ರಾಜ್ಯದ ಮುಕುಟ ಬೀದರ್ ಒಡೆಯ ಯಾರಾಗಲಿದ್ದಾರೆ?

ಪ್ರಮುಖ ಮೂರು ಪಕ್ಷಗಳ ಜೊತೆ ಈ ಬಾರಿ ಯಡಿಯೂರಪ್ಪ ಅವರ ಕೆಜೆಪಿ ಕೂಡಾ ಸೇರಲಿದೆ. ಬಿಎಸ್ ಆರ್ ಕಾಂಗ್ರೆಸ್ ಕೂಡಾ ತನ್ನ ಅದೃಷೃ ಪರೀಕ್ಷೆ ಮಾಡುತ್ತಿದ್ದು, ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ಅವರು ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಹಾಲಿ ಶಾಸಕರು: [2013 ಫಲಿತಾಂಶ: ಗೆದ್ದವರು, ಸೋತವರ ವಿವರ]
* ಬಸವಕಲ್ಯಾಣ: ಬಿಜೆಪಿ ಶಾಸಕ ಬಸವರಾಜ ಅಟ್ಟೂರ್ ಅವರು ರಾಜೀನಾಮೆ ನೀಡಿ ಕೆಜೆಪಿ ಸೇರಿದ್ದಾರೆ.
* ಹುಮ್ನಾಬಾದ್: ರಾಜಶೇಖರ ಪಾಟೀಲ (ಕಾಂಗ್ರೆಸ್)
* ಬೀದರ್ ದಕ್ಷಿಣ: ಬಂಡೆಪ್ಪ ಕಾಶಂಪುರ (ಜೆಡಿಎಸ್)
* ಬೀದರ್: ರಹೀಂ ಖಾನ್(ಕಾಂಗ್ರೆಸ್)
* ಭಾಲ್ಕಿ: ಈಶ್ವರ ಖಂಡ್ರೆ (ಕಾಂಗ್ರೆಸ್)
* ಔರಾದ್ (ಎಸ್ ಸಿ): ಪ್ರಭು ಚವ್ಹಾಣ (ಬಿಜೆಪಿ)
ಬೀದರ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಒಮ್ಮೆ ಬಿಎಸ್ಪಿಗೆ ಒಲಿದಿತ್ತು. ಈಗ ಕೆಜೆಪಿ ಹಾಗೂ ಬಿಜೆಪಿ ಜೊತೆ ಕಾಂಗ್ರೆಸ್ ಕ್ಷೇತ್ರ ಉಳಿಸಿಕೊಳ್ಳಲು ಹೋರಾಟ ನಡೆಸಿದೆ. ಬೀದರ್ ದಕ್ಷಿಣ ಬಹುತೇಕ ಜೆಡಿಎಸ್ ಪರ ಇದ್ದರೂ ಅಶೋಕ್ ಖೇಣಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಕುತೂಹಲ ಕೆರಳಿಸಿದೆ.
ಭಾಲ್ಕಿಯಲ್ಲಿ ಖಂಡ್ರೆ ಸೋದರರ ಕಾಳಗ ಗಮನ ಸೆಳೆದಿದ್ದು, ಭೀಮಣ್ಣ ಖಂಡ್ರೆ ಅವರ ಸೋದರನ ಮಗನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಈಶ್ವರ್ ಖಂಡ್ರೆ, ಪ್ರಕಾಶ್ ಖಂಡ್ರೆ ಸೋಲಿಸುವ ಹುಮ್ಮಸ್ಸಿನಲ್ಲಿ ಕೆಜೆಪಿ ಅಭ್ಯರ್ಥಿ ಡಿ.ಕೆ ಸಿದ್ರಾಮ್ ಕಣಕ್ಕಿಳಿದಿದ್ದಾರೆ.
