನಲ್ಲಿ 3.39.5 ಎಕರೆ ಭೂಮಿ ಇದೆ.

ಅಂಬರೀಷ್‌ ಬಳಿಯೂ ಸ್ವಂತ ವಾಹನವಿಲ್ಲ

ಅಂಬರೀಷ್‌ ಬಳಿಯೂ ಸ್ವಂತ ವಾಹನವಿಲ್ಲ

ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ
ಒಟ್ಟು ಆಸ್ತಿ- 4.22 ಕೋಟಿ ರೂ.
ಒಟ್ಟು ಚಿನ್ನದ ಮೌಲ್ಯ- 16.94 ಲಕ್ಷ ರೂ.
ವಾಹನ- ಸ್ವಂತ ವಾಹನಗಳಿಲ್ಲ. ಪತ್ನಿ ಬಳಿ ಇನ್ನೋವಾ ಇದೆ

ಯೋಗೀಶ್ವರ್‌ ವಿರುದ್ಧ ಕೋರ್ಟಿನಲ್ಲಿ 31 ಪ್ರಕರಣ

ಯೋಗೀಶ್ವರ್‌ ವಿರುದ್ಧ ಕೋರ್ಟಿನಲ್ಲಿ 31 ಪ್ರಕರಣ

ಒಟ್ಟು ಆಸ್ತಿ- 13.06 ಕೋಟಿ ರೂ
ಚಿನ್ನ- 1.72 ಕೆಜಿ, ಬೆಳ್ಳಿ - 20 ಕೆಜಿ
ವಾಹನ- ಯಾವುದೇ ವಾಹನಗಳಿಲ್ಲ
ನ್ಯಾಯಾಲಯದಲ್ಲಿ 31 ಪ್ರಕರಣಗಳಿವೆ

ರೇಣುಕಾ ಕೋಟಿ ಮೌಲ್ಯದ ಕಾಲೇಜು ಒಡೆಯ

ರೇಣುಕಾ ಕೋಟಿ ಮೌಲ್ಯದ ಕಾಲೇಜು ಒಡೆಯ

ಹೊನ್ನಾಳಿ ಕೆಜೆಪಿ ಅಭ್ಯರ್ಥಿ
ಒಟ್ಟು ಆಸ್ತಿ - 5.93 ಕೋಟಿ ರೂ.
1 ಕೋಟಿ ರೂ. ಮೌಲ್ಯದ ಕಾಲೇಜು ಕಟ್ಟಡವಿದೆ

ಭೈರತಿ ಬಸವರಾಜ್‌ ಬಳಿ ಕ್ವಿಂಟಾಲ್‌ ಬೆಳ್ಳಿ ಇದೆ

ಭೈರತಿ ಬಸವರಾಜ್‌ ಬಳಿ ಕ್ವಿಂಟಾಲ್‌ ಬೆಳ್ಳಿ ಇದೆ

ಬೆಂಗಳೂರು: ಕೆಆರ್ ಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಳಿ ಬರೋಬರಿ 96 ಕೆಜಿ. ಬೆಳ್ಳಿ ಹಾಗೂ 4 ಕೆಜಿ ಬಂಗಾರ ಇದೆ. ಎಲ್ಲ ಚಿನ್ನ ಮತ್ತು ಬೆಳ್ಳಿ ವಸ್ತುಗಳು ತಮ್ಮ ಹೆಸರಿನಲ್ಲೇ ಇದ್ದು, ಪತ್ನಿ ಹೆಸರಿನಲ್ಲಿ ಯಾವುದೇ ಒಡವೆ ಹೊಂದಿಲ್ಲ.ಬಸವರಾಜ್‌ ಒಟ್ಟು ಆಸ್ತಿ ಮೌಲ್ಯ 45.09 ಕೋಟಿ ರೂಪಾಯಿ. 20.28 ಕೋಟಿ ಚರಾಸ್ತಿ ಮತ್ತು 24.81 ಕೋಟಿ ರೂ. ಸ್ಥಿರಾಸ್ತಿ ಇದೆ.

