ಅರಕಲಗೂಡು ಕ್ಷೇತ್ರ: ಲಿಂಗಾಯತ ಉಪಜಾತಿಗಳೇ ಆಧಾರ
ಅರೆಮಲೆನಾಡು ಪ್ರದೇಶವಾದ ಅರಕಲಗೂಡು ಕನ್ನಡದ ಅಧ್ವರ್ಯು ಅ.ನ. ಕೃಷ್ಣರಾಯರ ಹುಟ್ಟೂರು.ಕಾವೇರಿ ತೀರದಲ್ಲಿರುವ ರಾಮನಾಥಪುರ, ಗೌತಮ ಋಷಿಗೆ ಅರ್ಕೇಶ್ವರ ಒಲಿದ ತಾಣ ಇದಾಗಿದೆ. ಕೊಡಗು, ಮೈಸೂರಿಗೆ ಹೊಂದಿಕೊಂಡಂತಿರುವ ಕ್ಷೇತ್ರ ಇದಾಗಿದೆ.
ಭತ್ತ, ತೆಂಗು, ಅಡಿಕೆ, ತಂಬಾಕು, ಆಲೂಗಡ್ಡೆ ಈ ತಾಲೂಕಿನ ಪ್ರಮುಖ ಬೆಳೆ. ಒಕ್ಕಲಿಗ, ಲಿಂಗಾಯತ, ಕುರುಬ, ಲಿಂಗಾಯತ ಉಪಜಾತಿಗಳಾದ ಸಾದರ, ನೊಣಬ, ಬಣಜಿಗರ ಮತಗಳನ್ನು ಸೆಳೆಯಲು ಮೂರು ಪಕ್ಷಗಳು ತಂತ್ರಗಾರಿಕೆ ಮುಂದುವರೆಸಿವೆ.

ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪಶುಸಂಗೋಪನಾ ಸಚಿವ ಅರಕಲಗೂಡು ಮಂಜು ಅವರು ಈ ಬಾರಿ ಕೂಡಾ ಜಯಭೇರಿ ಬಾರಿಸುವ ಉತ್ಸಾಹದಲ್ಲಿದ್ದಾರೆ.
ಕಳೆದ ಬಾರಿ ಎ. ಟಿ ರಾಮಸ್ವಾಮಿ ಅವರನ್ನು ದೇವೇಗೌಡರ ಕುಟುಂಬದ ವಿರುದ್ಧ ಭಾರಿ ವಿರೋಧ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಕಳೆದ ಬಾರಿ ಎ. ಮಂಜು(61369) ಅವರು ಜೆಡಿಎಸ್ ನ ಎ.ಟಿ ರಾಮಸ್ವಾಮಿ (48802) ಅವರನ್ನು 8 ಸಾವಿರ ಅಂತರದಿಂದ ಸೋಲಿಸಿದ್ದರು.
ಆದರೆ, ಬಿಜೆಪಿ ಈ ಬಾರಿ ಹೇಗಾದರೂ ಅರಕಲಗೂಡು ಕ್ಷೇತ್ರ ಪಡೆಯಬೇಕು ಎಂಬ ನಿಟ್ಟಿನಲ್ಲಿ ತನ್ನ ಕಾರ್ಯತಂತ್ರ ರೂಪಿಸುತ್ತಿದೆ. ಪಕ್ಷೇತರರಾಗಿದ್ದ ಯೋಗ ರಮೇಶ್, ಕೆಜೆಪಿಯಲ್ಲಿದ್ದ ಪುಟ್ಟಸ್ವಾಮಿ ಅವರು ಈಗ ಬಿಜೆಪಿ ಪರ ನಿಂತಿದ್ದಾರೆ. ಇವರಿಬ್ಬರು ಸಹಮತದಿಂದ ಎ ಮಂಜು ವಿರುದ್ಧ ನಿಂತರೆ ಕಾಂಗ್ರೆಸ್ಸಿಗೆ ಕಷ್ಟವಾಗಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಸಮರದ ಲಾಭವನ್ನು ಬಿಜೆಪಿ ಪಡೆಯಲು ಯತ್ನಿಸುತ್ತಿದೆ.
ಒಕ್ಕಲಿಗ, ಲಿಂಗಾಯತ, ಲಿಂಗಾಯತ ಉಪಜಾತಿಗಳಾದ ಸಾದರ, ನೊಣಬ, ಬಣಜಿಗರ ಮತಗಳನ್ನು ಸೆಳೆಯಲು ಮೂರು ಪಕ್ಷಗಳು ತಂತ್ರಗಾರಿಕೆ ಮುಂದುವರೆಸಿವೆ.
ಕೊಣನೂರು ಹ್ಯಾಂಗಿಂಗ್ ಬ್ರಿಡ್ಜ್, ರಾಮನಾಥಪುರದ ದೇಗುಲಗಳು, ಗೊರೂರು ಅಣೆಕಟ್ಟು, ಶೆಟ್ಟಿಹಳ್ಳಿ ಚರ್ಚ್, ನರಸಿಂಹಸ್ವಾಮಿ, ಸುಬ್ರಹ್ಮಣ್ಯ ದೇಗುಲ ಇಲ್ಲಿನ ಆಕರ್ಷಣೀಯ ಪ್ರವಾಸಿ ತಾಣಗಳು.
2001ರ ಜನಗಣತಿಯಂತೆ ಅರಕಲಗೂಡಿನಲ್ಲಿ 15,184 ಮಂದಿ ಇದ್ದಾರೆ. ಸಾಕ್ಷರತೆ ಪ್ರಮಾಣ ಶೇ 65ರಷ್ಟಿದೆ.












Click it and Unblock the Notifications