ಹುಮ್ನಾಬಾದಿನಲ್ಲಿ ರಾಜಶೇಖರ್ ಪಾಟೀಲ್ ಹ್ಯಾಟ್ರಿಕ್ ನಿರೀಕ್ಷೆಯಿದೆ. ಬಸವಕಲ್ಯಾಣ ಬಿಜೆಪಿ ಕೈ ತಪ್ಪಿದರೂ ಅಚ್ಚರಿಯೇನಿಲ್ಲ. ಕೆಜೆಪಿ ಮೇಲುಗೈ ಸಾಧಿಸುವ ಉತ್ಸಾಹದಲ್ಲಿದೆ. ಔರಾದ್ ಗಡಿಭಾಗದ ಮತದಾರರಲ್ಲಿ ಗೊಂದಲವಿದ್ದರೂ ಪ್ರಭು ಚವ್ಹಾಣ್ ಮತ್ತೆ ಬಿಜೆಪಿ ಬಾವುಟ ಹಾರಿಸುವ ನಿರೀಕ್ಷೆಯಿದೆ.
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ಸಿ / ಪಕ್ಷೇತರರು/ಇತರೆ |
| 47 | ಬಸವಕಲ್ಯಾಣ | ಸಂಜಯ್ ಪಟವಾರಿ | ನಾರಾಯಣರಾವ್ ಬಿ | ಮಲ್ಲಿಕಾರ್ಜುನ ಖೂಬಾ | ಮಲ್ಲಮ್ಮ ಬಿ. ಆಟ್ಟೂರು | ಎಂಜಿ ಮುಳೆ (ಬಿಎಸ್ ಆರ್ಸಿ) + 17 |
| 48 | ಹುಮ್ನಾಬಾದ್ | ಪದ್ಮಾಕರ ಪಾಟೀಲ್ | ರಾಜಶೇಖರ್ ಬಸವರಾಜ್ ಪಾಟೀಲ್ | ನಸಿಮುದ್ದೀನ್ ಪಟೇಲ್ | ಅಶ್ರಫ್ ಪಟೇಲ್ | ಬ್ಯಾಂಕ್ ರೆಡ್ಡಿ+12 |
| 49 | ಬೀದರ್ ದಕ್ಷಿಣ | ಬಸವರಾಜ್ ಪಾಟೀಲ್ ಅಟ್ಟೂರ | ಮೀನಾಕ್ಷಿಭಾಯಿ | ಬಂಡೆಪ್ಪ ಕಾಶಂಪೂರ | ಡಾ. ಶೈಲೇಂದ್ರ ಬೆಲ್ದಾಳೆ | ಪ್ರವೀಣ್ ಕುಮಾರ್ (ಬಿಎಸ್ ಆರ್ಸಿ), ಅಶೋಕ್ ಖೇಣಿ (ಕಮಪ) + 20 |
| 50 | ಬೀದರ್ | ರಮೇಶ್ ಕುಮಾರ್ ಪಾಂಡೆ | ರಹೀಂ ಖಾನ್ | ಡಾ. ಅಮರ ಎರೋಳಕರ್ | ಗುರುಪಾದಪ್ಪ ನಾಗಮಾರಪಳ್ಳಿ | ಅನಿಲ ಗುಂಡಪ್ಪ+18 |
| 51 | ಭಾಲ್ಕಿ | ಪ್ರಕಾಶ್ ಖಂಡ್ರೆ | ಈಶ್ವರ್ ಖಂಡ್ರೆ | ಜನಾರ್ದನ ಬಿರಾದಾರ | ಸಿ.ಕೆ ಸಿದ್ರಾಮ್ | ಜಗನ್ನಾಥ ಜಮಾದಾರ + 12 |
| 52 | ಔರಾದ್ | ಪ್ರಭು ಚವ್ಹಾಣ್ | ವಿಜಯ್ ಕುಮಾರ್ ಗಾಯಕ್ವಾಡ್ | ಜಿ.ಎಂ ಯಾತನೂರ | ಧನಾಜಿ ಜಾದವ್ | ಶಿವಕುಮಾರ ಬೆಲ್ಲಾಳ (ಬಿಎಸ್ ಆರ್ಸಿ) +15 |












Click it and Unblock the Notifications