ಕ್ಷೇತ್ರ ಪರಿಚಯ : ರೇಷ್ಮೆ ಸೀರೆಗಳ ತವರೂರು ಮೊಳಕಾಲ್ಮೂರು
ಬಳ್ಳಾರಿ ಹಾಗೂ ಆಂಧ್ರಪ್ರದೇಶ ಗಡಿ ಭಾಗದ ಪುಟ್ಟ ತಾಲೂಕು ಮೊಳಕಾಲ್ಮೂರು ರೇಷ್ಮೆ ಸೀರೆಗಳ ತವರೂರು ಎಂದೆನಿಸಿಕೊಂಡಿದೆ. ನುಂಕಮಲೆ ಸಿದ್ದೇಶ್ವರ ಜಾತ್ರೆ ಇಲ್ಲಿನ ಪ್ರಸಿದ್ಧಿ.
ರೇಷ್ಮೆ ಅಲ್ಲದೆ, ನೆಲಗಡಲೆ (ಕಡಲೆ ಕಾಯಿ), ಜೋಳ, ರಾಗಿ, ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.
ಮಹಿಳಾ ಮತದಾರರು ಹೆಚ್ಚು ಕಡಿಮೆ ಪುರುಷರ ಮತದಾರರಷ್ಟೇ ಇರುವ ಈ ಕ್ಷೇತ್ರದಲ್ಲಿ ಈಗಿರುವ ಶಾಸಕ ತಿಪ್ಪೇಸ್ವಾಮಿ. ಇವರು ಬಿಎಸ್ ಆರ್ (ಶ್ರೀರಾಮುಲು ಪಕ್ಷ) ಪಕ್ಷದಿಂದ ಸ್ಪರ್ಧಿಸಿದ್ದರು.

ಆದರೆ, ಬಿಎಸ್ ಆರ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಿದ್ದರಿಂದಾಗಿ, ಅವರೀಗ ಬಿಜೆಪಿ ಬೆಂಬಲಿತ ಶಾಸಕರಷ್ಟೆ. ಹಾಗಾಗಿ, ಸರಿಯಾದ ಅನುದಾನವಿಲ್ಲದೆ ಕ್ಷೇತ್ರಕ್ಕೆ ಏನನ್ನೂ ಮಾಡಿಲ್ಲ ಎನ್ನಲಾಗುತ್ತಿದೆ. ಇದು ಅರ್ಥವಾಗದ ಜನತೆ ಇವರ ಬಗ್ಗೆ ಕೊಂಚ ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಧುಮುಕಲು ಹಾಲಿ ಜಿಪಂ ಸದಸ್ಯ ಡಾ. ಯೋಗೀಶ್ ಬಾಬು ಪ್ರಯತ್ನಿಸಿದ್ದಾರೆ. ಆದರೆ, ಇದೇ ಕ್ಷೇತ್ರದ ಹಳೇ ಹುಲಿ ಎನ್.ವೈ. ಗೋಪಾಲ ಕೃಷ್ಣ ಅವರು ಈ ಬಾರಿ ತಮ್ಮ ಸ್ವಕ್ಷೇತ್ರಕ್ಕೆ ಮರಳಲು ಇಚ್ಛಿಸಿದರೆ, ಯೋಗೀಶ್ ಬಾಬು ಅವರಿಗೆ ಕೊಂಚ ಹಿನ್ನಡೆಯಾಗಲಿದೆ.
ಕಾಂಗ್ರೆಸ್ಸಿನಿಂದ ನಟ ಕಮ್ ರಾಜಕಾರಣಿ ಶಶಿಕುಮಾರ್ ಅವರು ಸ್ಪರ್ಧಿಸುವುದು ಖಚಿತ. ಬಿಜೆಪಿ ಶಾಸಕ ಎಸ್ ತಿಪ್ಪೇಸ್ವಾಮಿ, ಜೆಡಿಎಸ್ ನಿಂದ ಎಲ್ ಸೋಮಣ್ಣ ಸ್ಪರ್ಧಿಸುವ ನಿರೀಕ್ಷೆಯಿದೆ.












Click it and Unblock the Notifications