ಕ್ಷೇತ್ರ ಪರಿಚಯ : ಚಿಕ್ಕೋಡಿ-ಸದಲಗಾದಲ್ಲಿ ಯಾರಿಗೆ ಗೆಲುವು?

ಚಿಕ್ಕೋಡಿ ಬೆಳಗಾವಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. ವಿಶಾಲ ವ್ಯಾಪ್ತಿ ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಒತ್ತಾಯ, ಹೋರಾಟ ನಡೆಯುತ್ತಿದೆ.

ಸಹಕಾರಿ, ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬೆಳಗಾವಿ ರಾಜ್ಯದಲ್ಲಿಯೇ ಅತಿ ದೊಡ್ಡ ಜಿಲ್ಲೆ. 2 ಲೋಕಸಭಾ ಕ್ಷೇತ್ರ. 18 ವಿಧಾನಸಭಾ ಕ್ಷೇತ್ರ, ಎರಡು ವಿಧಾನಪರಿಷತ್ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ರಾಜಕೀಯವಾಗಿ ಪ್ರಬಲವಾಗಿದೆ.

ಚಿಕ್ಕೋಡಿ ಸ್ವತಂತ್ರ ಶೈಕ್ಷಣಿಕ ಜಿಲ್ಲೆ. ಆರೋಗ್ಯ, ಅಬಕಾರಿ, ಕಂದಾಯ, ಲೋಕೋಪಯೋಗಿ, ಪಂಚಾಯತ್ ರಾಜ್, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿ ಸೇರಿದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹೊಂದಿದೆ. ಆದರೆ, ಇನ್ನೂ ಜಿಲ್ಲಾ ಕೇಂದ್ರವಾಗಿಲ್ಲ.

ಚಿಕ್ಕೋಡಿಯಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಅನೇಕ ಸಕ್ಕರೆ ಕಾರ್ಖನೆಗಳು ಇಲ್ಲಿವೆ. ಕನ್ನಡ ಆಡಳಿತ ಭಾಷೆಯಾದರೂ, ಚಿಕ್ಕೋಡಿಯಲ್ಲಿ ಹಿಂದಿ, ಮರಾಠಿ ಮಾತನಾಡುವ ಅನೇಕರು ಸಿಗುತ್ತಾರೆ.

Karnataka assembly election 2018 : Chikkodi-Sadalga constituency profile

'ಚಿಕ್ಕೋಡಿ ಜಿಲ್ಲಾ ಕೇಂದ್ರವಾಗಬೇಕು' ಎಂಬುದು ಈ ಭಾಗದ ಜನರ ಬಹುದಿನದ ಬೇಡಿಕೆ. ಆದರೆ, ಇನ್ನೂ ಅದು ಈಡೇರಿಲ್ಲ.

2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ 102,237 ಮತಗಳನ್ನು ಗೆಲುವು ಸಾಧಿಸಿದ್ದರು. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2014ರ ಆಗಸ್ಟ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ 94,636 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಮಹಾಂತೇಶ ಕವಟಗಿಮಠ 62816 ಮತಗಳನ್ನು ಪಡೆದಿದ್ದರು.

2018ರ ಚುನಾವಣಾ ಕಣದಲ್ಲಿ ಬಿಜೆಪಿಯಿಂದ ಅಣ್ಣಾ ಸಾಹೇಬ್ ಜೊಲ್ಲೆ, ಕಾಂಗ್ರೆಸ್‌ನಿಂದ ಗಣೇಶ್ ಹುಕ್ಕೇರಿ ಅಭ್ಯರ್ಥಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+