ಬಳ್ಳಾರಿ ಗ್ರಾಮೀಣ ಕದನ: ರೆಡ್ಡಿ ಬಣಕ್ಕೆ ಕಾಂಗ್ರೆಸ್ ಸವಾಲು
ಕಳೆದ ಚುನಾವಣೆಯಲ್ಲಿ ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ಸಿನ ಎನ್.ವೈ. ಗೋಪಾಲಕೃಷ್ಣ. ಇವರು ಮೂಲತಃ ಮೊಳಕಾಲ್ಮೂರು ಕ್ಷೇತ್ರದ ನಾಯಕ. ಚಿತ್ರದುರ್ಗದಲ್ಲಿ ಹಿಂದೆ ಸಂಸದರಾಗಿದ್ದ ಎನ್.ವೈ. ಹನುಮಂತಪ್ಪ ಅವರ ಸಹೋದರ.
2013ರ ವಿಧಾನಸಭೆ ಚುನಾವಣೆಗೂ ಮುನ್ನ ಇಲ್ಲಿ ಶ್ರೀರಾಮುಲು ಅವರೇ ಶಾಸಕರಾಗಿದ್ದರು. ಇಡೀ ರೆಡ್ಡಿ ಬಣ ಈಗ ಬಿಜೆಪಿ ಪಾಳಯಕ್ಕೆ ಹಿಂದಿರುಗಿರುವುದರಿಂದ ಶ್ರೀರಾಮುಲು ಅವರ ಬೆಂಬಲಿತ ಅಭ್ಯರ್ಥಿಗೆ ಗೆಲುವು ಖಾತ್ರಿ ಎಂದು ಸುಲಭಕ್ಕೆ ಹೇಳಲಾಗದು. ಕಳೆದ ಬಾರಿ ಬಿಜೆಪಿ ಓಬಳೇಶ್ ಅವರು ನಿಂತು ಸೋಲು ಕಂಡಿದ್ದರು.

ಆದರೆ, ಕಳೆದ ಚುನಾವಣೆ ವೇಳೆ, ಅವರು ಬಿಎಸ್ ಆರ್ ಕಾಂಗ್ರೆಸ್ ಮೂಲಕ ಸಂಸತ್ ಚುನಾವಣೆಗೆ ನಿಂತಿದ್ದರಿಂದಾಗಿ, ಬಿಜೆಪಿ ಪರವಾಗಿ ಎಸ್ ಟಿ ನಾಯಕರಲ್ಲೊಬ್ಬರನ್ನೇ (ಆಗ ಅದು ಎಸ್ ಟಿ ಮೀಸಲು ಕ್ಷೇತ್ರವಾಗಿತ್ತು) ಕಣಕ್ಕಿಳಿಸಬೇಕಿದ್ದರಿಂದಾಗಿ ಶ್ರೀರಾಮುಲು ಅವರು ಎನ್.ವೈ. ಗೋಪಾಲ ಕೃಷ್ಣ ಅವರನ್ನು ಕಣಕ್ಕಿಳಿಸಿದ್ದರು. ಹಾಗಾಗಿ, ಇಲ್ಲಿ ಎನ್.ವೈ. ಗೋಪಾಲ ಕೃಷ್ಣ ಅವರು ಗೆಲುವು ಸಾಧಿಸಿದ್ದರು.
ಇದೀಗ, ಸಂಸದ ಶ್ರೀರಾಮುಲು ಅವರು ರಾಜ್ಯ ರಾಜಕೀಯಕ್ಕೆ ಮರಳಲು ನಿರ್ಧರಿಸಿರುವುದರಿಂದ, ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಹಾಗಾಗಿ, ಈ ಕ್ಷೇತ್ರದಲ್ಲಿ ಅವರ ಪ್ರಾಬಲ್ಯ ಹೆಚ್ಚಾಗಿರುವುದು ಹಾಗೂ ಇಡೀ ರೆಡ್ಡಿ ಬಣ ಈಗ ಬಿಜೆಪಿ ಪಾಳಯಕ್ಕೆ ಹಿಂದಿರುಗಿರುವುದರಿಂದ ಶ್ರೀರಾಮುಲು ಅವರು ಇಲ್ಲಿ ಗೆಲವು ಸಾಧಿಸುವುದು ದಿಟ ಎಂದು ಹೇಳಲಾಗುತ್ತಿದೆ. ಆದರೆ, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ. ನಾಗೇಂದ್ರ ಅವರು ಸ್ಪರ್ಧೆ ಮಾಡುವ ಸಾಧ್ಯತೆಯಿದ್ದು, ಶ್ರೀರಾಮುಲು ಬದಲಿಗೆ ಬಿಜೆಪಿಯಿಂದ ಸಣ್ಣ ಫಕೀರಪ್ಪ ನಿಲ್ಲುವ ನಿರೀಕ್ಷೆಯೂ ಇದೆ. ಹೀಗಾಗಿ, ಕದನ ಕುತೂಹಲ ಕೆರಳಿಸಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications