ಅರಸೀಕೆರೆ: ಹೊಯ್ಸಳ ಕಾಲದ ವೈವಿಧ್ಯಮಯ ಕ್ಷೇತ್ರ

Posted By:
Subscribe to Oneindia Kannada

ಹೊಯ್ಸಳ ಕಾಲದಲ್ಲಿ ಎರೆಯಂಗನ ಪಟ್ಟದರಸಿ ಮಹಾದೇವಿ ಕೆರೆ ಕಟ್ಟಿಸಿದ ಊರು ಇದು. ಐತಿಹಾಸಿಕ, ಧಾರ್ಮಿಕ ಕ್ಷೇತ್ರ. ಇಲ್ಲಿನ ತೆಂಗಿನಕಾಯಿ ಬಹು ಜನಪ್ರಿಯ.

ಬೆಟ್ಟ ಗುಡ್ಡಗಳು, ಕುರುಚಲು ಕಾಡು ಹೊಂದಿರುವ ಅರಸೀಕೆರೆಯಲ್ಲಿ ರಾಗಿ, ಮೆಣಸಿನಕಾಯಿ, ಎಣ್ಣೆಕಾಳು, ಜೋಳ ಪ್ರಮುಖ ಬೆಳೆಗಳು. ವೇದಾವತಿ ನದಿ ಅಲ್ಲದೆ ಕ್ಷೇತ್ರದೆಲ್ಲೆಡೆ ದೊಡ್ಡ ಕೆರೆಗಳಿರುವುದರಿಂದ ನೀರಾವರಿ ಸಮಸ್ಯೆ ಇಲ್ಲ.

ಅಮೃತ್ ಮಹಲ್ ಕಾವಲ್ ಸೇರಿದಂತೆ ಉತ್ತಮ ತಳಿಯ ದನಕರುಗಳ ಸಾಕಣೆ, ಕುರಿ ಸಾಕಣೆ ಕೂಡಾ ಪ್ರಮುಖವಾಗಿವೆ. ಈ ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯತರು ಹಾಗೂ ಲಿಂಗಾಯತ ಉಪಜಾತಿಯವರನ್ನು ಹೆಚ್ಚಾಗಿ ಹೊಂದಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಕೂಡಾ ಪ್ರಮುಖ ಸ್ಪರ್ಧೆ ನೀಡಲು ಮುಂದಾಗಿದೆ.

2013 ಫಲಿತಾಂಶ: ಗೆದ್ದವರು, ಸೋತವರ ವಿವರ

Karnataka Assembly Election 2018: Arsikere constituency profile

ಬಾಣಾವರ, ಗರುಡನಗಿರಿ, ಹಾರನಹಳ್ಳಿ, ಹುಲ್ಲೆಕೆರೆ ಮತ್ತು ಜಾವಗಲ್ಲು ಸೇರಿದಂತೆ ಅರಸೀಕೆರೆಯ ತುಂಬಾ ಹೊಯ್ಸಳ ಶೈಲಿ ದೇಗುಲಗಳಿವೆ. ಮಾಲೆಕಲ್ಲು ತಿರುಪತಿ, ಜಾವಗಲ್ ನರಸಿಂಹ ದೇಗುಲ, ಲಕ್ಷ್ಮಿಪುರದ ಮಹಾಗಣಪತಿ, ಜೇನುಕಲು ಸಿದ್ದೇಶ್ವರ ಸ್ವಾಮಿ, ಬಾಣಾವರದ ತಿಮ್ಮಪ್ಪ ಸ್ವಾಮಿ ದೇಗುಲ ಹೀಗೆ ಅನೇಕ ಧಾರ್ಮಿಕ ಕೇಂದ್ರಗಳನ್ನು ಹೊಂದಿದೆ.

ಅರಕಲಗೂಡು ಕ್ಷೇತ್ರ: ಲಿಂಗಾಯತ ಉಪಜಾತಿಗಳೇ ಆಧಾರ

ಅರಸೀಕೆರೆ ತೆಂಗು ಬೆಳೆಯ ಪ್ರಮುಖ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿದೆ. ರಸ್ತೆ, ರೈಲು ಸಂಪರ್ಕ ಸಮರ್ಪಕವಾಗಿದ್ದರೂ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ. ರಸ್ತೆ ರಿಪೇರಿ ಕಾರ್ಯ ನಡೆಯುತ್ತಲೇ ಇರುತ್ತದೆ. ಉತ್ತಮ ವೈದಕೀಯ ಸೌಲಭ್ಯಕ್ಕೆ ಅಕ್ಕ ಪಕ್ಕದ ಜಿಲ್ಲೆಯನ್ನು ಆಶ್ರಯಿಸಬೇಕಾಗಿದೆ. ಹೋಟೆಲ್, ವಸತಿ ವ್ಯವಸ್ಥೆ ಕೂಡಾ ಏಳಿಗೆ ಕಂಡಿಲ್ಲ.

ಕ್ಷೇತ್ರ ಪರಿಚಯ: ಹಾಸನ-ಒಕ್ಕಲಿಗರ ಓಲೈಕೆಯಲ್ಲಿ ಗೆದ್ದವರಿಗೆ ಗೆಲುವು

ಅರಸೀಕೆರೆಯಲ್ಲಿ ಕಳೆದ ಬಾರಿ ಜೆಡಿಎಸ್ ನ ಕೆಎಂ ಶಿವಲೀಂಗೇಗೌಡ(76579) ಅವರು ಅವರು ಕಾಂಗ್ರೆಸ್ಸಿನ ಬಿ ಶಿವರಾಂ(46948) ವಿರುದ್ಧ ಉತ್ತಮ ಅಂತರದಲ್ಲಿ ಜಯ ದಾಖಲಿಸಿದ್ದರು.

ಈ ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯತರು ಹಾಗೂ ಲಿಂಗಾಯತ ಉಪಜಾತಿಯವರನ್ನು ಹೆಚ್ಚಾಗಿ ಹೊಂದಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಕೂಡಾ ಪ್ರಮುಖ ಸ್ಪರ್ಧೆ ನೀಡಲು ಮುಂದಾಗಿದ್ದು, ಯಡಿಯೂರಪ್ಪ ಅವರ ಆಪ್ತರೊಬ್ಬರು ಈ ಬಾರಿ ಕಣಕ್ಕಿಳಿದರೂ ಅಚ್ಚರಿಯೇನಿಲ್ಲ. ಹೀಗಾಗಿ, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Arsikere assembly constituency of Hassan. Get election news from Arsikere. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