ಇನ್ನೊಂದೆಡೆ ರಾಡೊ, ರೋಲ್ಕ್ ಕಂಪನಿ ವಾಚ್‌ಗಳಿವೆ. ಅಲ್ಲದೆ, ಎರಡು ಬೆಂಜ್ ಕಾರು ಸೇರಿದಂತೆ ಸುಮಾರು 1.62 ಕೋಟಿ ರೂ. ಮೌಲ್ಯದ ವಾಹನಗಳಿವೆ. ವಿವಿಧ ಬ್ಯಾಂಕ್‌ ಖಾತೆಗಳಲ್ಲಿ 6 ಕೋಟಿ ರೂ. ಠೇವಣಿ ಹೊಂದಿದ್ದಾರೆ. ಭೂ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಅವರು ಸುಮಾರು 9.08 ಕೋಟಿ ರೂ. ಸಾಲ ಕೊಟ್ಟಿದ್ದಾರೆ. ಮತ್ತೂಂದು ವಿಶೇಷ ಅಂದರೆ, ಪತ್ನಿ ಪದ್ಮಾವತಿ ಹೆಸರಿನಲ್ಲಿ ಜಂಟಿ ಖಾತೆಯಲ್ಲಿ 5 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ಈ ಹಣ ಹೊರತುಪಡಿಸಿದರೆ ಬಸವರಾಜು ತಮ್ಮ ಪತ್ನಿ ಹೆಸರಿನಲ್ಲಿ ಯಾವುದೇ ಚರ ಅಥವಾ ಸ್ಥಿರಾಸ್ತಿ ಹೊಂದಿಲ್ಲ.

ಬಿಎಸ್ಸಾರ್ ಪೂಜಾಗಾಂಧಿ ಲಕ್ಷಾಧೀಶ್ವರಿ:

ಬಿಎಸ್ಸಾರ್ ಪೂಜಾಗಾಂಧಿ ಲಕ್ಷಾಧೀಶ್ವರಿ:

ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದಿಂದ ರಾಯಚೂರು ನಗರ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ನಟಿ ಪೂಜಾ ಗಾಂಧಿ ಸಲ್ಲಿಸಿರುವ ಆಸ್ತಿ ಘೋಷಣಾ ಪತ್ರದಲ್ಲಿನ ಅಸ್ತಿಯ ವಿವರ ಹೀಗಿದೆ.
ನಗದು 16,06,206 ರೂ, 6.75 ಲಕ್ಷ ರೂ. ಮೌಲ್ಯದ 282 ಗ್ರಾಂ. ಚಿನ್ನ, ವಿವಿಧ ಬ್ಯಾಂಕ್‌, ಹಣಕಾಸು ಸಂಸ್ಥೆ, ವಿಮಾ ಕಂಪನಿ ಸೇರಿದಂತೆ ವಿವಿಧೆಡೆ ಹೂಡಿಕೆ ಮಾಡಲಾದ ಹಣ ಸೇರಿ ಒಟ್ಟು 38,29,829 ರೂ. ಚರಾಸ್ತಿ.
ಮನೆ, ವಾಣಿಜ್ಯ ಕಟ್ಟಡ, ಕೃಷಿ ಭೂಮಿ ಸೇರಿದಂತೆ ತಮ್ಮ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. ವಾಹನಕ್ಕಾಗಿ ಮುಂಬೈನ ಐಸಿಐಸಿಐ ಬ್ಯಾಂಕ್‌ನಲ್ಲಿ 2,01,216 ರೂ. ಸಾಲ ಸೇರಿದಂತೆ ವಿವಿಧೆಡೆ ಒಟ್ಟು 12,76,228 ರೂ. ಸಾಲ.

ಅನಿತಾ ಮೇಡಂ ಬಳಿ ನೂರಾರು ಕೋಟಿ:

ಅನಿತಾ ಮೇಡಂ ಬಳಿ ನೂರಾರು ಕೋಟಿ:

ಚನ್ನಪಟ್ಟಣ ಜೆಡಿ ಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಶತಕೋಟಿ ರೂ ಆಸ್ತಿಯ ಒಡತಿ. ಅವರ ಬಳಿ 118.83 ಕೋಟಿ ರೂ. ಆಸ್ತಿ ಇದೆಯಂತೆ.
ಜತೆಗೆ 1,300 ಗ್ರಾಂ ಚಿನ್ನಾಭರಣ, 17 ಕೆಜಿ ಬೆಳ್ಳಿ, 40 ಕ್ಯಾರೆಟ್ ಡೈಮಂಡ್ ಸಹ ಇದೆ. 64 ಕೋಟಿ ರೂ. ಸಾಲವನ್ನೂ ಪಡೆದಿದ್ದಾರೆ.

