ಕ್ಷೇತ್ರ ಪರಿಚಯ : ಸಕ್ಕರೆ ಪೇಡದ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಅಥಣಿ ಬೆಳಗಾವಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. ಕೃಷ್ಣಾ ನದಿಯು ತಾಲೂಕಿನ ಉದ್ದಕ್ಕೂ ಹರಿಯುತ್ತದೆ. ಕ್ಷೇತ್ರದ ಜನರು ವ್ಯವಸಾಯವನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಕಬ್ಬು ಇಲ್ಲಿನ ಪ್ರಮುಖ ಬೆಳೆ.
ರೈತರು ಕಬ್ಬನ್ನು ಹೆಚ್ಚಾಗಿ ಬೆಳೆಯುವುದರಿಂದ ಕ್ಷೇತ್ರದಲ್ಲಿ 4 ಸಕ್ಕರೆ ಕಾರ್ಖನೆಗಳಿವೆ. ಶೈಕ್ಷಣಿಕವಾಗಿ ಸಹ ಅಥಣಿ ಹೆಚ್ಚು ಅಭಿವೃದ್ಧಿ ಹೊಂದಿದೆ. ಕ್ಷೇತ್ರದ ವ್ಯಾಪಿಯಲ್ಲಿನ ಐನಾಪುರ ಪ್ರಸಿದ್ಧ ಗ್ರಾಮವಾಗಿದೆ. ಇಲ್ಲಿ ಶುದ್ಧವಾದ ಹಾಲನ್ನು ಕಾಯಿಸಿ, ಸಕ್ಕರೆ ಬೆರೆಸಿ ಪೇಡ ತಯಾರಿಸಲಾಗುತ್ತದೆ.
ಕೃಷ್ಣಾ ನದಿಯ ನೀರನ್ನು ಬಳಸಿಕೊಂಡು ದ್ರಾಕ್ಷಿ, ಹತ್ತಿ, ಜೋಳ, ಗೋಧಿ, ಸೂರ್ಯಕಾಂತಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ, ಪ್ರಮುಖವಾದ ಬೆಳೆ ಕಬ್ಬು. ಬೆಳಗಾವಿ ಜಿಲ್ಲೆಯಲ್ಲಿ 16ಕ್ಕೂ ಅಧಿಕ ಸಕ್ಕರೆ ಕಾರ್ಖನೆಗಳಿವೆ, ಇವುಗಳಲ್ಲಿ 4 ಕಾರ್ಖನೆಗಳು ಅಥಣಿಯಲ್ಲಿವೆ.

ರಾಜಕೀಯವಾಗಿ ಬಿಜೆಪಿಯ ಲಕ್ಷಣ ಸವದಿ ಕ್ಷೇತ್ರದ ಶಾಸಕರು. ಈ ಬಾರಿಯ ಚುನಾವಣೆಯಲ್ಲಿಯೂ ಅವರೇ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಮಹೇಶ್ ಈರಣ್ಣ ಗೌಡ, ಜೆಡಿಎಸ್‌ನಿಂದ ಗಿರೀಶ್ ಭೂತಾಳೆ ಕಣದಲ್ಲಿದ್ದಾರೆ.
2013ರ ಚುನಾವಣೆಯಲ್ಲಿ ಬಿಜೆಪಿಯ ಲಕ್ಷಣ ಸವದಿ ಅವರು 74,299 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಮಹೇಶ್ ಈರಣ್ಣ ಗೌಡ ಅವರು 50,528 ಮತ, ಜೆಡಿಎಸ್‌ನ ಸದಾಶಿವ ಅವರು 15,204ಮತಗಳನ್ನು ಪಡೆದಿದ್ದರು.












Click it and Unblock the Notifications