ದೇಶಪಾಂಡೆ ಆಸ್ತಿ 241 ಕೋಟಿ ರೂ.

ದೇಶಪಾಂಡೆ ಆಸ್ತಿ 241 ಕೋಟಿ ರೂ.

ಹಳಿಯಾಳ ಅಭ್ಯರ್ಥಿ ಮಾಜಿ ಸಚಿವ ದೇಶಪಾಂಡೆ ಚರಾಸ್ಥಿ ಹಾಗೂ ಸ್ತಿರಾಸ್ಥಿ ಮೊತ್ತ 241,15,74,762.
ಚರಾಸ್ಥಿ ಮೊತ್ತ 202,22,72,113 ರೂ. ಸ್ತಿರಾಸ್ಥಿ 38,93,2649 ರೂ. ದೇಶಪಾಂಡೆ ಹಾಗೂ ಅವರ ಪತ್ನಿ ರಾಧಾ ದೇಶಪಾಂಡೆ ಹೆಸರಿನಲ್ಲಿ ಸ್ತಿರಾಸ್ಥಿಗಳು, ಚರಾಸ್ಥಿಗಳು, ಸ್ವಯಾರ್ಜಿತ, ಪಿತ್ರಾರ್ಜಿತ ಹಾಗೂ ಹಿಂದೂ ಅವಿಭಕ್ತ ಕುಟುಂಬ ಆಸ್ತಿ ವಿವರವೂ ದಾಖಲಾಗಿದೆ.
2004ರ ಚುನಾವಣೆಯಲ್ಲಿ ದೇಶಪಾಂಡೆಯವರು 10 ಕೋಟಿ ರೂ. ಆಸ್ತಿ ಘೋಷಿಸಿದ್ದರು. 2008ರಲ್ಲಿ 145 ಕೋಟಿ ರೂ. ಆಸ್ತಿ ವಿವರ ಘೋಷಿಸಿದ್ದರು. 2013ರ ಚುನಾವಣೆಯಲ್ಲಿ ದೇಶಪಾಂಡೆಯವರ ಆಸ್ತಿ ಮೌಲ್ಯ 100 ಕೋಟಿ ರೂ. ಹೆಚ್ಚಾದಂತಾಗಿದೆ.

ನಂಬಿ, ಕತ್ತಿ ಸಾಹೇಬರ ಸವಾರಿಗೆ ವಾಹನವೇ ಇಲ್ಲ

ನಂಬಿ, ಕತ್ತಿ ಸಾಹೇಬರ ಸವಾರಿಗೆ ವಾಹನವೇ ಇಲ್ಲ

ಬೆಳಗಾವಿ ಜಿಲ್ಲೆ ಹುಕ್ಕೇರಿಯ ಉಮೇಶ್ ಕತ್ತಿ ಮತ್ತು ಅವರ ಅವಲಂಬಿತರ ಆಸ್ತಿ ಮೌಲ್ಯ 8 ಕೋಟಿ ರೂ. 2008ರಲ್ಲಿ 53.6 ಲಕ್ಷ ರೂ. ಮೌಲ್ಯದ ಚಿರಾಸ್ತಿ ಹೊಂದಿದ್ದರೆ ೀಗ ಚರಾಸ್ತಿ ಮೌಲ್ಯ 2.41 ಕೋಟಿಗೆ ಏರಿದೆ. ಕುತೂಹಲಕಾರಿ ಸಂಗತಿಯೆಂದರೆ ಕತ್ತಿ ಮತ್ತು ಅವರ ಆಪ್ತರ ಬಳಿ ವಾಹನವೇ ಇಲ್ಲ. ಕಳೆದ ಬಾರಿ 12.60 ಲಕ್ಷ ರೂ ಸಾಲ ಇತ್ತಂತೆ. ಈ ಬಾರಿ ಒಟ್ಟು 1.79 ಕೋಟಿ ರೂ. ಸಾಲ ಹೊಂದಿದ್ದಾರೆ.

ಯಡಿಯೂರಪ್ಪ ಆಸ್ತಿ ಹೆಚ್ಚಾಗುತ್ತಿದೆ.

ಯಡಿಯೂರಪ್ಪ ಆಸ್ತಿ ಹೆಚ್ಚಾಗುತ್ತಿದೆ.

ಕೆಜೆಪಿ ಅಧ್ಯಕ್ಷ, ಶಿಕಾರಿಪುರ ಅಭ್ಯರ್ಥಿ ಯಡಿಯೂರಪ್ಪ ಆಸ್ತಿ ಕಳೆದ 5 ವರ್ಷಗಳಲ್ಲಿ 2.37 ಕೋಟಿ ರೂ. ಹೆಚ್ಚಾಗಿದೆ. 5 ವರ್ಷಗಳ ಹಿಂದೆ 1.82 ಕೋಟಿ ರೂ. ಆಸ್ತಿ ಸಂಪಾದಿಸಿದ್ದರು. ಅವರ ಬಳಿ ಈಗ ಒಟ್ಟು 4.19 ಕೋಟಿ ರೂ. ಆಸ್ತಿ ಇದೆ. ಕಾರ್ಪೊರೇಷನ್ ಬ್ಯಾಂಕಿನಲ್ಲಿ 10.89 ಲಕ್ಷ ರೂ. ವಾಹನ ಸಾಲ ಹೊಂದಿದ್ದಾರೆ. ಗಮನಾರ್ಹವೆಂದರೆ ಯಡಿಯೂರಪ್ಪ ತಮ್ಮ ಮಕ್ಕಳಿಂದಲೇ 48.89 ಲಕ್ಷ ರೂ. ಸಾಲ ಪಡೆದಿದ್ದಾರೆ.

ಕುಮಾರಸ್ವಾಮಿ ಆಸ್ತಿ ಎಷ್ಟು ಗೊತ್ತಾ?

ಕುಮಾರಸ್ವಾಮಿ ಆಸ್ತಿ ಎಷ್ಟು ಗೊತ್ತಾ?

ರಾಮನಗರ ಅಭ್ಯರ್ಥಿ ಕುಮಾರಸ್ವಾಮಿ ಆಸ್ತಿ 136.48 ಕೋಟಿ ರೂ. ಚರಾಸ್ತಿ 108.48 ಕೋಟಿ. ಸ್ಥಿರಾಸ್ತಿ 28 ಕೋಟಿ ರೂ.

ಗೋವಿಂದರಾಜ ನಗರ ಪ್ರಿಯಕೃಷ್ಣ ಆಸ್ತಿ 815 ಕೋಟಿ

ಗೋವಿಂದರಾಜ ನಗರ ಪ್ರಿಯಕೃಷ್ಣ ಆಸ್ತಿ 815 ಕೋಟಿ

ದೇಶದ ಶ್ರೀಮಂತ ರಾಜಕಾರಣಿ. ಘಟಾನುಘಟಿ ರಾಜಕಾರಣಿಗಳಿಗೇ ಸಾಲ ನೀಡಬಲ್ಲರು. ಕಳೆದ ಚುನಾವಣೆಯಲ್ಲಿ ಇವರ ಆಸ್ತಿ 767.61 ಕೋಟಿ ರೂ. ಇತ್ತು. ಈಗ ಅದು 48 ಕೋಟಿ ರೂ. ನಷ್ಟೇ ಹೆಚ್ಚಾಗಿದೆ. ಸದ್ಯಕ್ಕೆ ಅವರಿಗೆ 777.70 ಕೋಟಿ ರೂ. ಸಾಲ ಇದೆಯಂತೆ.

English summary
Karnataka Assembly Election- Candidates Declare Assets through Affidavit submitted to Returning Officers. Some of the prominent candidates and their declared assets listed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X